ಜೋಡಿ ಶವಗಳ ಮೂಳೆಗಳು ಪತ್ತೆ

ಕಿನ್ನಿಗೋಳಿ : ಮೂಲ್ಕಿ ಠಾಣಾ ವ್ಯಾಪ್ತಿಯ ಕೆರೆಕಾಡು ಜಲಕದ ಕೆರೆಯ ಸಮೀಪದ ನಾಲದೆ ಪಾಡಿಯ ನಿರ್ಜನ ಗುಡ್ಡಕಾಡು ಪ್ರದೇಶದಲ್ಲಿ ಶುಕ್ರವಾರ ಯುವ ಜೋಡಿ ಶವಗಳು ನೇಣುಬಿಗಿದ ರೀತಿಯಲ್ಲಿ ಜೀರ್ಣಾವಸ್ಥೆಯಲ್ಲಿ ಕಂಡುಬಂದಿದೆ.
ಯುವಕ ಶವದ ಪ್ಯಾಂಟಿನ ಪರ್ಸ್‌ನಲ್ಲಿ ಐಡೆಟಿಂಟಿ ಕಾರ್ಡ್ ಸಿಕ್ಕಿದ್ದು ಮೂಡಬಿದ್ರಿ ಆಳ್ವಾಸ್ ಕಾಲೇಜಿನ ಪಂಚಕರ್ಮ ವಿಭಾಗದಲ್ಲಿನ ಕೆಲಸದಾಳು ಸುರೇಂದ್ರ (25 ವರ್ಷ ) ಎಂಬುದು ತಿಳಿದು ಬಂದಿದೆ, ಯುವತಿಯ ಬಗ್ಗೆ ನಿಖರ ಮಾಹಿತಿಗಳು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ಷಷ್ಠಿ ಜಾತ್ರಾ ಮಹೋತ್ಸದ ದೇವರು ಜಲಕಕ್ಕೆ ಕೆರೆಕಾಡುವಿನ ಜಲಕದ ಕೆರೆಗೆ ಶುಕ್ರವಾರ ರಾತ್ರಿ ಬರಲಿದ್ದು ಅಲ್ಲಲ್ಲಿ ಬೆಳಕಿಗೋಸ್ಕರ ಕಂಬ ನೆಡಲು ಸೂಕ್ತ ಮರ ಅರಸುತ್ತಾ ಅಲ್ಲಿನ ಸ್ಥಳೀಯ ಯುವಕರಾದ ಬಾಲಕೃಷ್ಣ ದೇವಾಡಿಗ ಹಾಗೂ ಸುಕೇಶ್ ಮತ್ತಿಬ್ಬರು ನಾಲದೆಯ ಗುಡ್ಡದ ಕಾಡು ಪ್ರದೇಶದಲ್ಲಿ ನೇರವಾಗಿ ಇರುವ ಕಂಬಗಳನ್ನು ಹುಡುಕುವಾಗ ಹಳದಿ ಬಣ್ಣದ ನೈಲಾನ್ ಹಗ್ಗ ಮರವೊಂದರಲ್ಲಿ ಕಾಣಿಸಿತು. ಹತ್ತಿರ ಹೋಗಿ ನೋಡಿದಾಗ ಮರದಲ್ಲಿ ನೈಲಾನ್ ಹಗ್ಗದ ಕುಣಿಕೆಗಳು ಹಾಗೂ ಮರಕ್ಕೆ ಎರಡು ಚಿಕ್ಕಕೊಂಬೆಗಳಿಗೆ ಚೂಡಿದಾರದ ಶಾಲುಗಳನ್ನು ಬಿಗಿದು ಕಟ್ಟಿದ ಸ್ಥಿತಿಯಲ್ಲಿತ್ತು. ನೆಲದಲ್ಲಿ ಬಟ್ಟೆ ಚಪ್ಪಲಿಗಳು ಎಲುಬಿನ ಹಂದರಗಳು ಕಂಡು ಹೆದರಿ ಮಾಧ್ಯಮ ಮಿತ್ರರ ಮೂಲಕ ಮೂಲ್ಕಿ ಠಾಣೆಗೆ ಮಾಹಿತಿ ನೀಡಲಾಯಿತು.
ನಿರ್ಜನ ಕಾಡಿನಲ್ಲಿ ಯುವ ಜೋಡಿಗಳು ಯಾವುದೋ ಕಾರಣದಿಂದ ಬೇಸತ್ತು ಆತ್ಯಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಜೋಡಿ ಶವಗಳು ಕುಣಿಯಿಂದ ಕೆಳಗೆ ಬಿದ್ದಿದು ನೆಲದಲ್ಲಿ ಯುವಕನ ಪ್ಯಾಂಟಿನ ಸೊಂಟದ ಭಾಗದ ಎಲುಬುಗಳು, ಅಂಗಿಯ ಒಳಗಡೆ ಎದೆಯ ಎಲುಬಿನ ಹಂದರಗಳು ಮಣ್ಣಿನಿಂದ ಸೇರಿ ಹೋಗಿದ್ದು ಪಕ್ಕದಲ್ಲಿಯೇ ಯುವತಿಯ ಚೂಡಿದಾರದೊಳಗೆ ಎಲುಬುಗಳು ಪತ್ತೆಯಾಗಿವೆ.
ಯುವಕನ ಪ್ಯಾಂಟಿನೊಳಗೆ ಇದ್ದ ಪರ್ಸಿನಲ್ಲಿ ಮೂರು ಮೊಬಲ್‌ಗಳು , ಬಕ್‌ನ ಕೀ, ಲೇಡಿಸ್ ವಾಚ್, ಸಿಮ್ ಕಾರ್ಡ್ ಪತ್ತೆಯಾಗಿದೆ.
ಯುವತಿಯ ಬಟ್ಟೆಯಲ್ಲಿ ಕರಿಮಣಿ ಸರ ಪತ್ತೆಯಾಗಿದೆ. ಯುವಕನ ಪಾದರಕ್ಷೆ ಮತ್ತು ನೀರಿನ ಬಾಟಲ್ ಸ್ಥಳದಲ್ಲಿತ್ತು
ಎರಡು ಮೃತ ದೇಹಗಳ ತಲೆಬುರುಡೆಗಳು ಪತ್ತೆಯಾಗಿಲ್ಲದಿರುವುದು ಸೋಜಿಗದ ಸಂಗತಿ. ಕಾಡಿನ ಪ್ರದೇಶವಾಗಿರುವುದರಿಂದ ಕಾಡು ಪ್ರಾಣಿ ನರಿ, ಚರತೆ ತಿಂದಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಮೂಲ್ಕಿ ಠಾಣಾಕಾರಿ ರಾಮಚಂದ್ರ ನಾಯಕ್, ಎಸ್. ಐ. ಪರಮೇಶ್ವರ್ ಕೇಸು ದಾಖಲಿಸಿ ತನಿಖೆ ನಡೆಸುತಿದ್ದಾರೆ.

Kinnigoli-28111401 Kinnigoli-28111402 Kinnigoli-28111403 Kinnigoli-28111404 Kinnigoli-28111405 Kinnigoli-28111406 Kinnigoli-28111407 Kinnigoli-28111408 Kinnigoli-28111409 Kinnigoli-28111410 Kinnigoli-28111411 Kinnigoli-28111412

Comments

comments

Comments are closed.

Read previous post:
Kinnigoli-27111408
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳ ಷಷ್ಠಿ ಮಹೋತ್ಸವ

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಅಂಗವಾಗಿ ಗುರುವಾರ ಹಗಲು ರಥೋತ್ಸವ ನಡೆಯಿತು.

Close