ಸಾಂಸ್ಕೃತಿಕ ಸ್ಪರ್ಧೆ ಕೌಶಲ್ಯದ ವಿನಿಮಯಕ್ಕೆ ಸಹಕಾರಿ

ಕಿನ್ನಿಗೋಳಿ : ಸೇವಾ ಸಂಸ್ಥೆಗಳು ಸಮಾಜಮುಖಿ ಕೆಲಸಗಳೊಂದಿಗೆ ಉತ್ತಮ ಹವ್ಯಾಸ ಮೈಗೂಡಿಸಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದಾಗ ಕೌಶಲ್ಯದ ವಿನಿಮಯಕ್ಕೆ ಸಹಕಾರಿಯಾಗುತ್ತವೆ ಎಂದು ಕಟೀಲು ದೇವಳ ಪ್ರಧಾನ ಅರ್ಚಕ ವಾಸುದೇವ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿ ಇನ್ನರ್‌ವೀಲ್ ಕ್ಲಬ್‌ನ ದಶಮಾನೋತ್ಸವದ ಅಂಗವಾಗಿ ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಭಾನುವಾರ ನಡೆದ ಇನ್ನರ್‌ವೀಲ್ ಕ್ಲಬ್‌ಗಳ ಸಾಂಸ್ಕೃತಿಕ ಸ್ಪರ್ಧೆ ದಶಮಿ-2014 ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಬ್ಯಾಂಕ್ ಐಕಳದ ಶಾಖಾ ಪ್ರಭಂದಕ ಒಸ್ವಾಲ್ಡ್ ಡಿಸೋಜ, ಕಿನ್ನಿಗೋಳಿ ರೋಟರಿ ಅಧ್ಯಕ್ಷ ವಿಲಿಯಂ ಸಿಕ್ವೇರಾ, ಪಿ. ಸತೀಶ್ ರಾವ್ ಉಪಸ್ಥಿತರಿದ್ದರು.
ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ವೀಣಾ ಬಿ. ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ರಾಧ ಶೆಣೈ ವಂದಿಸಿದರು. ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು.

Kinnigoli-30111401 Kinnigoli-30111402

Comments

comments

Comments are closed.

Read previous post:
Kinnigoli-30111403
ಎಸ್.ಕೋಡಿ ಉಚಿತ ವೈದ್ಯಕೀಯ ತಪಸಣಾ ಶಿಬಿರ

ಕಿನ್ನಿಗೋಳಿ : ಮಾತಾ ಅಮೃತಾನಂದಾಮಯಿ ಮಠ ಮಂಗಳೂರು, ರೋಟರ‍್ಯಾಕ್ಟ್ ಕ್ಲಬ್ ಕಿನ್ನಿಗೋಳಿ ಕುಲಾಲ ಸಮಾಜ ಸೇವಾ ಸಂಘ ತೋಕೂರು, ನಂದಿ ಪ್ರೆಂಡ್ ಪುನರೂರು ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಉಚಿತ...

Close