ಪ್ರಶಿಕ್ಷಣ ಪರಿಚಯ ವರ್ಗ ಕಾರ್ಯಾಗಾರ ಸಮಾರೋಪ

ಕಿನ್ನಿಗೋಳಿ: ಸಮೃದ್ಧ ಅಭಿವೃದ್ಧಿ ಪರ ಚಿಂತನ ಶೀಲ ನವ್ಯ ಭಾರತ ನಿರ್ಮಾಣ ಮಾಡುವಲ್ಲಿ ಹಾಗೂ ಪಕ್ಷವನ್ನು ಸಂಘಟಿಸುವ ಪ್ರಯತ್ನದಲ್ಲಿ ಇಂತಹ ಶಿಬಿರಗಳು ಸಹಕಾರಿಯಾಗಲಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಭಾರತೀಯ ಜನತಾ ಪಾರ್ಟಿಯ ಮೂಡಬಿದಿರೆ ಮಂಡಲದ ಆಶ್ರಯದಲ್ಲಿ ಭಾನುವಾರ ಪುನರೂರು ಶ್ರೀವಿಶ್ವನಾಥ ದೇವಳದ ಸಭಾಭವನದಲ್ಲಿ ನಡೆದ ಪ್ರಶಿಕ್ಷಣ ಪರಿಚಯ ವರ್ಗ ಕಾರ್ಯಾಗಾರ ಸಮಾರೋಪ ಭಾಷಣದಲ್ಲಿ ಮಾತನಾಡಿ ಬೇರೆ ಪಕ್ಷಗಳಲ್ಲಿ ಪಟ್ಟಬದ್ದ ಹಿತಾಸಕ್ತರಿಗೆ ಪ್ರಧಾನ ಹುದ್ದೆಗಳಲ್ಲಿ ಸ್ಥಾನವಿದ್ದರೆ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರು ಹಾಗೂ ಚಾ ಮಾರುವವ ಸಾಮಾನ್ಯ ಕಾರ್ಯಕರ್ತನು ಪ್ರಧಾನ ಮಂತ್ರಿಯಾಗಲು ಸಾಧ್ಯ. ಬೆರಳೆಣಿಕೆಯ ಸ್ಥಾನ ಗಳಿಸುತ್ತಿದ್ದ ಬಿಜೆಪಿ ಪಕ್ಷ ತತ್ವ ಸಿದ್ಧಾಂತಗಳ ನೆಲೆಗಟ್ಟಿನಲ್ಲಿ ಈ ಮಟ್ಟಕ್ಕೆ ದೊಡ್ಡದಾಗಿ ಬೆಳೆದಿದೆ ಎಂದು ಹೇಳಿದರು.
ಮಂಡಲದ ಅಧ್ಯಕ್ಷ ಕೆ. ಪಿ. ಸುಚರಿತ ಶೆಟ್ಟಿ, ಸಂಚಾಲಕ ಸುದರ್ಶನ ಎಮ್ ಉಪಸ್ಥಿತರಿದ್ದರು. ವರ್ಗ ಪ್ರಮುಖ್ ಭೋಜರಾಜ ಶೆಟ್ಟಿ ಸ್ವಾಗತಿಸಿದರು. ಗಣೇಶ್ ಅರ್ಬಿ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ್ ವಂದಿಸಿದರು.

Kinnigoli-11111402

Comments

comments

Comments are closed.

Read previous post:
Kinnigoli-11111401
ಮೂಲ್ಕಿ ಬಂಟರ ಸಂಘದ ವತಿಯಿಂದ ನೂತನ ಮನೆ ಹಸ್ತಾಂತರ

ಕಿನ್ನಿಗೋಳಿ: ಮೂಲ್ಕಿ ಬಂಟರ ಸಂಘದ ಆಶ್ರಯದಲ್ಲಿ ಶಿಮಂತೂರು ಲಾದೆ ಮನೆ ಜಯಲಕ್ಷ್ಮೀ ಶೆಟ್ಟಿ ಅವರಿಗೆ ಕಟ್ಟಿ ಕೊಡಲಾದ ಮನೆಯನ್ನು ಭಾನುವಾರ ಹಸ್ತಾಂತರಿಸಲಾಯಿತು. ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್...

Close