ಕಟೀಲು ವಲಯ ಮಟ್ಟದ ಮಕ್ಕಳ ದಿನಾಚರಣೆ

ಕಿನ್ನಿಗೋಳಿ: ಸರಕಾರ ಮತ್ತು ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿಯೂ ಪ್ರೋತ್ಸಾಹ ನೀಡಿ ಸಮಾಜದ ಹಾಗೂ ರಾಷ್ಟ್ರದ ಭವಿಷ್ಯ ಉಜ್ವಲಗೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ದಾಮಸ್‌ಕಟ್ಟೆ ಕಿರೆಂ ಚರ್ಚ್ ಪ್ರಧಾನ ಧರ್ಮಗುರು ಫಾ. ಪೌಲ್ ಪಿಂಟೋ ಹೇಳಿದರು.
ಐಕಳ ಗ್ರಾಮ ಪಂಚಾಯಿತಿ, ದ.ಕ. ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರ್ರವಾರ ದಾಮಸ್‌ಕಟ್ಟೆ ಕಿರೆಂ ಚರ್ಚ್ ಸಭಾಭವನದಲ್ಲಿ ನಡೆದ ಕಟೀಲು ವಲಯ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೀನುಗಾರಿಕ ಮತ್ತು ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಈಶ್ವರ್ ಕಟೀಲ್, ಆಶಾ ರತ್ನಾಕರ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯರಾದ ಬೇಬಿ ಸುಂದರ ಕೋಟ್ಯಾನ್, ನೆಲ್ಸನ್ ಲೋಬೋ ಬಳ್ಕುಂಜೆ, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್, ಮೆನ್ನಬೆಟ್ಟು ಗಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಎಕ್ಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ , ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್, ಧರ್ಮದರ್ಶಿ ಮೋಹನ್‌ದಾಸ್ ಸುರತ್ಕಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಅಧಿಕಾರಿ ಶ್ಯಾಮಲಾ, ಶಿಶು ಅಭಿವೃದ್ದಿ ಅಧಿಕಾರಿ ಶೋಭಾ, ಐಕಳ ಪಿ.ಡಿ.ಒ. ನಾಗರತ್ನ, ಐಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಿವಾಕರ ಚೌಟ, ಸದಸ್ಯರಾದ ರಾಜೇಶ್ ಶೆಟ್ಟಿ, ಯೋಗೀಶ್ ಕೋಟ್ಯಾನ್, ಪೂರ್ಣಿಮಾ ಹರೀಶ್, ಹರ್ಬಟ್ ಲೋಬೋ, ಜಯಂತ್ ಪೂಜಾರಿ, ಯೋಗಿನಿ, ಗ್ರೇಸಿ ಡಿಸೋಜ, ಸರೋಜಿನಿ, ಶಕುಂತಳಾ, ಸೆವ್ರಿನ್ ಲೋಬೋ, ಸುಶೀಲಾ ಮುರಳಿ, ವೈ.ಕೆ ಸಾಲ್ಯಾನ್ ಮತ್ತಿತರು ಉಪಸ್ಥಿತರಿದ್ದರು.
ಹೇಮಲತಾ ಸ್ವಾಗತಿಸಿದರು. ಶ್ರೀಶ ಸರಾಫ್ ಕಾರ್ಯಕ್ರಮ ನಿರೂಪಿಸಿದರು.

Kateel-14111428

 

Comments

comments

Comments are closed.

Read previous post:
Kateel-14111408
ಕಟೀಲು: ಯಕ್ಷಗಾನಕ್ಕೆ ಚಾಲನೆ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ 6 ಯಕ್ಷಗಾನ ಮೇಳಗಳ 2014-15 ನೇ ಸಾಲಿನ ತಿರುಗಾಟಕ್ಕೆ ಗುರುವಾರ ಚಾಲನೆ ನೀಡಲಾಯಿತು. ಕಟೀಲು ಶ್ರೀದೇವಿಯ ಗರ್ಭಗುಡಿಯ ಮುಂದೆ ಕಲಾವಿದರಿಗೆ ಗೆಜ್ಜೆಗಳನ್ನು...

Close