ಸಂಸದ ಕುತ್ತೆತ್ತೂರು ಬಿಜೆಪಿ ಕಛೇರಿಗೆ ಭೇಟಿ

ಮೂಲ್ಕಿ: ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ಆಡಳಿತ ವೈಖರಿ ಅಂತರಾಷ್ಟ್ರೀಯ ಮಟ್ಟದಲ್ಲಿ ವಿದೇಶಿಯರನ್ನು ಆಕರ್ಶಿಸುತ್ತಿದ್ದು ದೇಶದಲ್ಲಿ ಪಕ್ಷದ ಭದ್ರತೆಗಾಗಿ ಗ್ರಾಮೀಣ ಮಟ್ಟದಿಂದ ರಾಜ್ಯದವರೆಗೆ ಬಿಜೆಪಿ ಆಡಳಿತ ಸ್ಥಾಪನೆಯಾಗುವಂತೆ ಪಕ್ಷದ ಕಾರ್ಯಕರ್ತರು ಹೆಚ್ಚಿನ ಉತ್ಸಾಹದಿಂದ ಕಾರ್ಯ ತತ್ಪರರಾಗಬೇಕು ಎಂದು ದ.ಕ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಕುತ್ತೆತ್ತೂರು ಬಿಜೆಪಿ ಕಛೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮಾತನಾಡಿದರು,
ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿ ಮತ್ತು ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಆದ ದೇಶದ ಪ್ರಗತಿ ಪ್ರಧಾನಿಯವರ ದೂರ ದರ್ಶಿತ್ವದ ಯೋಜನೆಗಳನ್ನು ಕಾರ್ಯಕರ್ತರು ಅರ್ಥೈಸಿಕೊಂಡು ಜನ ಸಾಮಾನ್ಯರಿಗೆ ತಿಳಿಸುವ ಮೂಲಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಬೇಕು ಎಂದರು.
ಈ ಸಂದರ್ಭ ಬಿಜೆಪಿ ಸ್ಥಾನೀಯ ಸಮಿತಿ ವತಿಯಿಂದ ಸಂಸದರನ್ನು ಅಭಿನಂದಿಸಲಾಯಿತು. ಈ ಸಂದರ್ಭ ಜಿ.ಪಂ ಸದಸ್ಯರಾದ ಈಶ್ವರ ಕಟೀಲು.ರಿತೇಶ್ ಶೆಟ್ಟಿ,ತಾ.ಪಂ ಸದಸ್ಯ ಜೋಕಿಮ್ ಡಿಸೋಜಾ,ಪೆರ್ಮುದೆ ಪಂ.ಅಧ್ಯಕ್ಷ ಸಂದೇಶ್ ಪೂಜಾರಿ, ಶಕ್ತಿ ಕೇಂದ್ರದ ನವೀನ್ ಜಂತ ಬೆಟ್ಟುಧೀರಜ್ ಕುತ್ತೆತ್ತೂರು ಬಜಾವು ಪ್ರಸಾದ್ ಅಂಚನ್, ನಿತಿನ್ ನಾಯರ್‌ಕೋಡಿ ಉಪಸ್ಥಿತರಿದ್ದರು.

Arun Kumar Ullanje

Kinnigoli-19111409

Comments

comments

Comments are closed.

Read previous post:
Kinnigoli-19111408
ಶ್ರೀ ಕೋಡ್ದಬ್ಬು ದೈವಸ್ಥಾನಕ್ಕೆ ಸಂಸದ ಭೇಟಿ

ಕಿನ್ನಿಗೋಳಿ: ಕುತ್ತೆತ್ತೂರು ಬಜಾವು ಮಂಜಕೊಟ್ಯ ಶ್ರೀ ಕೋಡ್ದಬ್ಬು ದೈವಸ್ಥಾನಕ್ಕೆ ದ.ಕ ಸಂಸದ ನಳಿನ್ ಕುಮಾರ್ ಕಟೀಲು ಮಂಗಳವಾರ ಭೇಟಿ ನೀಡಿದರು ಧಾರ್ಮಿಕ ಕ್ಷೇತ್ರಗಳಲ್ಲಿ ಜನರು ಸಂಘಟಿತರಾಗುವ ಮೂಲಕ...

Close