ನಾಗರಿಕ ಸನ್ಮಾನ ಆಮಂತ್ರಣ ಪತ್ರಿಕೆ

ಮೂಲ್ಕಿ: ಸಮಾಜ ಸೇವೆಗೆ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡಂತಹ ಜಯ ಸಿ ಸುವರ್ಣರಿಗೆ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಜಿಲ್ಲೆಗೆ ಹಾಗೂ ಅವರ ಅಭಿಮಾನಿಗಳಿಗೆ ನೀಡಿದ ಗೌರವವಾಗಿದ್ದು ಮೂಲ್ಕಿ ಹೋಬಳಿಯ ಜನತೆ ಹಾಗೂ ಅವರ ಆಭಿಮಾನಿಗಳು ಜೊತೆಗೂಡಿ ಅಭಿನಂದಿಸುವ ಮೂಲಕ ಅವರಿಂದ ಸಮಾಜಕ್ಕೆ ಇನ್ನಷ್ಟು ಸೇವೆ ಸಿಗಲೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಸಮಾಜ ಸೇವಕ ಜಯ ಸಿ ಸುವರ್ಣರಿಗೆ ಜಯ ಸಿ ಸುವರ್ಣರ ಅಭಿನಂದನಾ ಸಮಿತಿಯ ವತಿಯಿಂದ ಮೂಲ್ಕಿಯಲ್ಲಿ ನವಂಬರ್ 17 ರಂದು ಜರಗಲಿರುವ ನಾಗರಿಕ ಸನ್ಮಾನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಅಭಿನಂದನಾ ಸಮಿತಿಯ ಅಧ್ಯಕ್ಷ ಹರಿಶ್ಚಂದ್ರ ಪಿ ಸಾಲ್ಯಾನ್, ಕಾರ್ಯಾಧ್ಯಕ್ಷ ಯೋಗೀಶ್ ಕೋಟ್ಯಾನ್, ಗೌರವ ಸಲಹೆಗಾರರಾದ ಎಚ್ ವಿ ಕೋಟ್ಯಾನ್, ಚಂದ್ರಶೇಖರ ಸುವರ್ಣ, ಉಪಾಧ್ಯಕ್ಷರಾದ ಮುರಳೀಧರ ಭಂಡಾರಿ, ಸೋಮ ಸುಂದರ್ ನಡಿಕುದ್ರು, ರಾಘು ಸುವರ್ಣ, ಪ್ರಧಾನ ಕಾರ್ಯದರ್ಶಿ ಆಡ್ವೆ ರವೀಂದ್ರ ಪೂಜಾರಿ ಮತ್ತಿತರರು ಉಪಸ್ತಿತರಿದ್ದರು.

Prakash Suvarna

Mulki-12111417

Comments

comments

Comments are closed.

Read previous post:
Kateeli-12111413
ಕಟೀಲು ದೀಪೋತ್ಸವ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಮಂಗಳವಾರ ದೀಪೋತ್ಸವ ನಡೆಯಿತು. ಹಣ್ಣು, ತರಕಾರಿಗಳ ಮಂಟಪದಲ್ಲಿ (ಗುರ್ಜಿ) ದೇವರನ್ನು ಕುಳ್ಳಿರಿಸಿ ಪೂಜೆ ನಡೆಯಿತು. ಈ ಸಂದರ್ಭ ನಾರಾಯಣ ಭಟ್...

Close