ಬಪ್ಪನಾಡಿನಲ್ಲಿ ಶವ ಪತ್ತೆ

ಮೂಲ್ಕಿ : ಕೆಲ ದಿನಗಳ ಹಿಂದೆ ಮಂಗಳೂರು ವೆನ್ಲಾಕಿನ ಆಸ್ಪತ್ರೆಯಿಂದ ಚಿಕಿತ್ಸೆಗೆಂದು ಬಂದ ವ್ಯಕ್ತಿ ಪರಾರಿಯಾಗಿದ್ದು ಈತನ ಮೃತ ದೇಹ ಬಪ್ಪನಾಡು ದೇವಸ್ಥಾನದ ಎದುರಿನ ರಾಷ್ಟ್ರೀಯ ಹೆದ್ದಾರಿ 66 ರ ಬಸ್ ಸ್ಟಾಂಡಿನಲ್ಲಿ ಪತ್ತೆಯಾಗಿದ್ದು ವ್ಯಕ್ತಿಯನ್ನು ಭುವನೇಶ ಆಚಾರ‍್ಯ ಎಂದು ಗುರುತಿಸಲಾಗಿದೆ.
ಕಳೆದ ವಾರದ ಹಿಂದೆ ಮೂಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ಭುವನೇಶ ಆಚಾರ‍್ಯ ಅವರನ್ನು ರಿಕ್ಷಾ ಚಾಲಕನೊಬ್ಬ ಚಿಕಿತ್ಸೆಗಾಗಿ ದಾಖಲಿಸಿದ್ದರು. ಈತ ಆಸ್ಪತ್ರೆಯಲ್ಲಿ ರಂಪಾಟ ಮಾಡಿದ್ದು ಪೋಲೀಸರು ಈತನ ಊರು ಎಲ್ಲಿ ಕೇಳಿದ್ದಕ್ಕೆ ಮಡಿಕೇರಿಯ ಗಾಳಿಬೀಡು, ಸುಳ್ಯ, ಮಂಗಳೂರಿನ ಅತ್ತಾವರ ಎಂದು ಅಸ್ಪಷ್ಟ ಮಾಹಿತಿ ನೀಡಿದ್ದ. ಆಸ್ಪತ್ರೆಯ ಸಿಬ್ಬಂದಿಗಳು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸದ್ದರು. ಅಲ್ಲಿಂದ ಕೂಡ ಈತ ಪರಾರಿಯಾಗಿದ್ದು ಶುಕ್ರವಾರ ಬೆಳಿಗ್ಗೆ ಈತನ ಮೃತದೇಹ ಬಪ್ಪನಾಡು ಬಳಿಯ ಬಸ್ಸು ನಿಲ್ದಾಣದಲ್ಲಿ ಕಂಡುಬಂದಿದೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Puneethkrishna

Mulkii-29111401

Comments

comments

Comments are closed.

Read previous post:
Kinnigoli-29111401
ಚಂದನಾಪ್ರಿಯಾ ಹಾಗೂ ಆಕಾಶ್ ಕಿಣಿ ಸನ್ಮಾನ

ಕಿನ್ನಿಗೋಳಿ : ಕಿನ್ನಿಗೋಳಿ ವನಿತಾ ಸಮಾಜದ ವತಿಯಿಂದ ಪ್ರತಿಭಾನ್ವಿತ ಭರತನಾಟ್ಯ ಕಲಾವಿದೆ ಕುಮಾರಿ ಚಂದನಾಪ್ರಿಯಾ ಹಾಗೂ ಆಕಾಶ್ ಕಿಣಿ ಅವರನ್ನು ಸನ್ಮನಿಸಲಾಯಿತು. ಡಾ. ಗೀತಾ ಎಸ್, ವನಿತಾ ಸಮಾಜದ...

Close