ಮೂಲ್ಕಿ: ಗುದ್ದಲಿ ಪೂಜೆ

ಮೂಲ್ಕಿ: ಮೂಡಬಿದ್ರಿ ಕ್ಸೇತ್ರದಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ರಾಜ್ಯ ಸರ್ಕಾರವು ಹಲವಾರು ಜನಪರ ಯೋಜನೆಗಳನ್ನು ಹಮ್ಮಿಕೊಂಡಿದ್ದು ಜನಪ್ರತಿನಿಧಿಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕೆಂದು ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ ಅಭಯಚಂದ್ರ ಹೇಳಿದರು.
ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಮೂಲ್ಕಿಯ ಬಪ್ಪನಾಡು ದೇವಳದ ಎದುರುಗಡೆ ರಾಷ್ತ್ರೀಯ ಹೆದ್ದಾರಿಯಿಂದ ವಿಜಯ ಕಾಲೇಜು ಮೂಲಕ ಕೆಂಪು ಗುಡ್ಡೆ, ಕೊಲಕಾಡಿ, ಕವತ್ತಾರು ಮೂಲಕ ಏಳಿಂಜೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮೂಲ್ಕಿಯ ಬಪ್ಪನಾಡು ದೇವಳದಿಂದ ವಿಜಯ ಕಾಲೇಜು ವರೆಗೆ 2014-15 ರ ಕೇಂದ್ರ ರಸ್ತೆ ನಿಧಿಯಲ್ಲಿ 2 ಕೋಟಿ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳ್ಳಲಿರುವ ರಸ್ತೆಯ ಗುದ್ದಲಿ ಪೂಜೆಯನ್ನು ಮೂಲ್ಕಿ ಬಪ್ಪನಾಡು ದೇವಳದ ಎದುರುಗಡೆಯಲ್ಲಿ ನೆರವೇರಿಸಿ ಮಾತನಾಡಿದರು. ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಚ ಬಂಗೇರ,ಉಪಾಧ್ಯಕ್ಷೆ ವಸಂತಿ ಭಂಡಾರಿ,ಮಾಜಿ ಅಧ್ಯಕ್ಷ ಬಿ ಎಂ ಆಸೀಫ್, ಸ್ತಾಯಿ ಸಮಿತಿ ಅಧ್ಯಕ್ಷ ಸುನೀಲ್ ಆಳ್ವ,ವಿಪಕ್ಷ ನಾಯಕಿ ವಿಮಲಾ ಪೂಜಾರಿ,ಕಿಲ್ಪಾಡಿ ಪಂಚಾಯತ್ ಅಧ್ಯಕ್ಷೆ ಶಾರದಾ ವಸಂತ್,ಹಳೆಯಂಗಡಿ ಪಂಚಾಯತ್ ಅಧ್ಯಕ್ಷೆ ಪೂಣಿಮಾ ಮಧು,ಜಿಲ್ಲಾ ನಗರಾಭಿವೃದ್ದಿ ಕೋಶ ಮಂಗಳೂರಿನ ಕಾರ್ಯಪಾಲಕ ಅಭಿಯಂತರರಾದ ಶ್ರೀಧರ್,ಮೂಲ್ಕಿ ನಗರ ಪಂಚಾಯತ್ ಸದಸ್ಯರಾದ ಪುತ್ತುಬಾವು,ಯೋಗೀಶ್ ಕೋಟ್ಯಾನ್ ಮತ್ತಿತರರು ಉಪಸ್ತಿತರಿದ್ದರು.

Bhagyavan Sanil

Mulki-18111401

Comments

comments

Comments are closed.

Read previous post:
Kinnigoli-17111409
57ನೇ ವರ್ಷದ ಭಜನಾ ಮಂಗಲೋತ್ಸವ

ಕಿನ್ನಿಗೋಳಿ : ಐಕಳ ದಾಮಸಕಟ್ಟೆಯ ಶ್ರೀ ರಾಮಕೃಷ್ಣ ಭಜನಾ ಮಂದಿರದ 57ನೇ ಭಜನಾ ಮಂಗಲೋತ್ಸವ ನಡೆಯಿತು. ಭಜನ ಮಂದಿರದ ಅಧ್ಯಕ್ಷ ರಾಮದಾಸ ಶೆಣೈ, ಅರ್ಚಕ ಶ್ರೀಧರ್ ಭಟ್ ಏಳಿಂಜೆ,...

Close