ಎಸ್-ಕೋಡಿಯಲ್ಲಿ ಅನಾಥ ಓಮ್ನಿ ಪತ್ತೆ

ಮೂಲ್ಕಿ: ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಶೀನಪ್ಪಯ್ಯ ಕೋಡಿ(ಎಸ್-ಕೋಡಿ) ಎಂಬಲ್ಲಿ ಅನಾಥ ಸ್ಥಿತಿಯಲ್ಲಿ ಓಮ್ನಿ ಕಾರು ಪತ್ತೆಯಾಗಿದೆ.ಕಳೆದೆರಡು ದಿನಗಳಿಂದ ಅನಾಥ ಸ್ಥಿತಿಯಲ್ಲಿ ಹೆದ್ದಾರಿ ಬದಿಯಲ್ಲಿ ನಿಂತಿದ್ದನ್ನು ಗಮನಿಸಿದ್ದ ಸ್ಥಳೀಯರು ಮೂಲ್ಕಿ ಪೋಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಪೋಲೀಸರು ಪರಿಶೀಲಿಸಿದಾಗ ಕಾರಿನ ಎದುರು ಹಾಗೂ ಹಿಂಬದಿಯ ನಂಬರ್ ಪ್ಲೇಟ್ ಒಡೆದು ಹಾಕಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಅದನ್ನು ಜೋಡಿಸಲಾಗಿ ನಂಬರ್ ಕೆಎ 20 ಎ 2160  ಎಂದು ತಿಳಿದು ಬಂದಿದೆ.ಯಾರೋ ಕಾರನ್ನು ಕಳವು ಮಾಡಿ ಪೋಲೀಸರಿಗೆ ಹೆದರಿ ಬಿಟ್ಟು ಹೋಗಿರಬೇಕೆಂದು ಸ್ಥಳೀಯರು ಶಂಕಿಸಿದ್ದಾರೆ. ಪೋಲೀಸರು ಓಮ್ನಿಯನ್ನು ಠಾಣೆಗೆ ಕೊಂಡುಹೋಗಿ ತನಿಖೆ ನಡೆಸುತ್ತಿದ್ದಾರೆ.

Puneethkrishna

Kinnigoli-12111401 Kinnigoli-12111402 Kinnigoli-12111403

 

Comments

comments

Comments are closed.

Read previous post:
Kinnigoli-11111403
ಮೂಲ್ಕಿ: ಉಚಿತ ಪತಂಜಲೀ ಯೋಗ ಶಿಭಿರ

ಮೂಲ್ಕಿ:ನಿಯಮಿತ ಯೋಗ ಸಾಧನೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಪ್ರಾಪ್ತಿಯಾಗುವುದರೊಂದಿಗೆ ಸಂತೋಷಭರಿತ ಜೀವನ ನಮ್ಮದಾಗುತ್ತದೆ ಎಂದು ಮೂಲ್ಕಿ ರಾಮಕೃಷ್ಣ ಪೂಂಜ ಕೈಗಾರಿಕಾ ತರಬೇತಿ ಕೇಂದ್ರ ಪ್ರಾಚಾರ್ಯ ವೈ.ಎನ್.ಸಾಲ್ಯಾನ್...

Close