ಕವನ ಸಂಕಲನ ಕೃತಿ ಬಿಡುಗಡೆ

ಮೂಲ್ಕಿ: ಶಿಕ್ಷಕರು ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸುವ ಕಾರ್ಯ ಮಾಡಿದಲ್ಲಿ ಸಾಹಿತ್ಯದ ಬೆಳವಣಿಗೆ ಸಾಧ್ಯವೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಮೂಲ್ಕಿ ಸಮೀಪದ ಕಿಲ್ಪಾಡಿಯ ಮೆಡಲಿನ್ ಪದವಿ ಪೂರ್ವ ಕಾಲೇಜಿನಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕಿನ್ನಿಗೋಳಿಯ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಮಂಗಳೂರಿನ ಬೆಥನಿ ಕಾನ್ವೆಂಟ್ ಭಗಿನಿ ಮಾರಿ ಆಂಚ್ ಬಿ ಎಸ್ ರಚಿತ ಬಿಳಿ ಪಾರಿವಾಳ ಕವನ ಸಂಕಲನ ಕೃತಿಯನ್ನು ಬಿಡುಗಡೆಗೊಳಿಸಿದರು.
ಮಂಗಳೂರಿನ ಬೆಥನಿ ಸಂಸ್ಥೆಯ ಆಡಳಿತ ಸದಸ್ಯೆ ಭಗಿನಿ ಕ್ರಿಸ್ಟೆಲ್ಲ ಬಿ ಎಸ್ ಅಧ್ಯಕ್ಷತೆಯನ್ನು ವಹಿಸಿದರು. ಮೂಲ್ಕಿ ಮೆಡಲಿನ್ ಫ್ರೌಢ ಶಾಲಾ ಸಂಚಾಲಕಿ ಹಾಗೂ ಸುಪೀರಿಯರ್ ಭಗಿನಿ ಆಗ್ನೇಸ್ ಪಿಂಟೋ, ಕಿನ್ನಿಗೋಳಿ ಯುಗಪುರುಷದ ಕೆ. ಭುವನಾಭಿರಾಮ ಉಡುಪ ಮತ್ತು ಪತ್ರ್ರಕರ್ತ ಎಂ ಸರ್ವೋತ್ತಮ ಅಂಚನ್ ಉಪಸ್ಥಿತರಿದ್ದರು.

Kinnigoli-27111412 - Copy

Comments

comments

Comments are closed.

Read previous post:
Kinnigoli-27111402
ಪ್ರಖ್ಯಾತ್ ಆರ್. ಶೆಟ್ಟಿ ವಿಧಿವಶ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಅತ್ತೂರು-ಕಿಲೆಂಜೂರು ಕುಡ್ತಿಮಾರ್‌ಗುತ್ತು ಪ್ರಖ್ಯಾತ್ ಆರ್. ಶೆಟ್ಟಿ ( 24 ವರ್ಷ ) ಮಂಗಳವಾರ ಬೆಳಿಗ್ಗೆ ತನ್ನ ಬೈಕ್‌ನಲ್ಲಿ ಕಚೇರಿಗೆ ಹೋಗುತ್ತಿದ್ದ ಸಂದರ್ಭ ಮುಂಬಯಿಯ ಮುಲುಂಡ್...

Close