ಗಣಕ ಯಂತ್ರ ಅವಾಂತರ

ಕಿನ್ನಿಗೋಳಿ: ಸರಕಾರವು ಜನ ಪರ ಯೋಜನೆಗಳನ್ನು ಬಡವರಿಗಾಗಿ ರೂಪಿಸುತ್ತಿದೆ ಆದರೆ ಸರಕಾರ ಹಾಗೂ ಇಲಾಖಾ ವತಿಯಿಂದ ಸೂಕ್ತ ರೀತಿಯಲ್ಲಿ ಅನುಷ್ಠಾನ ಹಾಗೂ ಜನರಿಗೆ ಸಮರ್ಪಕ ಮಾಹಿತಿ ನೀಡದಿದ್ದಲ್ಲಿ ಮೊದಲ ಹಂತದಲ್ಲಿಯೇ ಹೊಸ ಯೋಜನೆಯೊಂದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ ಘಟನೆ ಕಿನ್ನಿಗೋಳಿ ಪಂಚಾಯಿತಿಯಲ್ಲಿ ನಡೆಯಿತು.
ಐಸಿಐಸಿಐ ಲೊಂಬಾರ್ಡ್ ವಿಮಾ ಸಂಸ್ಥೆಯ ಸಂಯೋಜನೆಯಲ್ಲಿ ಜಾರಿಗೆ ಬಂದಿರುವ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯ ಬೇಜವ್ದಾರಿತನದಿಂದ ಕಿನ್ನಿಗೋಳಿ ಹಾಗೂ ಪರಿಸರದ ಗ್ರಾಮ ಪಂಚಾಯಿತಿಗಳ ಗ್ರಾಮಸ್ಥರು ನೊಂದಣಿಗಾಗಿ ಪರಿತಪಿಸಿದರು.
ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆಯಿಂದ ನಡೆಸಲ್ಪಡುವ ಐಸಿಐಸಿಐ ಲೊಂಬಾರ್ಡ್ ವಿಮಾ ಸಂಸ್ಥೆ ಪ್ರಸ್ತುತ ಪಡಿಸುತ್ತಿರುವ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯನ್ನು ಬಿಪಿಯಲ್ ಕಾರ್ಡ್‌ದಾರರು, ಬೀಡಿ ಕಾರ್ಮಿಕರು, ಗೃಹ ಕಾರ್ಮಿಕರು , ಎಮ್.ಜಿ.ಎನ್.ಆರ್, ಇ.ಜಿ.ಎ ಕಾರ್ಮಿಕರ ಕುಟುಂಬಗಳೀಗಾಗಿ ಕೇವಲ 30 ರೂ ಪಾವತಿಸಿ ಕುಟುಂಬದ 5 ಜನ ಸದಸ್ಯರಿಗೆ ರೂ. 30 ಸಾವಿರದವರೆಗೆ ಆರೋಗ್ಯ ವಿಮೆಯ ಸೌಲಭ್ಯ ದೊರೆಯುತ್ತಿದ್ದು ಅದರ ನೋಂದಣಿ ಕಾರ್ಯಕ್ರಮ ಮಂಗಳವಾರ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಆಯೋಜಿಸಲಾಗಿತ್ತು, ಗಣಕ ಯಂತ್ರದ ತಾಂತ್ರಿಕ ದೋಷ ಮತ್ತು ಸಿಬ್ಬಂದಿ ವರ್ಗದವರ ಕೊರತೆ, ಅನುಭವದ ಕೊರತೆ, ಹಾಗೂ ಇಲಖಾಧಿಕಾರಿಗಳ ದಿವ್ಯ ನಿರ್ಲಕ್ಷ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದೆ.
ಈ ಯೋಜನೆಗಾಗಿ ಮಂಗಳವಾರ ನೊಂದಣಿ ನಡೆಯುತ್ತಿದ್ದು 5 ಗಣಕ ಯಂತ್ರ ನೀಡಲಾಗುತ್ತದೆ ಎಂದ ಸಬಂಧ ಪಟ್ಟ ಅಧಿಕಾರಿಗಳು ಕೆಲವು ಕಡೆಗಳಲ್ಲಿ 2 ಮತ್ತೆ ಕೆಲವು ಕಡೆಗಳಲ್ಲಿ ಒಂದೇ ಗಣಕ ಯಂತ್ರ ನೀಡಿದ್ದು ಅದೂ ಸ್ವಲ್ಪ ಹೊತ್ತಿನಲ್ಲಿಯೇ ಕೆಟ್ಟು ಹೋಗಿತ್ತು, ಹಳೆಯಂಗಡಿಯಲ್ಲಿ ಪ್ರಿಂಟರ್ ಹಾಳಾಗಿದ್ದರೆ, ಕಿನ್ನಿಗೋಳಿಯಲ್ಲಿ ಅಧಿಕಾರಿಗಳು ತಂದ ಎರಡೂ ಗಣಕ ಯಂತ್ರಗಳು ತಟಸ್ಥ ಗೊಂಡಿತ್ತು.
ಪಡು ಪಣಂಬೂರು ಪಂಚಾಯಿತಿಯಲ್ಲಿ ಎರಡು ಗಣಕ ಯಂತ್ರಗಳಿಗೆ ಕೇವಲ ಒಬ್ಬ ಸಿಬ್ಬಂದಿ ನೀಡಲಾಗಿತ್ತು . ಅತಿಕಾರಿ ಬೆಟ್ಟು ಪಂಚಾಯಿತಿಯಲ್ಲಿ ತಾಂತ್ರಿಕ ಸಮಸ್ಯೆಯಿಂದ ನೊಂದಣಿ ನಿಲ್ಲಿಸಲಾಗಿದ್ದು, ಕಿಲ್ಪಾಡಿಯಲ್ಲಿ ತಾಂತ್ರಿಕ ದೋಷಗಳು ಕಂಡು ಬಂದಿತ್ತು. ಈ ನೊಂದಣಿ ಕಾರ್ಯಕ್ರಮ ಇವತ್ತು ಒಂದೇ ದಿನ ಎಂಬ ಮಾಹಿತಿ ಪಡೆದ ಗ್ರಾಮಸ್ಥರು ಪಂಚಾಯಿತಿಯಲ್ಲಿ ಸೇರಿದ್ದರು. ಎಳೆಯ ಮಕ್ಕಳನ್ನು ಹಿಡಿದುಕೊಂಡ ಮಹಿಳೆಯರು, ಶಾಲೆಗೆ ರಜೆ ಹಾಕಿ ಬಂದ ಮಕ್ಕಳು, ಮುದುಕರು, ದಿನ ಗೂಲಿ ನೌಕರರು ನೂರಾರು ಸಂಖ್ಯೆಯಲ್ಲಿ ಪಂಚಾಯಿತಿಯಲ್ಲಿ ಸೇರಿದ್ದು ನೊಂದಣಿಕಾರರನ್ನು ಸಾರ್ವಜನಿಕರು ತರಾಟೆಗೆ ತೆಗೆದು ಕೊಂಡರು, ಕಿನ್ನಿಗೋಳಿ, ಕಿಲ್ಪಾಡಿ, ಪಡು ಪಣಂಬೂರು, ಹಳೆಯಂಗಡಿ, ಅತಿಕಾರಿ ಬೆಟ್ಟು ಪಂಚಾಯಿತಿಗಳಲ್ಲಿ ಗ್ರಾಮಸ್ಥರು ರೊಚ್ಚಿಗೆದ್ದು ಪಂಚಾಯಿತಿ ಆಡಳಿತದೊಂದಿಗೆ ಮಾತಿನ ಚಕಮಕಿಯೂ ನಡೆದಿದೆ.

Kinnigoli-18111404

Comments

comments

Comments are closed.

Read previous post:
Kinnigoli-18111402
ವೃತ್ತಿಪರರ ಸನ್ಮಾನ ಹಾಗೂ ದತ್ತಿನಿಧಿ ಸಮರ್ಪಣೆ

ಕಿನ್ನಿಗೋಳಿ: ಸಮಾಜದ ನಾಗರಿಕರನ್ನು ಆರ್ಥಿಕವಾಗಿ ಮುನ್ನಡೆಯುವಂತಹ ಯೋಜನೆಗಳನ್ನು ಸೇವಾ ಸಂಸ್ಥೆಗಳು ಮಾಡಬೇಕು, ಪ್ರತಿಭಾನ್ವಿತ ಹಾಗೂ ಸಮಾಜದ ಏಳಿಗೆಗಾಗಿ ಸಹಕರಿಸುವವರನ್ನು ಗುರುತಿಸಬೇಕು ಎಂದು ರೋಟರಿ 3180 ವಲಯ 3ರ ಸಹಾಯಕ...

Close