ಪ್ರಖ್ಯಾತ್ ಆರ್. ಶೆಟ್ಟಿ ವಿಧಿವಶ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಅತ್ತೂರು-ಕಿಲೆಂಜೂರು ಕುಡ್ತಿಮಾರ್‌ಗುತ್ತು ಪ್ರಖ್ಯಾತ್ ಆರ್. ಶೆಟ್ಟಿ ( 24 ವರ್ಷ ) ಮಂಗಳವಾರ ಬೆಳಿಗ್ಗೆ ತನ್ನ ಬೈಕ್‌ನಲ್ಲಿ ಕಚೇರಿಗೆ ಹೋಗುತ್ತಿದ್ದ ಸಂದರ್ಭ ಮುಂಬಯಿಯ ಮುಲುಂಡ್ ಚೆಕ್‌ನಾಕ್‌ದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದಾರೆ.
ಮೃತರು ತಂದೆ ಮುಂಬಯಿ ಮೀರಾ ರೋಡ್ ಜಯಮಹಲ್ ಹೊಟೇಲ್ ಮಾಲಕ ಸಮಾಜ ಸೇವಕ ಕೊಡುಗೈದಾನಿ ಕುಡ್ತಿಮಾರ್‌ಗುತ್ತು ರಾಜೇಂದ್ರ ಶೆಟ್ಟಿ , ತಾಯಿ ಜಯಶ್ರೀ, ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಸುಮಾರು 10 ತಿಂಗಳ ಹಿಂದೆ ವಿದೇಶದಲ್ಲಿ ಮ್ಯಾನೇಜ್‌ಮೆಂಟ್ ಕೋರ್ಸ್ ಮುಗಿಸಿ ಮುಲುಂಡ್‌ನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ತವರೂರಾದ ಕಿಲೆಂಜೂರುವಿನ ದೈವಸ್ಥಾನದ ಬ್ರಹ್ಮಕಲಶೋತ್ಸವ, ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಮುಂಬಯಿ ಸಮಿತಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿ ಜನಾನುರಾಗಿಯಾಗಿದ್ದರು.

Kinnigoli-27111402

Comments

comments

Comments are closed.

Read previous post:
Kinnigoli-27111401
ಡಾ. ವಜ್ರಾಕ್ಷಿ

ಕಿನ್ನಿಗೋಳಿ: ವಿಜಯಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ ತಿಮ್ಮಪ್ಪ ಕೋಡಿಕಲ್ ಅವರ ಪತ್ನಿ ಡಾ. ವಜ್ರಾಕ್ಷಿ (61 ವರ್ಷ) ಶನಿವಾರ ಹೃದಯಾಘಾತದಿಂದ ನಿಧನ ಹೊಂದಿದರು. ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯಲ್ಲಿ ವೈದ್ಯ...

Close