ಜಯ.ಸಿ.ಸುವರ್ಣರಿಗೆ ನಾಗರೀಕ ಸನ್ಮಾನ

 ಮೂಲ್ಕಿ: ಹೊರನಾಡ ಕನ್ನಡಿಗರಾಗಿ ಸಮಾಜದ ಎಲ್ಲಾ ವರ್ಗಗಳ ಜನರಿಗಾಗಿ ಆರ್ಥಿಕ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಂಘಟನಾತ್ಮಕ ಚಟುವಟಿಕೆಗಳಿಂದ ಜಯ.ಸಿ.ಸುವರ್ಣರು ರಾಷ್ಟ್ರ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಜಯ.ಸಿ.ಸುವರ್ಣರ ಅಭಿನಂದನಾ ಸಮಿತಿಯ ಸಂಯೋಜನೆಯಲ್ಲಿ ಸೋಮವಾರ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ರುಕ್ಕರಾಮ ಸಾಲ್ಯಾನ್ ಸಭಾಗ್ರಹದಲ್ಲಿ ಕರ್ನಾಟಕ ಸರ್ಕಾರದಿಂದ 2014ನೇ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಮಾಜ ಸೇವಕ ಜಯ.ಸಿ.ಸುವರ್ಣರಿಗೆ ನಾಗರೀಕ ಸನ್ಮಾನ ನಡೆಸಿ ಮಾತನಾಡಿದರು.
ಅರ್ಹರಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿ ಸಲ್ಲಬೇಕು ಎಂಬ ಮುಖ್ಯಮಂತ್ರಿಗಳ ಬಿಗು ನಿಲುವಿನೊಂದಿಗೆ ಈ ಬಾರಿ ನೀಡಲಾದ ಪ್ರಶಸ್ತಿಗಳಲ್ಲಿ ಅರ್ಹ ಸೇವೆ ನಡೆಸಿದ ಜಯ ಸುವರ್ಣರಿಂದಾಗಿ ಪ್ರಶಸ್ತಿಯ ಗೌರವ ಹೆಚ್ಚಾಗಿದೆ ಎಂದರು.
ದ,ಕ ಸಂಸದ ನಳಿನ್ ಕುಮಾರ್ ಕಟೀಲು ರವರು ಶುಭಾಶಂಶನೆ ಗೈದು,
ನಾರಾಯಣ ಗುರುಗಳ ತತ್ವದಂತೆ ಸಮಾಜದ ಆರ್ಥಿಕ, ಸಾಮಾಜಿಕ ಉನ್ನತಿಗೆ ಸಹಕರಿಸಿದ ಜಯ ಸಿ.ಸುವರ್ಣರು ಪ್ರಕಾಶಮಾನವಾದ ನಕ್ಷತ್ರದಂತೆ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕಟೀಲು ದೇವಳದ ಅರ್ಚಕ ಕೆ,ಲಕ್ಷ್ಮೀ ನಾರಾಯಣ ಆಸ್ರಣ್ಣ ಮಾತನಾಡಿ, ಕರ್ತವ್ಯದಲ್ಲಿ ದೇವರನ್ನು ಕಾಣುವ ಗುಣ ಗುರಿ ಸಾಧನೆಯ ಛಲ ಜಯ ಸುವರ್ಣರನ್ನು ಉನ್ನತಿ ಗಳಿಸಲು ಸಹಕರಿಸಿದೆ ಎಂದರು. ಕೇಂದ್ರ ಶಾಫಿ ಜುಮ್ಮ ಮಸೀದಿಯ ಖತೀಬರಾದ ಸೇಖುನಾ ಮಹಮ್ಮದ್ ಸಲೀಂ ಫೈಝಿ,ಉಡುಪಿ ಕ್ರಿಸ್ತೇಯ ಒಕ್ಕೂಟದ ನಿರ್ದೇಶಕರಾದ ಫಾ. ವಿಲಿಯಂ ಮಾರ್ಟಿಸ್ ಆಶೀರ್ವಚನ ನೀಡಿದರು. ಮೂಲ್ಕಿ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ ಅಭಿನಂದನಾ ಭಾಷಣ ಗೈದರು. ಸಭಾಧ್ಯಕ್ಷತೆಯನ್ನು ಯುವಜನ ಸೇವಾ ಮೀನುಗಾರಿಕಾ ಸಚಿವರಾದ ಅಭಯಚಂದ್ರ ಜೈನ್ ವಹಿಸಿದ್ದರು. ಅತಿಥಿಗಳಾಗಿ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ. ಮೂಲ್ಕಿ ಸೀಮೆಯ ಅರಸರಾದ ದುಗ್ಗಣ ಸಾವಂತರು, ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಉಪಾಧ್ಯಕ್ಷ ಕೆ.ಪ್ರಭಾಕರ ಬಂಗೇರ ಕಾರ್ಕಳ, ಮೂಲ್ಕಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ಬಂಗೇರಾ, ಸಮಿತಿ ಗೌರವ ಸಲಹೇದಾರರಾದ ಎನ್.ಎಸ್.ಮನೋಹರ ಶೆಟ್ಟಿ,ಎಂ.ಎಚ್.ಅರವಿಂದ ಪೂಂಜಾ,ಎಚ್.ವಿ.ಕೋಟ್ಯಾನ್,ಎಂ.ಬಿ ನೂರ್ ಮೊಹಮ್ಮದ್,ಪಯ್ಯೋಟ್ಟು ಸದಾಶಿವ ಸಾಲ್ಯಾನ್,ನಾಗೇಶ್ ಬಪ್ಪನಾಡು,ಚಂದ್ರಶೇಖರ ಸುವರ್ಣ, ಮೋಹನದಾಸ್ ಪಾವೂರು ಬಂಡಾರಮನೆ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಿ.ಸಾಲ್ಯಾನ್, ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ಕೋಟ್ಯಾನ್, ಕೋಶಾಧಿಕಾರಿಗಳಾದ ಪ್ರಕಾಶ ಸುವರ್ಣ,ವಿಜಯ ಕುಮಾರ್ ಕುಬೆವೂರು ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ಹರಿಶ್ಚಂದ್ರ.ಪಿ.ಸಾಲ್ಯಾನ್ ಸ್ವಾಗತಿಸಿದರು. ನರೇಂದ್ರ ಕೆರೆಕಾಡು ಮತ್ತು ದೀಕ್ಷಾ ಸುವರ್ಣ ನಿರೂಪಿಸಿದರು. ಯೋಗೀಶ್ ಕೋಟ್ಯಾನ್ ವಂದಿಸಿದರು. ಸನ್ಮಾನ ಸಮಾರಂಭದ ಮೊದಲು ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ವಿವಿಧ ವಾದ್ಯ ಗೋಷ್ಠಿ ಪುಷ್ಪಾಲಂಕೃತ ವಾಹನದಲ್ಲಿ ಜಯ ಸಿ.ಸುವರ್ಣರನ್ನು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘಕ್ಕೆ ಕತೆತಂದು ಬಳಿಕ ಗುರು ಪೂಜೆಯಾಗಿ ಪ್ರಸಾದ ಸ್ವೀಕರಿಸಿದ ಬಳಿಕ ಸನ್ಮಾನ ಸಮಾರಂಭಕ್ಕೆ ಕರೆತರಲಾಯಿತು.

Bhagyavan Sanil

Kinnigoli-19111410

Comments

comments

Comments are closed.

Read previous post:
Kinnigoli-18111403
ತಾಳಿಪಾಡಿ ಶಾಂತಿ ನಗರ ಮದ್ರಸ ಕಟ್ಟಡ ಶಿಲಾನ್ಯಾಸ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ತಾಳಿಪಾಡಿ ಶಾಂತಿ ನಗರದ ಖಿಲಿರಿಯಾ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ಕಮಿಟಿ ಇದರ ಆಶ್ರಯದಲ್ಲಿ ಸೋಮವಾರ ರಾತ್ರಿ ಸಮುದಾಯ ಭವನ ವಿಸ್ತರಣೆ...

Close