ಶ್ರೀ ದೇವಿ ಚಿಲ್ಡ್ರನ್ಸ್ ಪ್ಲೇ ಸ್ಕೂಲ್ : ಮಕ್ಕಳ ದಿನಾಚರಣೆ

ಕಿನ್ನಿಗೋಳಿ: ಎಳವೆಯಲ್ಲಿಯೇ ಮಕ್ಕಳಿಗೆ ಶಿಸ್ತು ಸಂಸ್ಕಾರ ಹಾಗೂ ಬೌದ್ಧಿಕ ವಿಕಸನಗೊಳ್ಳುವ ಶಿಕ್ಷಣ ನೀಡಿ ಪ್ರೋತ್ಸಾಹ ಕೊಟ್ಟರೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆ ಎಂದು ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಶುಕ್ರವಾರ ಶ್ರೀ ದೇವಿ ಚಿಲ್ಡ್ರನ್ಸ್ ಪ್ಲೇ ಸ್ಕೂಲ್ ಆಂಡ್ ನರ್ಸರಿ ಆಶ್ರಯದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತಾಡಿದರು.
ಕಟೀಲು ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಜಯರಾಮ ಪೂಂಜ, ಸಮಾಜ ಸೇವಕಿ ಸಾವಿತ್ರಿ ಎಸ್. ಶೆಟ್ಟಿ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಶೈಲಜಾ ಶೆಟ್ಟಿ, ಕೆ.ಬಿ. ಸುರೇಶ್ ಉಪಸ್ಥಿತರಿದ್ದರು.
ಶ್ರೀ ದೇವಿ ಚಿಲ್ಡ್ರನ್ಸ್ ಪ್ಲೇ ಸ್ಕೂಲ್ ಆಂಡ್ ನರ್ಸರಿ ಸಂಚಾಲಕಿ ಮಲ್ಲಿಕಾ ಪೂಂಜ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಛದ್ಮವೇಷದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಹಾಗೂ ಇತರ ಸ್ಪರ್ಧೆಗಳಲ್ಲಿ ಭಾಗವಹಿಸಿದ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು.

Kateel-14111423 Kateel-14111424 Kateel-14111425 Kateel-14111426 Kateel-14111427

Comments

comments

Comments are closed.

Read previous post:
Kateel-14111428
ಕಟೀಲು ವಲಯ ಮಟ್ಟದ ಮಕ್ಕಳ ದಿನಾಚರಣೆ

ಕಿನ್ನಿಗೋಳಿ: ಸರಕಾರ ಮತ್ತು ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿಯೂ ಪ್ರೋತ್ಸಾಹ ನೀಡಿ ಸಮಾಜದ ಹಾಗೂ ರಾಷ್ಟ್ರದ ಭವಿಷ್ಯ ಉಜ್ವಲಗೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ದಾಮಸ್‌ಕಟ್ಟೆ...

Close