ಹಳೆಯಂಗಡಿ ತ್ಯಾಜ್ಯ, ದುರ್ವಾಸನೆಯುಕ್ತ ನೀರು

ಮೂಲ್ಕಿ: ಇಡೀ ದೇಶದಲ್ಲಿ ಸ್ವಚ್ಛತಾ ಆಂದೋಲನ ನಡೆಯುತ್ತಿದ್ದರೂ ಹಳೆಯಂಗಡಿ ಗ್ರಾಮಪಂಚಾಯತಿ ಮಾತ್ರ ಇದಕ್ಕೂ ತನಗೂ ಸಂಬಂದವಿಲ್ಲ ಎಂದು ತೆಪ್ಪಗೆ ಕುಳಿತಿದೆ ಎಂದು ಗ್ರಾಮಸ್ಥರೇ ಆರೋಪಿಸಿದ್ದಾರೆ. ಇದಕ್ಕೆ ಕಾರಣ ಹೆದ್ದಾರಿ ಬದಿ ಹರಿಯುತ್ತಿರುವ ಗಲೀಜು ನೀರು ಮತ್ತು ತ್ಯಾಜ್ಯ ಪ್ರತ್ಯಕ್ಷವಾಗಿ ಕಾಣಸಿಗುತ್ತಿದ್ದು ಗ್ರಾಮಸ್ಥರನ್ನು ಆಕ್ರೋಶಗೊಳಿಸಿದೆ.
ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ ಬದಿಯ ಉಡುಪಿ ಕಡೆಗೆ ಹೋಗುವ ಬಸ್ಸು ನಿಲ್ದಾಣದ ಬಳಿಯಲ್ಲಿ ಪ್ರತೀ ಬಾರಿ ಸಾರ್ವಜನಿಕರು ಕಸ ಬಿಸಾಡಿ ಹೋಗುತ್ತಿದ್ದು ಇದನ್ನು ವಿಲೇವಾರಿ ಮಾಡುವಲ್ಲಿ ಪಂಚಾಯತಿ ಉದಾಸೀನ ತೋರುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಪಂಚಾಯತಿ ಮೂಲಗಳ ಪ್ರಕಾರ ಇಲ್ಲಿ ತ್ಯಾಜ್ಯ ಹಾಕುವುದನ್ನೇ ನಿರ್ಬಂದಿಸಲಾಗಿದೆ ಗ್ರಾಮಸ್ಥರು ಪಂಚಾಯತಿಯೊಂದಿಗೆ ಸಹಕರಿಸುತ್ತಿಲ್ಲ ಎಂದು ಹೇಳುತ್ತಿದೆ.
ಸಂಗ್ರಹವಾಗಿರುವ ದುರ್ವಾಸನೆಯ ನೀರಿಗೆ ಮೋಕ್ಷ ಕೊಡಿ
ಹೆದ್ದಾರಿಯಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಬದಿಯಲ್ಲಿ ಹೊಸ ಕಟ್ಟಡಗಳನ್ನು ಕಟ್ಟುತ್ತಿದ್ದು ಸ್ಥಳದಲ್ಲಿ ತ್ಯಾಜ್ಯ, ದುರ್ವಾಸನೆಯ ನೀರು ಹಾಗೂ ಪ್ಲಾಸ್ಟಿಕ್ ಒಟ್ಟು ಸೇರಿ ಅಸಹ್ಯಕರವಾಗಿದೆ. ಸ್ವಚ್ಛ ನಗರ ಎಂದು ಆರನೇ ಸ್ಥಾನದಲ್ಲಿರುವ ಮಂಗಳೂರು ತಾಲ್ಲೂಕು ಮೊದಲನೇ ಸ್ಥಾನದಲ್ಲಿ ಬರಬೇಕೆಂದು ಎಲ್ಲರ ಆಶಯ ಇದಕ್ಕಾಗಿ ಪ್ರಧಾನಿಯವರ ಆಶಯದಂತೆ ಸ್ವಚ್ಛತಾ ಅಭಿಯಾನ ಎಲ್ಲೆಡೆ ನಡೆಯುತ್ತಿದೆ. ‘ನನ್ನ ಕಸ ನನ್ನ ಜವಾಬ್ದಾರಿ’ ಎಂಬ ಪ್ರತಿಜ್ಞೆ ಹಳೆಯಂಗಡಿ ಜನತೆಗೆ ಯಾಕೆ ತಿಳಿಯುತ್ತಿಲ್ಲ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಹಾಗೆಯೇ ಬದಿಯಲ್ಲೇ ಬಹುಮಹಡಿ ಕಟ್ಟುತ್ತಿರುವ ಕಟ್ಟಡ ಮಾಲಕರಿಗೂ ಹಳೆಯಂಗಡಿ ಪಂಚಾಯತಿ, ಜಿಲ್ಲಾಧಿಕಾರಿಗಳು ದುರ್ವಾಸನೆಯುಕ್ತ ನೀರು ಸಂಗ್ರಹವಾಗುವುದಕ್ಕೆ ನೋಟೀಸು ನೀಡಿ ವಿವರಣೆ ಕೇಳಬೇಕಾಗಿದೆ.

Puneethakrishna 

Mulki-10111401

Comments

comments

Comments are closed.

Read previous post:
Kinnigoli--08111403
ಬಿಜೆಪಿ ಪ್ರಶಿಕ್ಷಣ ಪರಿಚಯ ವರ್ಗ ಕಾರ್ಯಾಗಾರ

ಕಿನ್ನಿಗೋಳಿ: ಸಮೃದ್ಧ ಸ್ವಾಭಿಮಾನಿ ಶಕ್ತಿಶಾಲಿ ಭಾರತ ನಿರ್ಮಾಣ ಮಾಡಬೇಕಾದರೆ ಪರಿಪಕ್ವ ಯೋಚನೆ ಯೋಜನೆ ಚಿಂತನ ಮಂಥನ ನಡೆಸಿ ಕಾರ್ಯೋನ್ಮುಖರಾಗಬೇಕು ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು....

Close