ಮೂಲ್ಕಿ: ವಾರ್ಷಿಕ ಕ್ರೀಡಾ ಕೂಟ

ಮೂಲ್ಕಿ: ದೈಹಿಕ ಶಿಕ್ಷಣ ಸಂಕೀರ್ಣ ವ್ಯವಸ್ಥೆಯನ್ನುಹೊಂದಿದ್ದು ಆರೋಗ್ಯ ಮತ್ತು ಮಾನಸಿಕ ಉನ್ನತಿಯೊಂದಿಗೆ ಸರ್ವಾಂಗೀಣ ಬೆಳವಣಿಗೆಯನ್ನು ನೀಡುವುದರಿಂದ ವಿದ್ಯಾಕ್ಷೇತ್ರಗಳಲ್ಲಿ ಶೈಕ್ಷಣಿಕ ಪಠ್ಯದಂತೆ ಫಲಿತಾಂಶ ಕೇಂದ್ರೀಕೃತವಾಗಬೇಕು ಎಂದು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ಶೆಲ್ವೇಂದ್ರನ್ ಹೇಳಿದರು.
ಮೂಲ್ಕಿ ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವಾರ್ಷಿಕ ಕ್ರೀಡಾ ಕೂಟವನ್ನು ಶುಕ್ರವಾರ ಕ್ರೀಡಾ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣವು ಕೇವಲ ಕ್ರೀಡೆಯನ್ನು ಪರಿಚಯಿಸುವಲ್ಲಿಗೆ ಮುಗಿಯುತ್ತಿದ್ದು ಮುಂದುವರಿದ ದೇಶಗಳಂತೆ ದೈಹಿಕ ಶಿಕ್ಷಣದಲ್ಲಿ ಕ್ರೀಡೆ,ಆಹಾರ,ಆರೋಗ್ಯ ರಕ್ಷಣೆ ಹಾಗೂ ವ್ಯಾಯಾಮಗಳಂತ ಹಲವು ಆಯಾಮಗಳನ್ನು ಹೊಂದಿರುವ ಈ ಶಿಕ್ಷಣವನ್ನು ನೀಡಿ ಫಲಿತಾಂಶ ಕೇಂದ್ರೀಕೃತವಾಗುವಂತೆ ಮಾಡಿದಲ್ಲಿ ದೇಶದ ಕ್ರೀಡಾ ಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ.ಪಿ.ಸಾಲ್ಯಾನ್ ವಹಿಸಿ ಕ್ರೀಡಾ ದ್ವಜಾರೋಹಣವನ್ನು ನಡೆಸಿ
ಶುಭ ಹಾರೈಸಿದರು.ಈ ಸಂದರ್ಭ ಮೂಲ್ಕಿ ಶ್ರೀ ನಾರಾಯಣ ಗುರು ಮಂದಿರದಲ್ಲಿ ಬೆಳಗಿದ ಕ್ರೀಡಾ ಜ್ಯೋತಿ ಯೊಂದಿಗೆ ಕಾಲೇಜಿನ ಜಿಲ್ಲಾ ಪಟ್ಟದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿದರು.ಎನ್.ಸಿ.ಸಿ ವಿದ್ಯಾರ್ಥಿಗಳಿಂದ ಆಕರ್ಷಕ ಕವಾಯತು ನಡೆಯಿತು. ವಿದ್ಯಾ ಸಂಸ್ಥೆಯ ವಿವಿಧ ಸಂಘಗಳ ಸದಸ್ಯರು ದ್ವಜ ಕವಾಯತು ನಡೆಸಿದರು. ಕಾಲೇಜಿನ ಸಂಚಾಲಕರಾದ ಎಚ್.ವಿ.ಕೋಟ್ಯಾನ್,ಮೂಲ್ಕಿ ಪ.ಪಂ ಮಾಜಿ ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್,ನಾರಾಯಣ ಗುರು ಸಮೂಹ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ಬಾಲಚಂದ್ರ ಸನಿಲ್,ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ,ಪ್ರಾಂಶುಪಾಲೆ ಪ್ರೊ.ಶಶಿಲೇಖ,ದೈಹಿಕ ಶಿಕ್ಷಣ ನಿರ್ದೇಶಕ ನವೀನ್ ಪೂಜಾರಿ,ದೈಹಿಕ ಶಿಕ್ಷಕಿ ವಂದನಾ ಶಿಕ್ಷಕ ರಕ್ಷಕ ಮಂಡಳಿ ಸದಸ್ಯರಾದ ಪ್ರಮೋದ್ ಕುಮಾರ್,ರೇಷ್ಮಾ,ಮೊಹಮ್ಮದ್ ಹುಸೈನ್,ರೆನಿಟಾ, ವೇದವ್ಯಾಸ ಉಪಸ್ಥಿತರಿದ್ದರು.

Bhagyavan Sanil

Mulki-21111405

 

 

 

Comments

comments

Comments are closed.

Read previous post:
Kinnigoli-21111401
ಬಾವಿಗೆ ಬಿದ್ದು ಸಾವು

ಕಿನ್ನಿಗೋಳಿ: ಮೂಲ್ಕಿ ಪೋಲೀಸ್ ಠಾಣಾ ವ್ಯಾಪ್ತಿಯ ಐಕಳ ಗ್ರಾಮದ ಏಳಿಂಜೆ ಸಮೀಪದ ಕೊಂಜಾಲು ಗುತ್ತುವಿನ ಬಳಿಯ ದಿನೇಶ್ ಅವರ ಗದ್ದೆ ಬದಿಯ ಬಾವಿಗೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ...

Close