ತಾಳಿಪಾಡಿ ಶಾಂತಿ ನಗರ ಮದ್ರಸ ಕಟ್ಟಡ ಶಿಲಾನ್ಯಾಸ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ತಾಳಿಪಾಡಿ ಶಾಂತಿ ನಗರದ ಖಿಲಿರಿಯಾ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ಕಮಿಟಿ ಇದರ ಆಶ್ರಯದಲ್ಲಿ ಸೋಮವಾರ ರಾತ್ರಿ ಸಮುದಾಯ ಭವನ ವಿಸ್ತರಣೆ ಹಾಗೂ ಮದ್ರಸ ಕಟ್ಟಡದ ಶಿಲಾನ್ಯಾಸವನ್ನು ಅಲ್ ಹಾಜ್ ಅಸ್ಸಯ್ಯದ್ ಜಾಫರ್ ಸಾದಿಕ್ ತಂಗಳ್ ಕುಂಬೋಳ್ ನೆರವೇರಿಸಿ, ಜಲಾಲಿಯ ದಿಕ್ರ್ ಮಜ್ಲಿಸ್ ಧಾರ್ಮಿಕ ಕಾರ್ಯಕ್ರಮ ನಡೆಸಿ ಕೊಟ್ಟರು.
ಹಾಜಿ ಟಿ. ಎಚ್. ಮಯ್ಯದ್ದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಿ. ಜೆ. ಅಹಮ್ಮದ್ ಮದನಿ ಪ್ರಾರ್ಥಿಸಿದರು. ಮುಕ್ಕ ಮಸೀದಿ ಅಧ್ಯಕ್ಷ ಅಬ್ದುಲ್ ರಜಾಕ್, ಸೂರಿಂಜೆ ಮಸೀದಿ ಅಧ್ಯಕ್ಷ ಹಾಜಿ ಟಿ. ಸಯ್ಯದ್, ಕರ್ನಿರೆ ಮಸೀದಿ ಅಧ್ಯಕ್ಷ ಬಿ. ಮಹಮ್ಮದ್, ಸುರತ್ಕಲ್ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್, ಉದ್ಯಮಿ ಎಚ್. ಕೆ. ಮಹಮ್ಮದ್ ಆಲಿ, ಪಿ. ಎಸ್. ರಿಝ್‌ವಾನ್ ಅಹಮದ್, ಕಟ್ಟಡ ಸಮಿತಿ ಅಧ್ಯಕ್ಷ ಟಿ. ಹಸನಬ್ಬ , ಅಬೂಬಕ್ಕರ್ ಸಿದ್ಧೀಕ್, ಖತೀಬರಾದ ಅಬ್ದುಲ್ ಲತೀಫ್ ಸಖಾಫಿ, ಹಸನ್ ಸಖಾಫಿ, ಸುಲೈಮಾನ್ ನೂರಿ ಅಮಾಣಿ, ಮುಹ್ಮಮದ್ ನಝೀರ್ ಮದನಿ, ಅಬ್ದುಲ್ ರಝಾಕ್, ಎಸ್.ಎಮ್.ಎ ಸುರತ್ಕಲ್ ರೇಂಜ್ ಅಧ್ಯಕ್ಷ ಯಾಕೂಬ್ ಇಡ್ಯಾ, ಅಬ್ದುಲ್ ಜಲೀಲ್, ಟಿ. ಕೆ. ಅಬ್ದುಲ್ ಕಾದರ್ ಉಪಸ್ಥಿತರಿದ್ದರು.

Kinnigoli-18111403

Comments

comments

Comments are closed.

Read previous post:
Mulki-18111401
ಮೂಲ್ಕಿ: ಗುದ್ದಲಿ ಪೂಜೆ

ಮೂಲ್ಕಿ: ಮೂಡಬಿದ್ರಿ ಕ್ಸೇತ್ರದಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ರಾಜ್ಯ ಸರ್ಕಾರವು ಹಲವಾರು ಜನಪರ ಯೋಜನೆಗಳನ್ನು ಹಮ್ಮಿಕೊಂಡಿದ್ದು ಜನಪ್ರತಿನಿಧಿಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ...

Close