ನಿಡ್ಡೋಡಿ, ಕಲ್ಲಮುಂಡ್ಕೂರು ತಂಡಗಳಿಗೆ ಪ್ರಶಸ್ತಿ

ಕಿನ್ನಿಗೋಳಿ: ಯುವವಾಹಿನಿ ನಿಡ್ಡೋಡಿ ಘಟಕದಿಂದ ಬಾಲಕ ಪ್ರತೀಕ್ ಚಿಕಿತ್ಸೆ ಸಹಾಯಾರ್ಥ ದ.ಕ.ಜಿಲ್ಲೆ, ಉಡುಪಿ ಜಿಲ್ಲಾ ಮಟ್ಟದ ಬಿಲ್ಲವರ ಟ್ರೋಫಿ ಕ್ರಿಕೆಟ್ ಪಂದ್ಯಾಟ ಕಲ್ಲಮುಂಡ್ಕೂರಿನಲ್ಲಿ ನಡೆಯಿತು.
ನಿಡ್ಡೋಡಿ ನಾರಾಯಣಗುರು ಸಂಘ ಪ್ರಥಮ ಹಾಗೂ ಕಲ್ಲಮುಂಡ್ಕೂರು ಬ್ರಹ್ಮಶ್ರೀ ತಂಡ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿತು.
ಉದ್ಘಾಟನಾ ಸಮಾರಂಭದಲ್ಲಿ ಯುವವಾಹಿನಿ ಕೇಂದ್ರ ಘಟಕದ ವಿಜಯಕುಮಾರ್ ಕುಬೆವೂರು, ಮುಖ್ಯೋಪಾಧ್ಯಾಯ ಪಶುಪತಿ ಶಾಸ್ತ್ರಿ, ಗಂಗಾಧರ ಪೂಜಾರಿ, ಸಂಜೀವ ಪೂಜಾರಿ, ರಾಮ ಸುವರ್ಣ, ನಾರಾಯಣ ಪೂಜಾರಿ, ಹರೀಂದ್ರ ಸುವರ್ಣ, ಅಮೃತೇಶ್ ಸುವರ್ಣ ಉಪಸ್ಥಿತರಿದ್ದರು.
ಸಮಾರೋಪದಲ್ಲಿ ಪ್ರೇಮನಾಥ್, ಜಿ.ಪಂ.ಸದಸ್ಯ ಈಶ್ವರ ಕಟೀಲ್, ವೆಂಕಪ್ಪ ಕೋಟ್ಯಾನ್, ಸಂದೀಪ್ ಸುವರ್ಣ, ಮೋಹನ್ ಪೆಜಕಳ, ಮಾ. ಪ್ರತೀಕ್ ಕುಟುಂಬದವರು ಉಪಸ್ಥಿತರಿದ್ದರು.
ಮಾ. ಪ್ರತೀಕ್ ಕುಟುಂಬಕ್ಕೆ ಧನಸಹಾಯ ಮಾಡಲಾಯಿತು. ಪಂದ್ಯಾಟದಲ್ಲಿ ಒಟ್ಟು 28 ತಂಡಗಳು ಭಾಗವಹಿಸಿದ್ದವು.

Kateel-14111429

Comments

comments

Comments are closed.

Read previous post:
Kateel-14111426
ಶ್ರೀ ದೇವಿ ಚಿಲ್ಡ್ರನ್ಸ್ ಪ್ಲೇ ಸ್ಕೂಲ್ : ಮಕ್ಕಳ ದಿನಾಚರಣೆ

ಕಿನ್ನಿಗೋಳಿ: ಎಳವೆಯಲ್ಲಿಯೇ ಮಕ್ಕಳಿಗೆ ಶಿಸ್ತು ಸಂಸ್ಕಾರ ಹಾಗೂ ಬೌದ್ಧಿಕ ವಿಕಸನಗೊಳ್ಳುವ ಶಿಕ್ಷಣ ನೀಡಿ ಪ್ರೋತ್ಸಾಹ ಕೊಟ್ಟರೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆ ಎಂದು ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು....

Close