ಮುಲ್ಲಟ್ಟ: ಸಾರ್ವಜನಿಕ ರುದ್ರಭೂಮಿಯಲ್ಲಿ ಮಾಟ ಮಂತ್ರ

ಕಿನ್ನಿಗೋಳಿ: ಆಸ್ತಿಕ ಭಾರತೀಯರನ್ನು ತಲೆಮಾರುಗಳಿಂದ ಕಾಡುತ್ತಿರುವ ಆಂಧಶ್ರದ್ಧೆ, ಮಾಟ-ಮಂತ್ರ , ವಶೀಕರಣ, ಮೂಢನಂಬಿಕೆಗಳು, ಕ್ಷುದ್ರ ಶಕ್ತಿಗಳನ್ನು ಒಲಿಸಿಕೊಳ್ಳಲು ಪ್ರಾಣಿಬಲಿ, ಹತ್ತು ಹಲವು ಅನಿಷ್ಟ ಪದ್ಧತಿಗಳು ಸಮಾಜದಲ್ಲಿ ಮನೆ ಮಾಡಿ, ಮನುಷ್ಯನನ್ನು ಮತ್ತಷ್ಟು ಕುಬ್ಜನನ್ನಾಗಿಸುತ್ತಿವೆ.

ಕಿನ್ನಿಗೋಳಿ ಸಮೀಪದ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪದ್ಮನೂರಿನ ಮುಲ್ಲಟ್ಟ ಸಾರ್ವಜನಿಕ ರುದ್ರಭೂಮಿಯಲ್ಲಿ ಮಾಟ ಮಂತ್ರ ಕೈಗೊಂಡು ಗ್ರಾಮಸ್ಥರಲ್ಲಿ ಭಯದ ವಾತಾವರಣವನ್ನುಂಟು ಮಾಡಿದ ಪ್ರಕರಣವೊಂದು ಮುಲ್ಕಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಮುಲ್ಲಟ್ಟ ಸಾರ್ವಜನಿಕ ರುದ್ರಭೂಮಿಯ ಕಾಪೌಂಡು ಒಳಗೆ ಕುಂಬಳ ಕಾಯಿ ಮತ್ತು ಇನ್ನಿತರ ಮಾಟ ಮಂತ್ರಕ್ಕೆ ಉಪಯೋಗಿಸುವ ವಸ್ತುಗಳು ಮಂತ್ರಿಸಿದ ಸ್ಥಿತಿಯಲ್ಲಿದ್ದು ಸ್ಥಳೀಯ ಜನರು ಇದನ್ನು ಕಂಡು ಭಯ ಬೀತರಾಗಿದ್ದಾರೆ, ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಲಟ್ಟದಲ್ಲಿ ಸರಕಾರಿ ಜಾಗದಲ್ಲಿ ಸುಮಾರು 45 ಮನೆಗಳಿದ್ದು ಹತ್ತು ಹಲವಾರು ವರ್ಷಗಳಿಂದ ನೆಲೆಸಿದ್ದು ಕಳೆದ ಒಂದು ವರ್ಷದಿಂದ ಈ ಪ್ರದೇಶದಲ್ಲಿ ಅಲ್ಲಲ್ಲಿ ಮಾಂತ್ರಿಸಿದ ಲಿಂಬೆ ಹಣ್ನು ಮತ್ತಿತರ ವಸ್ತುಗಳು ಕಂಡು ಬರುತ್ತಿದ್ದು ಎರಡು ತಿಂಗಳಿನಿಂದ ಇದರ ಪ್ರಮಾಣ ಹೆಚ್ಚಿದ್ದು ಸ್ಥಳಿಯರು ಭಯಬೀತರಾಗಿ ಕೆಮ್ರಾಲ್ ಪಂಚಾಯಿತಿ ಆಡಳಿತ ಹಾಗೂ ಮುಲ್ಕಿ ಪೋಲೀಸ್ ಠಾಣೆ ದೂರು ನೀಡಿದ್ದಾರೆ. ಕೆಲ ದಿನಗಳ ಹಿಂದೆ ಅಮವಾಸ್ಯೆಯ ದಿನ ಶೀನ ಶೆಟ್ಟಿ ಎಂಬುವವರು ಈ ಪರಿಸರದಲ್ಲಿ ಯೇ ನಡೆದು ಹೋಗುತ್ತಿದ್ದಾಗ ಮಂತ್ರಿಸಿದ ವಸ್ತುಗಳು ಕಂಡು ಸುಮಾರು ನೂರಿನೂರು ಮೀಟರ್ ಹೋದಾಗ ಆಕಸ್ಮಾತ್ ಬಿದ್ದು 2 ದಿನಗಳ ನಂತರ ಅಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಕಳೆದ ಕೆಲದಿನಗಳ ಹಿಂದೆ ಯುವತಿಯೊಬ್ಬಳು ಪೇಟೆ ಹೋಗುವ ದಾರಿಯಲ್ಲಿ ಮೊಟ್ಟೆ ಮತ್ತು ಲಿಂಬೆ ಹಣ್ಣುಗಳು ಮಂತ್ರಿಸಿದ ಸ್ಥಿತಿಯಲ್ಲಿದ್ದನ್ನು ನೋಡಿ ತನ್ನ ಮೊಬೈಲಿನಲ್ಲಿ ಫೋಟೋ ತೆಗೆದಿದ್ದಳು. ಅದೇ ದಿನ ರಾತ್ರಿಯಿಂದ 3 ದಿನಗಳವರೆಗೆ ಕಾಕತಾಳಿಯವಾಗಿ ಅವಳಿಗೆ ಮಾತೇ ಬರದಂತಾಗಿತ್ತು ನಂತರ ದೇವರ ಪ್ರಸಾದ ಸ್ವೀಕರಿಸಿದ ಬಳಿಕ ಸಹಜಸ್ಥಿತಿಗೆ ಬಂದಳು. ಈಗಾಗಲೇ ಈ ಪರಿಸರ ಬಿಟ್ಟು ಬೇರೆಡೆ ವಾಸವಾದವರೂ ಇದ್ದಾರೆ. ಅಲ್ಲದೆ ಮಕ್ಕಳು ಶಾಲೆಗೆ ಹೋಗುವ ದಾರಿಯಲ್ಲಿ ಇಂತಹ ಕಾರ್ಯ ಮಾಡುತ್ತಿರುವುದು ಖಂಡನೀಯ ಎಂದು ಸ್ಥಳಿಯ ಎಂದು ಜನರಾಡಿಕೊಂಡಿದ್ದಾರೆ.

ಇದೀಗ ಮುಲ್ಲಟ್ಟದ ಸಾರ್ವಜನಿಕ ರುದ್ರಭೂಮಿಯ ಕಂಪೌಂಡ್ ಒಳಗೆ ಶನಿವಾರ ರಾತ್ರಿ ದೊಡ್ಡ ಪ್ರಮಾಣದಲ್ಲಿ ಮಂತ್ರಿಸಿದ ವಸ್ತುಗಳನ್ನಿ ವಿ ಮಾಡಿಟ್ಟ ಪರಿಸ್ಥಿತಿಯಲ್ಲಿ ಕಂಡು ಬಂದಿದ್ದು ಮೂರು ದೊಡ್ಡ ಬುಟ್ಟಿಗಳಲ್ಲಿ ಅರಳನ್ನು ತುಂಬಿಸಿ ಅದರಲ್ಲಿ ಕುಂಬಳಕಾಯಿ, ಕುಂಕುಮ, ಚಿಕ್ಕ ಮಡಿಕೆ, ಶೇಂದಿ, ಸರಾಯಿ, ಬಟ್ಟೆ, ಮೊಳೆಗಳು, ಮೊಟ್ಟೆ ಮಂತ್ರಿಸಿದ ನಿಂಬೆ ಕಾಯಿಗಳು, ಹೂವು ಮತ್ತು ಇನ್ನಿತರ ವಸ್ತುಗಳನ್ನು ಮಂತ್ರಿಸಿ ಇಟ್ಟಿದ್ದಾರೆ ಅಲ್ಲದೆ 3 ಕೋಳಿಗಳು ಕತ್ತು ಕೊಯ್ದ ಸ್ಥಿತಿಯಲ್ಲಿದ್ದು 3 ಜೀವಂತ ಕೋಳಿ ಮರಿಗಳು ಇದ್ದು ಇದನ್ನೆಲ್ಲ ಕಂಡು ಸ್ಥಳೀಯರು ಕೆಮ್ರಾಲ್ ಪಂಚಾಯಿತಿ ಮತ್ತು ಮುಲ್ಕಿ ಪೋಲೀಸರಿಗೆ ತಿಳಿಸಿದ್ದಾರೆ ಪೋಲೀಸರು ರಾತ್ರಿ ಗಸ್ತು ತಿರುಗುವುದನ್ನು ಹೆಚ್ಚಿಸುವ ಭರವಸೆ ನೀಡಿದ್ದಾರೆ.
ಕೆಮ್ರಾಲ್ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್, ಪಂಚಾಯಿತಿ ಸದಸ್ಯರಾದ ಮಯ್ಯದಿ, ಸುಧಾಕರ್ ಶೆಟ್ಟಿ ಭೇಟಿ ನೀಡಿ ಗ್ರಾಮಸ್ಥರು ಭಯ ಪಡದೆ ವದಂತಿ ಉಹಾಪೋಹಗಳನ್ನು ನಂಬದೆ ಧ್ಯೆರ್ಯದಲ್ಲಿರಬೇಕೆಂದು ಸೂಚಿಸಿದ್ದಾರೆ.

ಅಕ್ಷರ ಜ್ಞಾನದಿಂದ ವಂಚಿತರಾಗಿ ಪ್ರಾಪಂಚಿಕ ಜ್ಞಾನವಿಲ್ಲದೇ ಅಂಧಾಕಾರದಲ್ಲಿರುವ ಮುಗ್ಧ, ಬಡ ಜನರಲ್ಲಿ ಅಂಧಶ್ರದ್ಧೆಯನ್ನು ಬಿತ್ತುತ್ತಿರುವ ಮಾಟ-ಮಂತ್ರದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ. ಸಮಾಜದಲ್ಲಿ ವೈಚಾರಿಕತೆಯನ್ನೂ ಬೆಳಸಬೇಕಾಗಿದೆ. ಮಾನಸಿಕ ಖಿನ್ನತೆಯಿಂದ ಹೂರ ಬರಲು ದೆವ್ವ, ಭೂತ ಬಿಡಿಸುವವರ ಮೂರೆ ಹೋಗುತ್ತಿದ್ದವರು, ಇಂತಹ ಪ್ರಯತ್ನ ಮಾಡಿರಬಹುದು ಅಥವಾ ಕುಚೇಷ್ಟೆಗಾಗಿ ಪುಂಡು ಪೋಕರಿಗಳು ಇಂತಹ ಕೆಲಸ ಮಾಡಿರಬಹುದೇ??? ಒಟ್ಟಾರೆ ಮುಲ್ಲಟ್ಟ ಗ್ರಾಮಸ್ಥರಲ್ಲಿ ವಿವಿಧ ರೀತಿಯ ಗೊಂದಲ ಗೋಜಲುಗಳು ಮನದಲ್ಲಿ ಸುಳಿದಾಡುತ್ತಿದೆ.

ಧಾರ್ಮಿಕ ನಂಬಿಕೆಗಳ ಹೆಸರಿನಲ್ಲಿ ಜನರನ್ನು ಶೋಷಿಸುವ ಪ್ರಯತ್ನ ಇದಾಗದಿರಲಿ. ಯಾವಾಗಲೂ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳು ಹತ್ತಿರವಾದಾಗ ಲಿಂಬೆ ಹುಳಿ ಅರಿಶಿಣ ಕುಂಕುಮ ಹಾಕಿ ಪೂಜೆ ಮಾಡುತ್ತಿರುವುದು ಇತ್ತೀಚೆಗೆ ಜಾಸ್ತಿಯಾಗಿದೆ ಸಂಬಂಧಪಟ್ಟವರು ಶೀಘ್ರ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸುತ್ತೇವೆ ಇಂತಹ ಅನಾಚಾರಗಳಿಗೆ ನಿಯಂತ್ರಣ ಹೇರಬೇಕಿದೆ.
ಸ್ಥಳೀಯ ಗ್ರಾಮಸ್ಥರು 

Pakshikere-17111401 Pakshikere-17111402 Pakshikere-17111403 Pakshikere-17111404

Comments

comments

Comments are closed.

Read previous post:
Kinnigoli-15111407
ಮೊರಾರ್ಜಿ ವಸತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಕಿನ್ನಿಗೋಳಿ: ಕಮ್ಮಾಜೆ ಮೊರಾರ್ಜಿ ವಸತಿ ಶಾಲೆಯಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಸುಳ್ಯ ತಾಲೂಕಿನ ಪೆರಾಜೆ ಮೂಲದ 7ನೇ ತರಗತಿ ವಿದ್ಯಾರ್ಥಿ ಕಿಶನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾನಾಯಕ...

Close