ಮೂಲ್ಕಿ: ಗ್ರಾಮೀಣ ಜನರಿಗೆ ವಿದ್ಯೆಗೆ ಪ್ರ್ರೋತ್ಸಾಹ

ಮೂಲ್ಕಿ: ಅವಕಾಶವನ್ನು ಉಪಯೋಗಿಸುವ ಜೊತೆಗೆ ಸಮಾಜದ ಉನ್ನತಿಗಾಗಿ ಶ್ರಮವಹಿಸಿದ ವ್ಯಕ್ತಿಗಳು ಪ್ರಾತಃ ಸ್ಮರಣೀಯರಾಗುತ್ತಾರೆ ಎಂದು ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದರು.
ಮೂಲ್ಕಿ ಬಂಟರ ಭವನದಲ್ಲಿ 202-14-15 ಸಾಲಿನ ಮೂಲ್ಕಿ ಸಂದರರಾಮ ಶೆಟ್ಟಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಗ್ರಾಮೀಣ ಜನರಿಗೆ ವಿದ್ಯೆಗೆ ಪ್ರ್ರೋತ್ಸಾಹ ವಿದ್ಯಾವಂತರಿಗೆ ಉದ್ಯೋಗ ವ್ಯವಹಾರದಲ್ಲಿ ಅಪ್ರತಿಮ ಸಾಧಕರಾದ ಸುಂದರರಾಮ ಶೆಟ್ಟಿಯವರು ಪ್ರಾತಃ ಸ್ಮರಣೀಯರು ಎಂದರು.
ಆಧುನಿಕ ತಂತ್ರಜ್ಞಾನಗಳು ಹೆಚ್ಚಾದಂತೆ ಜನ ಅಂತರ್‌ಮುಖಿಗಳಾಗಿ ಬಾಹ್ಯ ಪ್ರಪಂಚವನ್ನೇ ಮರೆತು ತನ್ನತನ ವನ್ನು ಕಳೆದುಕೊಳ್ಳುವ ಸ್ಥಿತಿ ಇದೆ, ವಿದ್ಯೆಗೆ ಪ್ರೋತ್ಸಾಹದ ಜೋತೆಗೆ ನೆರೆಹೊರೆ ಸಮಾಜ ಸಹಜೀವನಗಳು ಮತ್ತು ಸಂತೋಷ ಹಾಗೂ ಶಾಂತಿ ನೀಡುತ್ತದೆ ಯುವ ಜನತೆ ಉತ್ತಮ ಸಾಹಿತ್ಯವನ್ನು ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಭೌಧ್ಧಿಕ ಉನ್ನತಿ ಸಾಧ್ಯವಾಗುತ್ತದೆ. ಸಂಘದ ಮುಖಾಂತರ ಕಷ್ಟದಲ್ಲಿರುವ ಸಮಾಜ ಭಾಂಧವರನ್ನು ಮುಖ್ಯವಾಹಿನಿಗೆ ತರುವ ಕೆಲಸಗಳು ಆಗಬೇಕು ಯುವ ಸಮುದಾಯ ದೇಶದ ಸಂಪತ್ತಾಗಬೇಕು ಎಂದರು. ಈ ಸಂದರ್ಭ ಸಮಾಜದ ಸಾಧಕ ವ್ಯಕ್ತಿಗಳಾದ ಉದ್ಯಮಿ ಮನೋಹರ ಶೆಟ್ಟಿ, ಹೀರಾ ದೇವೀ ಪ್ರಸಾದ್ ಶೆಟ್ಟಿ ಐಕಳ,ಬ್ರಿಗೇಡಿಯರ್ ಐ.ಎನ್.ರೈ, ಮೂಲ್ಕಿ ಪಟ್ಟಣ ಪಂಚಾಯತಿ ಮುಖ್ಯಾಧಿಜಾರಿ ವಾಣಿ ವಿಜಯ ಪ್ರಸಾದ್ ಆಳ್ವಾ ಸಂಮಾನ ಸ್ವೀಕರಿಸಿದರು. ಮೂಲ್ಕಿ ನಗರ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಹರ್ಷರಾಜ ಶೆಟ್ಟಿ, ಜಿಎಂ ಮತ್ತು ಪ್ರಗತಿ ಪರ ಕ್ರಷಿಕ ಕರುಣಾಕರ ಆಳ್ವಾ ಅಭಿನಂದನೆ ಸ್ವೀಕರಿಸಿದರು.
ಈ ಸಂದರ್ಭ ಸುಮಾರು 4 ಲಕ್ಷ ವೆಚ್ಚದಲ್ಲಿ 300 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬಂಟರ ಸಂಘದ ವತಿಯಿಂದ ಜಯಲಕ್ಷ್ಮಿ ಶೆಟ್ಟಿಯವರಿಗೆ ನೂತನ ಮನೆ ನೀಡಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ವಹಿಸಿದ್ದರು. ಬೆಂಗಳೂರು ಉದ್ಯಮಿ ಬಪ್ಪನಾಡು ನಾರಾಯಣ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.
ಹಿರಿಯ ಸಾಹಿತಿ ಎನ್.ಪಿ.ಶೆಟ್ಟಿ, ಸಂಘದ ಉಪಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಸಾಧಕರನ್ನು ಅಭಿನಂದಿಸಿದರು. ಪತ್ರಕರ್ತ ಶರತ್ ಸೆಟ್ಟ ಮತ್ತು ನವೀನ್ ಕುಮಾರ್ ಎಡ್ಮೆಮಾರ್ ಸಾಧಕರನ್ನು ಪರಿಚಯಿಸಿದರು. ಅತಿಥಿಗಳಾಗಿ ಮಂಡ್ಯ ಜಗನ್ನಾಥ ಶೆಟ್ಟಿ ನಿಡ್ಡೋಡಿ , ಮಾತೃ ಸಂಘದ ಪ್ರತಿನಿಧಿ ವಿಜಯ ಪ್ರಸಾದ್ ಆಳ್ವಾ, ಯುವ ವೇದಿಕೆ ಸಂಚಾಲಕ ರಾಜೇಶ್ ಶೆಟ್ಟಿ , ಮಹಿಳಾ ವೇದಿಕೆ ಸಂಚಾಲಕರಾದ ಸಾವಿತ್ರಿ ಶೆಟ್ಟಿ, ಮೂಲ್ಕಿ ಸುಂದರರಾಮ ಶೆಟ್ಟಿ ಸ್ಮಾರಕ ಟ್ರಸ್ಟ್ ಸದಸ್ಯ ಸುಕುಮಾರ ಶೆಟ್ಟಿ,ಕಟ್ಟಡ ನವೀಕರಣ ಸಮಿತಿ ಅಧ್ಯಕ್ಷ ಮುರಳೀಧರ ಭಂಡಾರಿ, ಕಾರ್ಯದರ್ಶಿ ರವಿರಾಜ ಶೆಟ್ಟಿ, ಜತೆ ಕಾರ್ಯದರ್ಶಿ ಮಲ್ಲಿಕಾ ಜೆ.ಪೂಂಜಾ, ಕೋಶಾಧಿಕಾರಿ ಕೆ.ಸುಂದರ ಶೆಟ್ಟಿ, ಐಕಳ ಬಾವ ಜಯಪಾಲ ಶೆಟ್ಟಿ ವೇದಿಕೆಯಲ್ಲಿದ್ದರು.
ಸಾವಿತ್ರಿ ಶೆಟ್ಟಿ ಪ್ರಾರ್ಥಿಸಿದರು, ಸಂತೋಷ್ ಕುಮಾರ್ ಹೆಗ್ಡೆ ಸ್ವಾಗತಿಸಿದರು. ರವಿರಾಜ ಶೆಟ್ಟಿ ಪ್ರಸ್ತಾವಿಸಿದರು , ಸಾಯೀನಾಥ ಶೆಟ್ಟಿ ನಿರೂಪಿಸಿದರು, ಮಲ್ಲಿಕಾ ಪೂಂಜಾ ವಂದಿಸಿದರು.

Mulki-10111403 Mulki-10111404 Mulki-10111405 Mulki-10111406 Mulki-10111407 Mulki-10111408 Mulki-10111409 Mulki-10111410 Mulki-10111411

Comments

comments

Comments are closed.

Read previous post:
Mulki-10111402
ಮೂಲ್ಕಿಯ ಬಿಲ್ಲವ ಭಜನಾ ಮಂಗಲೋತ್ಸವ

ಮೂಲ್ಕಿ: ಬಾಳೆಹಿತ್ಲುವಿನ ವಿಠೋಭ ಭಜನಾ ಮಂದಿರದಲ್ಲಿ ಜರಗಿದ ಭಜನಾ ಮಂಗಲೋತ್ಸವವನ್ನು ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಿ ಸಾಲ್ಯಾನ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು....

Close