ಕ್ರೀಡೆಯನ್ನು ವೃತವಾಗಿ ಸ್ವೀಕರಿಸಬೇಕು

ಕಿನ್ನಿಗೋಳಿ : ಕಠಿಣ ಪರಿಶ್ರಮ ಮುಖೇನ ಕ್ರೀಡೆಯನ್ನು ವೃತವಾಗಿ ಸ್ವೀಕರಿಸಿದಾಗ ಸಾಧನೆಯ ಶಿಖರವೇರಲು ಸಾಧ್ಯ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅಮೇರಿಕದ ಲಾಸ್ ವೇಗಸ್‌ನಲ್ಲಿ ಜರುಗಿದ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಅವಳಿ ಸ್ವರ್ಣಗಳನ್ನು ಗೆದ್ದ ಮತ್ತು ಕರ್ನಾಟಕ ಸರಕಾರದ ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಕ್ಷತಾ ಪೂಜಾರಿ ಬೋಳ ಹಾಗೂ ಅಮೇರಿಕದ ಲಾಸ್ ವೇಗಸ್‌ನಲ್ಲಿ ಅವಳಿ ಸ್ವರ್ಣ ವಿಜೇತ ವಿಜಯ ಕಾಂಚನ್ ಅವರಿಗೆ ಶನಿವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ಪರಿಸರದ ಸಂಘ ಸಂಸ್ಥೆಗಳ ಪರವಾಗಿ ನಡೆದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಕೊಸೆಸಾಂಚ್ ಚರ್ಚ್ ಧರ್ಮಗುರು ಫಾ. ವಿನ್ಸೆಂಟ್ ಮೊಂತೆರೊ ಮಾತನಾಡಿ ಫ್ರತಿಭೆಗಳನ್ನು ಮುದುಡದಂತೆ ನೋಡಿ ಯುವ ಫ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಿ ಸಾಧಕರನ್ನಾಗಿ ಮಾಡಬೇಕು ಎಂದು ಹೇಳಿದರು.
ಕಟೀಲು ದೇವಳ ಅರ್ಚಕ ವೆ.ಮೂ. ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನಗೈದರು.
ಪವರ್ ಲಿಪ್ಟಿಂಗ್ ಅಂತರಾಷ್ಟ್ರೀಯ ತೀರ್ಪುಗಾರ ಸತೀಶ್ ಕುಮಾರ್ ಕುದ್ರೋಳಿ, ಉದ್ಯಮಿ ಎನ್ . ರಿಜ್ವಾನ್ ಬಪ್ನಾಡ್, ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಹ ಸಂಚಾಲಕ ಸತ್ಯಜಿತ್ ಸುರತ್ಕಲ್, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.
ಕಿನ್ನಿಗೋಳಿ ವೀರಮಾರುತಿ ವ್ಯಾಯಾಮ ಶಾಲೆ ಅಧ್ಯಕ್ಷ ಈಶ್ವರ್ ಕಟೀಲು ಪ್ರಸ್ತಾವನೆಗೈದು ಸ್ವಾಗತಿಸಿದರು. ಜಿಮ್ ತರಬೇತುದಾರ ಕೇಶವ ಕರ್ಕೆರ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-23111401 Kinnigoli-23111402 Kinnigoli-23111403

Comments

comments

Comments are closed.

Read previous post:
Mulki-21111405
ಮೂಲ್ಕಿ: ವಾರ್ಷಿಕ ಕ್ರೀಡಾ ಕೂಟ

ಮೂಲ್ಕಿ: ದೈಹಿಕ ಶಿಕ್ಷಣ ಸಂಕೀರ್ಣ ವ್ಯವಸ್ಥೆಯನ್ನುಹೊಂದಿದ್ದು ಆರೋಗ್ಯ ಮತ್ತು ಮಾನಸಿಕ ಉನ್ನತಿಯೊಂದಿಗೆ ಸರ್ವಾಂಗೀಣ ಬೆಳವಣಿಗೆಯನ್ನು ನೀಡುವುದರಿಂದ ವಿದ್ಯಾಕ್ಷೇತ್ರಗಳಲ್ಲಿ ಶೈಕ್ಷಣಿಕ ಪಠ್ಯದಂತೆ ಫಲಿತಾಂಶ ಕೇಂದ್ರೀಕೃತವಾಗಬೇಕು ಎಂದು ಮೂಡಬಿದ್ರೆ ಆಳ್ವಾಸ್...

Close