ಕಿನ್ನಿಗೋಳಿ: ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಾಗಾರ

ಕಿನ್ನಿಗೋಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಯಕತ್ವದ ಸರಕಾರ ಜನಪಯೋಗಿ ಯೋಜನೆಗಳನ್ನು ಕೈಗೆತ್ತಿಕೊಂಡು ಆರ್ಥಿಕವಾಗಿ ಮುನ್ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ವಿಶ್ವಕ್ಕೆ ಮಾದರಿಯಾಗಲಿದೆ ಎಂದು ಬಿಜೆಪಿಯ ರಾಜ್ಯ ಉಪಾಧ್ಯಕ್ಷೆ ಸುಲೋಚನ ಭಟ್ ಹೇಳಿದರು. ಮಂಗಳವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮೂಡಬಿದಿರೆ ಮಂಡಲದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ‍್ಯಗಾರ ಉದ್ಘಾಟಿಸಿ ಮಾತನಾಡಿದರು.
ಮೂಡಬಿದಿರೆ ಮಂಡಲದ ಕ್ಷೇತ್ರಾಧ್ಯಕ್ಷ ಸುಚರಿತ ಶೆಟ್ಟಿ ಮಾತನಾಡಿ ಕಾರ್ಯಕರ್ತರು ಒಗ್ಗೂಡಿ ಜನಪರ ಕಾಳಜಿಯ ಸೇವೆಗಳನ್ನು ಹಮ್ಮಿಕೊಂಡು ಪಕ್ಷವನ್ನು ಸದೃಡವಾಗಿ ಕಟ್ಟಿ ಸಂಘಟನಾ ಶಕ್ತಿಯನ್ನು ಹೆಚ್ಚಿಸಬೇಕು ಎಂದು ಹೇಳಿದರು.
ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು, ಜಿಲ್ಲಾ ಉಪಾಧ್ಯಕ್ಷರಾದ ಜಗದೀಶ ಅಧಿಕಾರಿ, ಕಸ್ತೂರಿ ಪಂಜ, ಸಂಘಟನಾ ಕಾರ್ಯದರ್ಶಿ ಜೇಷ್ಠ ಪಡಿವಾಳ್, ಹರೀಶ್ ಎಮ್. ಕೆ, ಪ್ರಸಾದ್ ಬೆಳ್ತಂಗಡಿ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ಶಾಂತಾ ಆರ್ ಸ್ವಾಗತಿಸಿ, ಜಯಂತ್ ಸಾಲ್ಯಾನ್ ನಿರೂಪಿಸಿದರು.

Kinnigolii-26111405 Kinnigolii-26111406

Comments

comments

Comments are closed.

Read previous post:
Mulki-26111404
ತೋಕೂರು ಜಲಕದ ಕೆರೆ ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಕೂರಿನಿಂದ ಕೆರೆಕಾಡು ಜಲಕದಕೆರೆಗೆ ಹೋಗುವ ರಸ್ತೆಗೆ ಜಿ. ಪಂ. 3 ಲಕ್ಷ ರೂ ಅನುದಾನ ಹಾಗೂ ತಾ. ಪಂ. 1.45 ಲಕ್ಷ...

Close