ಕೆಂಚನಕೆರೆ ತಿರುವು ಬಳಿಯ ತ್ಯಾಜ್ಯಕ್ಕೆ ಮೋಕ್ಷ ಕೊಡಿ

ಮೂಲ್ಕಿ: ಸ್ವಚ್ಛ ಭಾರತ ಎಂಬ ಕನಸಿಗೆ ವ್ಯತಿರಿಕ್ತವಾಗಿ ಕಿಲ್ಪಾಡಿ ಪಂಚಾಯತಿ ವ್ಯಾಪ್ತಿಯ ಮೂಲ್ಕಿ -ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ಅಂಗರಗುಡ್ಡೆ ತಿರುವು ಬಳಿ ಬೇಕಾಬಿಟ್ಟಿ ತ್ಯಾಜ್ಯ ಎಸೆದು ಸ್ಥಳದಲ್ಲಿ ದುರ್ವಾಸನೆಯುಕ್ತ ವಾತಾವರಣ ಸೃಷ್ಠಿಯಾಗಿದೆ. ಕಳೆದ ಹಲವಾರು ವರ್ಷಗಳಿಂದ ಕೆಲ ದುಷ್ಕರ್ಮಿಗಳು ತ್ಯಾಜ್ಯ ಬಿಸಾಡುತ್ತಿದ್ದರೂ ಪಂಚಾಯತಿ ಈ ಬಗ್ಗೆ ತಲೆಗೆಡಿಸಿಕೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಈ ತ್ಯಾಜ್ಯ ಬಿಸಾಡುವ ದುಷ್ಕರ್ಮಿಗಳ ಬಗ್ಗೆ ಅನೇಕ ಬಾರಿ ಕಿಲ್ಪಾಡಿ ಪಂಚಾಯತಿಯಲ್ಲಿ ಚರ್ಚೆಯಾಗಿ ಸ್ಥಳೀಯರು ತ್ಯಾಜ್ಯ ಬಿಸಾಡುವ ವ್ಯಕ್ತಿಯನ್ನು ಹಿಡಿದುಕೊಟ್ಟರೆ ಏನು ಮಾಡುತ್ತೀರಿ? ಎಂದು ಪ್ರಶ್ನಿಸಿದ್ದರೂ ಪಂಚಾಯತಿ ಮೌನವಾಗಿತ್ತು.ಕಳೆದ ಹಲವಾರು ತಿಂಗಳ ಹಿಂದೆ ಸ್ಥಳೀಯರು ದುಷ್ಕರ್ಮಿಗಳು ಹಾಕಿದ್ದ ತ್ಯಾಜ್ಯವನ್ನು ಸ್ವಚ್ಛ ಮಾಡಿದ್ದರು.ಆದರೆ ಈಗ ಪುನ: ಇಲ್ಲಿ ತ್ಯಾಜ್ಯವನ್ನು ಬೇಕಾಬಿಟ್ಟಿಯಾಗಿ ಬಿಸಾಡಲಾಗಿದೆ.ಅಪಘಾತ ವಲಯವೆಂದೇ ಪರಿಗಣಿಲ್ಪಡುತ್ತಿರುವ ಅಂಗರಗುಡ್ಡೆ-ಕೆಂಚನಕೆರೆ ರಸ್ತೆಯ ರಾಜ್ಯ ಹೆದ್ದಾರಿ ಬದಿಯಲ್ಲೇ ಹುಲ್ಲಿನ ಕಾಡು ಬೆಳೆದಿದ್ದು ಎದುರು ಬದಿಯ ವಾಹನವು ಕಾಣಿಸದೆ ಚಾಲಕರು ಕಂಗಾಲಾಗುತ್ತಿದ್ದಾರೆ.ಒಂದೆಡೆ ರಸ್ತೆ ಬದಿಯಲ್ಲಿ ಹುಲ್ಲು ಇನ್ನೊಂದೆಡೆ ತ್ಯಾಜ್ಯ ವಿಲೇವಾರಿಯಲ್ಲಿ ಉದಾಸೀನತೆಯನ್ನು ತೋರುತ್ತಿರುವ ಕಿಲ್ಪಾಡಿ ಪಂಚಾಯತಿ ತ್ಯಾಜ್ಯ ಹಾಕುತ್ತಿರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚಬೇಕಾಗಿದೆ ಹಾಗೂ ಸ್ವಚ್ಛ ಭಾರತ ಎಂಬ ಪ್ರಧಾನಿಯವರ ಕನಸಿನ ಕೂಸು ಕೇವಲ ಒಂದೇ ದಿನಕ್ಕೆ ಮಾತ್ರ ಸೀಮಿತವಾಗಿದೆಯೇ ಎಂದು ಲೇವಡಿ ಮಾಡಿದಂತೆ ಆಗಿದೆ.

 Puneethakrishna

Mulki-26111403

Comments

comments

Comments are closed.

Read previous post:
Mulki-26111401
ಪಾವಂಜೆ- ಚಂಪಾಷಷ್ಠಿ ಮಹೋತ್ಸವ

ಮೂಲ್ಕಿ; ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯಸ್ವಾಮಿ ದೇವಸ್ಥಾನ ಪಾವಂಜೆ ಇದರ ಚಂಪಾಷಷ್ಠಿ ಮಹೋತ್ಸವದ ಅಂಗವಾಗಿ ಮೂಡು ಗಣಪತಿ ಸೇವೆಯು ನಡೆಯಿತು ಈ ಸೇವೆಯು ಅತೀ ಪುರಾತನ ಹಾಗು...

Close