ವಾರ್ಷಿಕ ವಿಶೇಷ ಶಿಭಿರ

ಮೂಲ್ಕಿ: ಸ್ವಾವಲಂಭಿ ಜೀವನ ದೊಂದಿಗೆ ಸಾರ್ವಜನಿಕ ಸಹಜೀವನ ಪಾಠವನ್ನು ರಾಷ್ಟ್ರೀಯ ಸೇವಾ ಯೋಜನೆಯ ಶಿಭಿರಗಳು ನೀಡುವ ಮುಖೇನ ಸ್ವಾಭಿಮಾನಿ ಯುವ ಸಮಾಜ ನಿರ್ಮಾಣಕ್ಕೆ ಬುನಾದಿಯಾಗುತ್ತದೆ ಎಂದು ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವರಾದ ಅಭಯಚಂದ್ರ ಜೈನ್ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಶತಮಾನೋತ್ಸವ ಪೂರೈಸಿರುವ ಕವತ್ತಾರು ಜಿಪಂ.ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ವಾರ್ಷಿಕ ವಿಶೇಷ ಶಿಭಿರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಯುವಜನ ಸೇವಾ ಕ್ಷೇತ್ರದಲ್ಲಿ ರಾಷ್ಟ್ರೀಯ ಸೇವಾಯೋಜನೆಯಿದ್ದು ಗುಣಮಟ್ಟದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಹಿರಿದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್ ವಹಿಸಿದ್ದರು.
ಬಳ್ಕುಂಜೆ ಗ್ರಾಮ ಪಂ.ಅಧ್ಯಕ್ಷ ದಿನೇಶ್ ಪುತ್ರನ್,ಮೂಲ್ಕಿ ಲಯನ್ಸ್ ಅಧ್ಯಕ್ಷ ದೇವಪ್ರಸಾದ್ ಪುನರೂರು,ಪುತ್ತೂರು ಬಾಳಿಕೆ ಮನೆ ರಾಮದಾಸ ಶೆಟ್ಟಿ,ಕವತ್ತಾರು ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸದಾಶಿವ,ಉದ್ಯಮಿ ರಾಮಕೃಷ್ಣ ಶೆಟ್ಟಿ, ಕವತ್ತಾರು ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯರಾದ ಲಕ್ಷ್ಮೀ ನಾರಾಯಣ ಭಟ್,ಪ್ರಭಾಕರ ಶೆಟ್ಟಿ,ಭುಜಂಗ ಶೆಟ್ಟಿ, ಮೋಹನದಾಸ್,ಧನಂಜಯ ಮಟ್ಟು, ದೆಪ್ಪುಣಿಗುತ್ತು ಕಿಶೋರ್ ಶೆಟ್ಟಿ , ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ಸಂಪತ್ ಕುಮಾರ್ ಬಿಇ, ಕಾರ್ಯದರ್ಶಿಗಳಾದ ರಾಕೇಶ್ ಮತ್ತು ವಿಜೇತಾ ಕಾಮತ್ ಅತಿಥಿಗಳಾಗಿದ್ದರು.
ಪ್ರೊ.ಸಂಪತ್ ಕುಮಾರ್ ಸ್ವಾಗತಿಸಿದರು. ಮುರಳಿ ನಿರೂಪಿಸಿದರು. ವಿಜೇತಾ ವಂದಿಸಿದರು.

Bhagyavan Sanil

Kinnigolii-25111413

Comments

comments

Comments are closed.

Read previous post:
Kinnigolii-25111414
ಕವತ್ತಾರು ದೇಂದಡ್ಕ ಸಚಿವರ ಭೇಟಿ

ಮೂಲ್ಕಿ: ಕವತ್ತಾರು ದೇಂದಡ್ಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಯುವಜನ ಸೇವಾ ಸಚಿವರಾದ ಅಭಯಚಂದ್ರ ಜೈನ್ ಭೇಟಿ ನೀಡಿದರು. ಈ ಸಂದರ್ಭ ಕ್ಷೇತ್ರದ ಅರ್ಚಕ ಸುಬ್ರಮಣ್ಯ ಭಟ್ ವಿಶೇಷ...

Close