ಪುಟ್ಟ ಬಾಲೆಗೆ ನೆರವಾಗುವಿರ

ಕಿನ್ನಿಗೋಳಿ: ಮೂರುವರೆ ವರ್ಷದ ಮುದ್ದು ಮುಖದ ಪುಟ್ಟ ಬಾಲೆಗೆ ಹುಟ್ಟುವಾಗಲೇ ಬೆನ್ನು ಮೂಳೆಯ ತೊಂದರೆಯಿಂದ ಬಳಲುತ್ತಿದ್ದು ಸಮಸ್ಯೆ ನಿವಾರಣೆಗಾಗಿ ಪ್ರತಿವರ್ಷ ಅಂದರೆ 18 ಬಾರಿ ಶಸ್ತ್ರ ಚಿಕಿತ್ಸೆ ನಡೆಸಬೇಕಾದ ಅನಿವಾರ್ಯತೆ ಒದಗಿದೆ. ಹೆತ್ತವರು ದಿನಾಲೂ ಚಿಂತೆ ಪಡುವ ಪರಿಸ್ಥಿತಿ ಬಂದೊದಗಿದೆ.
ಕಿನ್ನಿಗೋಳಿ ಸಮೀಪದ ಕೆರೆಕಾಡು ನಿವಾಸಿ ಕೂಲಿ ಜೀವನ ಸಾಗಿಸುತಿರುವ ಹೇಮಚಂದ್ರ ಶೆಟ್ಟಿಗಾರ್ ಮತ್ತು ಗೀತಾ ದಂಪತಿಗಳಿಗೆ ಗಂಡು ಮಗು ಹಾಗೂ ಹೆಣ್ಣು ಮಗು. ಚಿಕ್ಕವಳಾದ ಮೂರುವರೆ ವರ್ಷದ ಲಿಖಿತಾ ಈ ನತದೃಷ್ಟೆ ಹೆಣ್ಣು ಮಗು.
ಲಿಖಿತಾಳಿಗೆ 6 ತಿಂಗಳು ತುಂಬುವ ತನಕ ಹೆತ್ತವರಿಗೆ ಬೆನ್ನಮೂಳೆಯ ಸಮಸ್ಯೆ ಗೊತ್ತಾಗಲ್ಲಿಲ್ಲ ಯಾವಾಗ ಮಗು ತೆವಳಲು ಕಲಿಯಲಾರಂಭಿಸಿದಾಗ ಯಾವುದೋ ಸಮಸ್ಯೆಯಿಂದ ಬಳಲುತ್ತಿದೆ ಎಂದು ಅನಿಸಲಾರಂಬಿಸಿತು. ಮಕ್ಕಳ ವೈದ್ಯರು ಈ ಸಮಸ್ಯೆಯ ಬಗ್ಗೆ ಪರೀಕ್ಷೆ ನಡೆಸುವಾಗ ಮಗುವಿಗೆ ಬೆನ್ನು ಮೂಳೆಯ ತೊಂದರೆ ಇರುವುದು ಸ್ಪಷ್ಟವಾಯಿತು. ಮಗುವಿನ ಬೆನ್ನು ಮೂಳೆ ಸರಿ ಪಡಿಸಬೇಕಾದರೆ ನಿರಂತರ ಶಸ್ತ್ರ ಚಿಕಿತ್ಸೆ ಆಗಬೇಕಾಗಿದ್ದು , ಮಗುವಿಗೆ 18 ವರ್ಷ ತುಂಬುವ ತನಕ ಪ್ರತೀ ವರ್ಷ ಶಸ್ತ್ರ ಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದು ಈ ದಂಪತಿಗಳಿಗೆ ದಿಕ್ಕೇ ತೊಚದಂತಾಗಿದೆ. ಮಗುವಿಗೆ ಈಗ ಮೂರುವರೆ ವರ್ಷ ಮುಂದಿನ 18 ವರ್ಷದ ತನಕ 18 ಬಾರಿ ಶಸ್ತ್ರ ಚಿಕಿತ್ಸೆ ನಡೆಸಬೇಕಾಗುತ್ತದೆ, ಕೇವಲ ಶಸ್ತ್ರ ಚಿಕಿತ್ಸೆಯ ವೆಚ್ಚವೇ ಸುಮಾರು ಏಳೂವರೆ ಲಕ್ಷ ಆಗಲಿದೆ ಹಾಗೂ ಆಸ್ಪತ್ರೆ, ಔಷದಿ ಮತ್ತು ಇನ್ನಿತರ ವೆಚ್ಚಗಳು ಸೇರಿ ಸುಮಾರು 15 ಲಕ್ಷ ತಗಲಲಿದೆ ಎಂದು ದಂಪತಿಗಳು ಕಂಗಾಲಾಗಿದ್ದಾರೆ.

ಯಶಸ್ವಿನಿ,ಸಂಪೂರ್ಣ ಸುರಕ್ಷ, ಹಾಗೂ ಇನ್ನಿತರ ಯಾವುದೇ ಆರೋಗ್ಯ ವಿಮೆಗಳು ಇದಕ್ಕೆ ಅನ್ವಯವಾಗದ ಕಾರಣ, ಸರ್ಜರಿಗೆ ತಗಲುವ ವೆಚ್ಚವನ್ನು ಹೇಗೆ ಹೊಂದಿಸಿಕೊಳ್ಲುದು ಎಂಬುದೇ ಈಗ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ, ಒಂದು ವೇಳೆ ಮಗುವಿಗೆ ಶಸ್ತ್ರ ಚಿಕಿತ್ಸೆ ನಡೆಸದಿದ್ದಲಿ ಮಗು ಕುಬ್ಜವಾಗುವ ಆತಂಕ ದಂಪತಿಗಳಿಗೆ ಎದುರಾಗಿದೆ, ಸರ್ಕಾರದಿಂದ ಸಿಗುವ ಸಹಾಯಹಸ್ತ ಅಪೇಕ್ಷೆಯಲ್ಲಿ, ಮಾನವೀಯತೆಯ ಮೇರೆಗೆ ಜನಪ್ರತಿನಿಧಿಗಳ ಮೊರೆ ಹೋಗಿದ್ದಾರೆ. ಮಗುವಿನ ಚಿಕಿತ್ಸೆಗೆ ಹಳೆಯಂಗಡಿ ಪಿ.ಸಿ.ಎ ಬ್ಯಾಂಕ್ ನ ವತಿಯಿಂದ 10 ಸಾವಿರ ರೂಪಾಯಿ ನೀಡಿದ್ದು, ಆರೋಗ್ಯ ಸಚಿವ ಯು.ಟಿ. ಖಾದರ್ ಸಹಾಯ ಮಾಡುವ ಭರವಸೆ ನೀಡಿದ್ದಾರೆ,
ದಂಪತಿಗಳು ಆರ್ಥಿಕ ಸಂಕಷ್ಟದಲ್ಲಿದ್ದರೂ ಸಾಕಷ್ಟು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಈ ಗ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದ್ದು, ಕೂಲಿ ನಾಲಿ ನಡೆಸಿ ಬರುವ ಹಣದಿಂದ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಜೀವನ ನಡೆಸುವುದೇ ಕಷ್ಟವಾಗುತ್ತಿದ್ದು, ಇದೀಗ ಮಗಳ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ದಾನಿಗಳ ಮೊರೆ ಹೋಗಿದ್ದಾರೆ. ಇನ್ನೂ ಬೆಳೆದು ಸಾದಿಸಬೇಕಾದ ಪುಟ್ಟ ಬಾಲೆಯ ಚಿಕಿತ್ಸೆಗೆ ತಮ್ಮಿಂದಾದಷ್ಟುಸಹೃದಯಸ್ಥರು ನೆರವಾಗುವಂತೆ ಹೆತ್ತವರು ಕೇಳಿ ಕೊಂಡಿದ್ದಾರೆ.
ಸಹೃದಯಿ ಆರ್ಥಿಕ ಸಹಾಯ ಮಾಡಲಿಚ್ಚಿಸುವರು ಗೀತಾ

ಐ. ಯಫ್. ಯಸ್. ಸಿ ಕೋಡ್- ವಿ.ಐ.ಜೆಬಿ 0001112

ಖಾತೆ ನಂಬರ್- 111201011002468 ವಿಜಯಾ ಬ್ಯಾಂಕ್ ಮುಲ್ಕಿ ಶಾಖೆಗೆ ಕಳುಹಿಸಬಹುದು.

ಮೊಬೈಲ್ ನಂಬರ್ : (ತಂದೆ) ಹೇಮಚಂದ್ರ ಶೆಟ್ಟಿಗಾರ್ 9945427449

Kinnigolii-12111417 Kinnigolii-12111418

Comments

comments

Comments are closed.

Read previous post:
Kinnigolii-12111416
ಎಲಿಜಬೆತ್ ಪಿಂಟೊ

ಕಿನ್ನಿಗೋಳಿ: ನಿವೃತ್ತ ಸಬ್ ರಿಜಿಸ್ಟ್ರಾರ್ ದಿ. ಚಾರ್ಲ್ಸ್ ಪಿಂಟೊ ಅವರ ಧರ್ಮ ಪತ್ನಿ ಹಾಗೂ ಕಿನ್ನಿಗೋಳಿ ಚರ್ಚ್ ಪಾಲನ ಮಂಡಳಿಯ ಮಾಜಿ ಉಪಾಧ್ಯಕ್ಷ ಲೈನಲ್ ಪಿಂಟೊ ಅವರ ತಾಯಿ...

Close