ವೃತ್ತಿಪರರ ಸನ್ಮಾನ ಹಾಗೂ ದತ್ತಿನಿಧಿ ಸಮರ್ಪಣೆ

ಕಿನ್ನಿಗೋಳಿ: ಸಮಾಜದ ನಾಗರಿಕರನ್ನು ಆರ್ಥಿಕವಾಗಿ ಮುನ್ನಡೆಯುವಂತಹ ಯೋಜನೆಗಳನ್ನು ಸೇವಾ ಸಂಸ್ಥೆಗಳು ಮಾಡಬೇಕು, ಪ್ರತಿಭಾನ್ವಿತ ಹಾಗೂ ಸಮಾಜದ ಏಳಿಗೆಗಾಗಿ ಸಹಕರಿಸುವವರನ್ನು ಗುರುತಿಸಬೇಕು ಎಂದು ರೋಟರಿ 3180 ವಲಯ 3ರ ಸಹಾಯಕ ಗವರ್ನರ್ ಎಮ್.ಜಿ.ನಾಗೇಂದ್ರ ಹೇಳಿದರು.
ಕಿನ್ನಿಗೋಳಿ ರೋಟರಿ ಕ್ಲಬ್‌ನ ಆಶ್ರಯದಲ್ಲಿ ಸೋಮವಾರ ಕಿನ್ನಿಗೋಳಿ ಸಹಕಾರಿ ಸೌಧ ಸಭಾಭವನದಲ್ಲಿ ನಡೆದ ವೃತ್ತಿಪರರ ಸನ್ಮಾನ ಹಾಗೂ ದತ್ತಿನಿಧಿ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ನಿವೃತ್ತ ವಾಯು ದಳದ ಅಧಿಕಾರಿ ರಘುಪತಿ ಭಟ್, ಮೆಸ್ಕಾಂನ ನಿವೃತ್ತ ಅಧಿಕಾರಿ ಎಲಿಯಾಸ್, ಕೃಷಿಕ ವಿಶ್ವನಾಥ ಶೆಟ್ಟಿ ಮೂಡುದೇವಸ್ಯ ಕೊಡೆತ್ತೂರು, ನಾಟಿವೈದ್ಯ ಮಹಾಬಲ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ವಿಲಿಯಂ ಸಿಕ್ವೇರಾ, ನಿಕಟಪೂರ್ವ ಅಧ್ಯಕ್ಷ ರಾಬರ್ಟ್ ರೋಸಾರಿಯೊ, ಕಾರ್ಯದರ್ಶಿ ಗಂಗಾಧರ ಶೆಟ್ಟಿ, ಸುರೇಂದ್ರನಾಥ ವಿ. ಶೆಣೈ , ವೇದವ್ಯಾಸ ಉಡುಪ ಮತ್ತಿತರರು ಉಪಸ್ಥಿತರಿದ್ದರು.

Kinnigoli-18111402

Comments

comments

Comments are closed.

Read previous post:
Kinnigoli-19111410
ಜಯ.ಸಿ.ಸುವರ್ಣರಿಗೆ ನಾಗರೀಕ ಸನ್ಮಾನ

 ಮೂಲ್ಕಿ: ಹೊರನಾಡ ಕನ್ನಡಿಗರಾಗಿ ಸಮಾಜದ ಎಲ್ಲಾ ವರ್ಗಗಳ ಜನರಿಗಾಗಿ ಆರ್ಥಿಕ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಂಘಟನಾತ್ಮಕ ಚಟುವಟಿಕೆಗಳಿಂದ ಜಯ.ಸಿ.ಸುವರ್ಣರು ರಾಷ್ಟ್ರ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ...

Close