ಸರಳತೆಯನ್ನು ಯುವ ಸಮಾಜ ಅನುಸರಿಸಿ

ಮೂಲ್ಕಿ: ನಾರಾಯಣಗುರುಗಳ ತತ್ವದ ಪರಿಪಾಲನೆಯಿಂದ ಜಯ ಸುವರ್ಣರ ಎಲ್ಲಾ ಕಾರ್ಯಯೋಜನೆಗಳು ಜಯಪ್ರಧವಾಗುವಂತೆ ಮಾಡಿವೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ರಂಗಕರ್ಮಿ ಸದಾನಂದ ಸುವರ್ಣ ಹೇಳಿದರು.

ಮೂಲ್ಕಿ ಅಚ್ಚುನಂದನ್ ಅಂಗಣದಲ್ಲಿ ಯುವವಾಹಿನಿ ಮೂಲ್ಕಿ ಘಟಕದ ಸಂಯೋಜನೆಯಲ್ಲಿ ಭಾನುವಾರ ಸಂಜೆ 2014 ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರದ ಸಾಧಕ ಜಯ .ಸಿ.ಸುವರ್ಣ ರವರಿಗೆ ನಡೆದ ಇಲ್ಲದ ತಮ್ಮನ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ನಾರಾಯಣ ಗುರುಗಳ ತತ್ವದಂತೆ ಸಂಘಟನೆ, ವಿದ್ಯೆ, ಉದ್ಯೋಗ ಕ್ಷೇತ್ರದಲ್ಲಿ ಸಾಧನೆಗೈದು ಜಾತಿ ಮತದ ಅಂತರ ವಿರಿಸದೆ ಸರ್ವ ಜನಾಂಗದ ಪ್ರೀತಿಗೆ ಪಾತ್ರರಾದ ಅನರ್ಘ್ಯ ರತ್ನವಾಗಿದ್ದಾರೆ ಎಂದರು.
ಈ ಸಂದರ್ಭ ವೇ.ಮೂ.ವಾದಿರಾಜ ಉಪಾದ್ಯಾಯ ಆಶೀರ್ವಚನ ಮೀಡಿದರು.
ಸನ್ಮಾನ ಸ್ವೀಕರಿಸಿದ ಜಯ ಸುವರ್ಣರು ಮಾತನಾಡಿ, ಹೊರರಾಜ್ಯ ಕನ್ನಡಿಗನಾಗಿ ಸಮಾಜಿಕ ಆರ್ಥಿಕ ಶೈಕ್ಷಣಿಕ ಸೇವೆಯ ಹೆಸರುಗಳಿಸಲು ನನ್ನಡನೆ ದುಡಿದ ಎಲ್ಲರಿಗೂ ಸಂದಿದ ಪ್ರಶಸ್ತಿಯಾಗಿದ್ದು ಸರಳ ಜೀವನ ಕ್ರಮ ಅನುಸರಿಸಿ ಉಳಿಕೆಯ ಹಣವನ್ನು ಸಮಾಜ ಸೇವೆಗೆ ಅರ್ಪಿಸಿದ್ದೇನೆ ಜೀವನದಲ್ಲಿ ಸರಳತೆಯನ್ನು ಯುವ ಸಮಾಜ ಅನುಸರಿಸಿ ಸಮಾಜದ ಉನ್ನತಿಗೆ ಸಹಕರಿಸಬೇಕು ಎಂದರು.
ಕಟೀಲು ದೇವಳ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ ಅಭಿನಂದಿಸಿದರು. ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ.ಪಿ.ಸಾಲ್ಯಾನ್ ಶುಭಾಶಂಸನೆ ಗೈದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಪ್ರೇಮನಾಥ್ ಕೆ ಅಧ್ಯಕ್ಷತೆ ವಹಿಸಿದ್ದರು. ಯುವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ಮೋಹನ್ ಸುವರ್ಣ, ಕಾರ್ಯದರ್ಶಿ ರಕ್ಷಿತಾ ಕೋಟ್ಯಾನ್ ಕೋಶಾಧಿಕಾರಿ ಚೇತನ್ ಕುಮಾರ್ ಉಪಸ್ಥಿತರಿದ್ದರು ಮೋಹನ್ ಸುವರ್ಣ ಸ್ವಾಗತಿಸಿದರು, ಚಂದ್ರಶೇಖರ ಸುವರ್ಣ ಪ್ರಸ್ತಾವಿಸಿದರು.ದೀಕ್ಷಾ ಸುವರ್ಣ ಸನ್ಮಾನ ಪತ್ರ ವಾಚಿಸಿದರು. ರಂಗಕರ್ಮಿ ನರೇಶ್ ಕುಮಾರ್ ಸಸಿಹಿತ್ಲು ನಿರೂಪಿಸಿದರು. ರಕ್ಷಿತಾ ಕೋಟ್ಯಾನ್ ವಂದಿಸಿದರು. ಚಿತ್ರ: ರಂಗಕರ್ಮಿ ಸದಾನಂದ ಸುವರ್ಣ ಸನ್ಮಾನಿಸಿದರು.

Bhagyavan Sanil

Mulki-17111408

 

Comments

comments

Comments are closed.

Read previous post:
Kinnigoli-17111407
ಕಲ್ಲಮುಂಡ್ಕೂರು ಬಿಲ್ಲವರ ಸಂಘ ಅಧ್ಯಕ್ಷ ಆಯ್ಕೆ

ಕಿನ್ನಿಗೋಳಿ: ಕಲ್ಲಮುಂಡ್ಕೂರು ಬಿಲ್ಲವರ ಸಮಾಜ ಸೇವಾ ಸಂಘ (ರಿ) ವಾರ್ಷಿಕ ಮಹಾಸಭೆಯು ಸಂಘದ ಗೌರವಾಧ್ಯಕ್ಷ ಸದಾನಂದ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಕಲ್ಲಮುಂಡ್ಕೂರು ಬಿಲ್ಲವರ ಸಭಾಭವನದಲ್ಲಿ ನಡೆಯಿತು. 2014-15ನೇ...

Close