ಮೊರಾರ್ಜಿ ವಸತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಕಿನ್ನಿಗೋಳಿ: ಕಮ್ಮಾಜೆ ಮೊರಾರ್ಜಿ ವಸತಿ ಶಾಲೆಯಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಸುಳ್ಯ ತಾಲೂಕಿನ ಪೆರಾಜೆ ಮೂಲದ 7ನೇ ತರಗತಿ ವಿದ್ಯಾರ್ಥಿ ಕಿಶನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾನಾಯಕ ಚಿದಾನಂದ, ವಿದ್ಯಾರ್ಥಿಗಳಾದ ದಿವ್ಯ, ಮೊಕ್ಷಿತ್, ಕೀರ್ತಿ, ಮಣಿಕಂಠನಾಯ್ಕ್, ಕಾವ್ಯ, ಹವ್ಯ, ಅನಿಲ್, ಹಿತಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್ .ಬಿ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ರಮೇಶ್ ವಂದಿಸಿದರು ಕನ್ನಡ ಭಾಷಾ ಶಿಕ್ಷಕ ಗಣಪತಿನಾಯಕ್ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Kinnigoli-15111407

Comments

comments

Comments are closed.

Read previous post:
Kinnigoli-15111401
ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಇಗರ್ಜಿ

 ಕಿನ್ನಿಗೋಳಿ:  ಬುಧವಾರ ನಡೆಯಲಿರುವ ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್‌ನ ವಾರ್ಷಿಕ ಹಬ್ಬದ ಪ್ರಯುಕ್ತ ಅಲಂಕಾರಗೊಂಡ ಚರ್ಚ್.  

Close