ಮೂಲ್ಕಿ: ಉಚಿತ ಪತಂಜಲೀ ಯೋಗ ಶಿಭಿರ

ಮೂಲ್ಕಿ:ನಿಯಮಿತ ಯೋಗ ಸಾಧನೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಪ್ರಾಪ್ತಿಯಾಗುವುದರೊಂದಿಗೆ ಸಂತೋಷಭರಿತ ಜೀವನ ನಮ್ಮದಾಗುತ್ತದೆ ಎಂದು ಮೂಲ್ಕಿ ರಾಮಕೃಷ್ಣ ಪೂಂಜ ಕೈಗಾರಿಕಾ ತರಬೇತಿ ಕೇಂದ್ರ ಪ್ರಾಚಾರ್ಯ ವೈ.ಎನ್.ಸಾಲ್ಯಾನ್ ಹೇಳಿದರು.
ಮೂಲ್ಕಿ ಬಪ್ಪನಾಡು ಜ್ಞಾನ ಮಂದಿರದಲ್ಲಿ ಭಾನುವಾರ ಪ್ರಾರಂಭಗೊಂಡ ಬೆಳಿಗ್ಗೆ 6ರಿಂದ 7ಗಂಟೆಯ ವರೆಗೆ 48 ದಿನಗಳ ಉಚಿತ ಪತಂಜಲೀ ಯೋಗ ಶಿಭಿರ ಉದ್ಘಾಟನಾ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ದೈಹಿಕ ಶ್ರಮ ರಹಿತ ಬದುಕು ಆಧುನಿಕ ಆಹಾರ ಪದ್ದತಿಗಳಿಂದಾಗಿ ನಮ್ಮ ದೇಹ ಮತ್ತು ಮನಸ್ಸು ರೋಗ ರುಜಿನಗಳ ಹಂದರವಾಗುತ್ತಿದ್ದು ಜೀವನವಿಡೀ ಮದ್ದಿನೊಂದಿಗೆ ಬದುಕುವ ಜೀವನ ಕ್ರಮಕ್ಕಿಂತ ಯೋಗವನ್ನು ಆಶ್ರಯಿಸಿದಲ್ಲಿ ಉತ್ತಮ ಸ್ವಾಭಿಮಾನದ ಸ್ವತಂತ್ರ ಬದುಕು ನಮ್ಮದಾಗುತ್ತದೆ ಎಂದರು.
ಶಿಭಿರವನ್ನು ಬಪ್ಪನಾಡು ಯುವಕ ವೃಂದದ ಅಧ್ಯಕ್ಷ ಹಿರಿಯ ಉದ್ಯಮಿ ನಂದಗೋಕುಲ ಕೃಷ್ಣ.ಆರ್.ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು. ಮಂಗಳೂರು ಪತಂಜಲಿ ಯೋಗಕೇಂದ್ರದ ಯೋಗ ಶಿಕ್ಷಕ ರಾಘವೇಂದ್ರ ರಾವ್,ಯುವಕ ವೃಂದದ ಕಾರ್ಯದರ್ಶಿ ಹರಿಶ್ಚಂದ್ರ ದೇವಾಡಿಗ ನಿರೂಪಿಸಿದರು. ಬಪ್ಪನಾಡು ಯುವಕ ವೃಂದದ ಪ್ರಾಯೋಜಕತ್ವದಲ್ಲಿ ಪ್ರಾರಂಭಗೊಂಡ ಯೋಗ ಶಿಭಿರದಲ್ಲಿ 60ಕ್ಕೂ ಅಧಿಕ ಮಹಿಳೆಯರು ಹಾಗೂ ಇತರರು ಭಾಗವಹಿದ್ದರು.

Bhagyavan Sanil

Kinnigoli-11111403

Comments

comments

Comments are closed.

Read previous post:
Kinnigoli-11111402
ಪ್ರಶಿಕ್ಷಣ ಪರಿಚಯ ವರ್ಗ ಕಾರ್ಯಾಗಾರ ಸಮಾರೋಪ

ಕಿನ್ನಿಗೋಳಿ: ಸಮೃದ್ಧ ಅಭಿವೃದ್ಧಿ ಪರ ಚಿಂತನ ಶೀಲ ನವ್ಯ ಭಾರತ ನಿರ್ಮಾಣ ಮಾಡುವಲ್ಲಿ ಹಾಗೂ ಪಕ್ಷವನ್ನು ಸಂಘಟಿಸುವ ಪ್ರಯತ್ನದಲ್ಲಿ ಇಂತಹ ಶಿಬಿರಗಳು ಸಹಕಾರಿಯಾಗಲಿದೆ ಎಂದು ದಕ್ಷಿಣ ಕನ್ನಡ ಸಂಸದ...

Close