ತೋಕೂರು ಜಲಕದ ಕೆರೆ ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಕೂರಿನಿಂದ ಕೆರೆಕಾಡು ಜಲಕದಕೆರೆಗೆ ಹೋಗುವ ರಸ್ತೆಗೆ ಜಿ. ಪಂ. 3 ಲಕ್ಷ ರೂ ಅನುದಾನ ಹಾಗೂ ತಾ. ಪಂ. 1.45 ಲಕ್ಷ ರೂ ಗ್ರಾ. ಪಂ. 60 ಸಾವಿರ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟಿಕರಣ ರಸ್ತೆಯನ್ನು ಮಂಗಳವಾರ ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾ. ಪಂ. ಸದಸ್ಯೆ ವನಿತಾ ಉದಯ ಅಮೀನ್, ಮಾಜಿ ತಾ. ಪಂ. ಸದಸ್ಯ ರಂಗನಾಥ ಶೆಟ್ಟಿ, ಪಡುಪಣಂಬೂರು ಗ್ರಾ. ಪಂ. ಅಧ್ಯಕ್ಷೆ ಕೊಲ್ಲು, ಉಪಾಧ್ಯಕ್ಷೆ ಕುಸುಮ ಚಂದ್ರಶೇಖರ್, ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್, ಗ್ರಾ. ಪಂ. ಸದಸ್ಯರಾದ ಮೋಹನ್ ಸುವರ್ಣ, ನಾರಾಯಣ ಸುವರ್ಣ, ಸುರೇಖಾ, ರಮಣಿ, ಮಾಧವ ಶೆಟ್ಟಿಗಾರ್, ಉದಯ ಅಮೀನ್, ನಿತ್ಯಾನಂದ ದೇವಾಡಿಗ, ಯೋಗೀಶ್ ಮೂಲ್ಯ, ಕರುಣಾಕರ ಕುಂದರ್ ಮತ್ತಿತರರಿದ್ದರು.

Mulki-26111404

Comments

comments

Comments are closed.

Read previous post:
Mulki-26111403
ಕೆಂಚನಕೆರೆ ತಿರುವು ಬಳಿಯ ತ್ಯಾಜ್ಯಕ್ಕೆ ಮೋಕ್ಷ ಕೊಡಿ

ಮೂಲ್ಕಿ: ಸ್ವಚ್ಛ ಭಾರತ ಎಂಬ ಕನಸಿಗೆ ವ್ಯತಿರಿಕ್ತವಾಗಿ ಕಿಲ್ಪಾಡಿ ಪಂಚಾಯತಿ ವ್ಯಾಪ್ತಿಯ ಮೂಲ್ಕಿ -ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ಅಂಗರಗುಡ್ಡೆ ತಿರುವು ಬಳಿ ಬೇಕಾಬಿಟ್ಟಿ ತ್ಯಾಜ್ಯ ಎಸೆದು...

Close