ಬಾವಿಗೆ ಬಿದ್ದು ಸಾವು

ಕಿನ್ನಿಗೋಳಿ: ಮೂಲ್ಕಿ ಪೋಲೀಸ್ ಠಾಣಾ ವ್ಯಾಪ್ತಿಯ ಐಕಳ ಗ್ರಾಮದ ಏಳಿಂಜೆ ಸಮೀಪದ ಕೊಂಜಾಲು ಗುತ್ತುವಿನ ಬಳಿಯ ದಿನೇಶ್ ಅವರ ಗದ್ದೆ ಬದಿಯ ಬಾವಿಗೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ಏಳಿಂಜೆಯ ಪೂಜಾರಿ ಮನೆ ನಿವಾಸಿ ದಿ. ತನಿಯ ಪೂಜಾರಿ ಅವರ ಏಳು ಮಕ್ಕಳಲ್ಲಿ ಕೊನೆ ಮಗನಾದ ಸಾಧು ಯಾನೆ ಸದಾಶಿವ ಪೂಜಾರಿ(37) ಸಾವಿಗೀಡಾದ ದುರ್ದೈವಿ.

ಅತೀವ ಕುಡಿತದ ಚಟ: ಕೂಲಿ ಕೆಲಸ ಮಾಡುತ್ತಿದ್ದ ಮೃತರಿಗೆ ವಿಪರೀತ ಕುಡಿತದ ಚಟವಿದ್ದು ಮೂರು ವರ್ಷದಿಂದ ತನ್ನ ಮನೆಗೆ ಸರಿಯಾಗಿ ಹೋಗದೆ ಅಲೆಮಾರಿಯಂತೆ  ಹೋದಲ್ಲಿ ವಾಸವಾಗಿರುತ್ತಿದ್ದರು. ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಕೈಯಲ್ಲಿ ಹಣವಿಲ್ಲದೆ ಖಿನ್ನತೆ: ಮೃತ ಸಾಧು ಪೂಜಾರಿ ಏಳಿಂಜೆಯ ಹರೀಶ್ ಅವರೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಹಾಗೂ ಅವರ ಮನೆ ಬಳಿ ವಾಸ ಮಾಡುತ್ತಿದ್ದರು. ಕಳೆದ ೫ ದಿನಗಳ ಹಿಂದೆ ರಿಕ್ಷಾದಲ್ಲಿ ಹೋಗುತ್ತಿರುವಾಗ ರಿಕ್ಷಾ ಮಗುಚಿ ಬಿದ್ದು ಕೈ, ಕಾಲುಗಳಿಗೆ ಗಾಯವಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆನಂತರ ಕೂಲಿ ಕೆಲಸಕ್ಕೆ ಹೋಗಲಾಗದೆ ಅನ್ಯ ಮನಸ್ಕರಾಗಿ ಮಾನಸಿಕವಾಗಿ ಖಿನ್ನರಾಗಿದ್ದರು. ಮಂಗಳವಾರ ರಾತ್ರಿ ಹರೀಶ್ ಅವರ ಮನೆಯ ಬಳಿ ನಿದ್ರಿಸಿದ್ದ ಮರುದಿನ ಮುಂಜಾನೆಯಿಂದ ನಾಪತ್ತೆಯಾಗಿದ್ದ. ಹರೀಶ್ ಹಾಗೂ ಮೃತನ ಅಣ್ಣ ಉಮೇಶ್ ಪೂಜಾರಿ ಪೋಲೀಸರಲ್ಲಿ ನಾಪತ್ತೆಯ ಬಗ್ಗೆ ದೂರು ದಾಖಲಿಸಿದ್ದರು.ಶುಕ್ರವಾರ ಬೆಳಿಗ್ಗೆ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಪೋಲೀಸರು ಸ್ಥಳ ಮಹಜರು ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Kinnigoli-21111401

Comments

comments

Comments are closed.

Read previous post:
Kinnigoli-21111402
ರಾಜ್ಯ ಮಟ್ಟದ ಜ್ಯೂನಿಯರ್ ಪವರ್ ಲಿಪ್ಟಿಂಗ್ ಸ್ಪರ್ಧೆ

ಕಿನ್ನಿಗೋಳಿ: ಭದ್ರಾವತಿಯಲ್ಲಿ ನಡೆದ ರಾಜ್ಯ ಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆಯ ಸಬ್ ಜ್ಯೂನಿಯರ್ ವಿಭಾಗದಲ್ಲಿ ಕಿನ್ನಿಗೋಳಿ ವೀರ ಮಾರುತಿ ವ್ಯಾಯಾಮ ಶಾಲೆಯ ಸದಸ್ಯರಾದ ಶುಭದೀಪ್ ದ್ವಿತೀಯ ಸ್ಥಾನ...

Close