ಬಳ್ಕುಂಜೆ ಸಂತ ಪೌಲರ ಚರ್ಚ್ ಶತಮಾನೋತ್ಸವ

ಕಿನ್ನಿಗೋಳಿ: ಬಳ್ಕುಂಜೆ ಸಂತ ಪೌಲರ ಚರ್ಚ್‌ನಲ್ಲಿ ಜನವರಿ 3, 4 ಮತ್ತು 5ರಂದು ಶತಮಾನೋತ್ಸವದ ಸಂಭ್ರಮಾಚರಣೆ ನಡೆಯಲಿದೆ.
ಜನವರಿ 3ರಂದು ಸಾಯಂಕಾಲ ಗಂಟೆ 3.45ಕ್ಕೆ ಬಂಡಸಾಲೆಯಿಂದ ಬಳ್ಕುಂಜೆ ಚರ್ಚ್ ವರೆಗೆ ನಡೆಯಲಿರುವ ಹೊರೆ ಕಾಣಿಕೆಯ ಮೆರವಣಿಗೆ ಉದ್ಘಾಟನೆಯನ್ನು ಬಳ್ಕುಂಜೆ ಬಂಡಸಾಲೆ ಭಾನುತೇಜ ಅಜಿಲ ನೆರವೇರಿಸಲಿದ್ದಾರೆ. ಸಂಜೆ 5.30ಕ್ಕೆ ಸರ್ವಧರ್ಮ ಸಮ್ಮೇಳನ, ಜನವರಿ 4ರಂದು ಬೆಳಿಗ್ಗೆ 8.15ಕ್ಕೆ ಮೆರವಣಿಗೆ ಹಾಗೂ ದಿವ್ಯ ಬಲಿಪೂಜೆ ಮಂಗಳೂರು ಧರ್ಮ ಪ್ರಾಂತ್ಯದ ರೆ.ಫಾ.ಡೆನಿಸ್ ಪ್ರಭು ಮೊರಾಸ್ ನೇತ್ರತ್ವದಲ್ಲಿ ನಡೆಯಲಿದೆ. ಸಂಜೆ ೬ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕೊಂಕಣಿ ನಾಟಕ ಕೊಣಾಯ್ಕಿ ಗೊತ್ತುನಾ, ಜನವರಿ 5ರಂದು ಬೆಳಿಗ್ಗೆ 9.30ಕ್ಕೆ ನವೀಕರಣ ಗೊಂಡ ಚರ್ಚ್‌ನ್ನು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಗುರು ರೆ.ಡಾ.ಫಾ.ಅಲೋಸಿಯಸ್ ಪೌಲ್ ಡಿ,ಸೋಜ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 11ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Balkunje-02011503

Comments

comments

Comments are closed.

Read previous post:
Mulki-02011502
ಚತುಶ್ಪತ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ

ಮೂಲ್ಕಿ: ಚತುಶ್ಪತ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಸಂಸದ ನಳಿನ್ ಕುಮಾರ್ ಕಟೀಲುರವರು ಹಳೆಯಂಗಡಿ ಮತ್ತು ಮೂಲ್ಕಿಗೆ ಗುರುವಾರ ಭೇಟಿ ನೀಡಿ ಸಾರ್ವಜನಿಕರ ಅಹುವಾಲುಗಳನ್ನು ಸ್ವೀಕರಿಸಿದರು. ಮೂಲ್ಕಿ...

Close