ಚತುಶ್ಪತ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ

ಮೂಲ್ಕಿ: ಚತುಶ್ಪತ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಸಂಸದ ನಳಿನ್ ಕುಮಾರ್ ಕಟೀಲುರವರು ಹಳೆಯಂಗಡಿ ಮತ್ತು ಮೂಲ್ಕಿಗೆ ಗುರುವಾರ ಭೇಟಿ ನೀಡಿ ಸಾರ್ವಜನಿಕರ ಅಹುವಾಲುಗಳನ್ನು ಸ್ವೀಕರಿಸಿದರು.
ಮೂಲ್ಕಿ ಪೇಟೆಯ ಮಧ್ಯಭಾಗದಲ್ಲಿ ಹಾದು ಹೋಗುವ ಚತುಶ್ಪತ ಹೆದ್ದಾರಿಯಿಂದ ಜನರಿಗೆ ಮತ್ತು ವಾಹನ ಚಾಲಕರಿಗೆ ಸಮಸ್ಯೆಯಾಗುತ್ತಿದ್ದು ಮೂಲ್ಕಿ ಬಿಲ್ಲವ ಸಂಘ, ಹೋಟೇಲ್ ಆಧಿಧನ್, ಹಾಗೂ ಬಪ್ಪನಾಡು ದೇವಳ ಬಳಿಯಲ್ಲಿ ಹೆದ್ದಾರಿ ಪ್ರವೇಶ ಅಥವಾ ಅಂಡರ್‌ಪಾಸ್‌ಗಾಗಿ ಜನರು ಸಂಸದರಿಗೆ ಅಹುವಾಲು ಸಲ್ಲಿಸಿದರು.
ಈ ಸಂದರ್ಭ ಉಪಸ್ಥಿತರಿದ್ದ ಯೋಜನಾ ಪ್ರಮುಖರೊಂದಿಗೆ ಮಾತುಕತೆ ನಡೆದು ಬಜ್ಪೆ ಮತ್ತು ಮೂಡಬಿದ್ರೆಯಿಂದ ಬರುವ ರಾಜ್ಯ ಹೆದ್ದಾರಿ ಮೂಲ್ಕಿ ಬಿಲ್ಲವ ಸಂಘದ ಎದುರು ಹೆದ್ದಾರಿ ಪ್ರವೇಶ ಗೊಳ್ಳರಿರುವ ಕಾರಣ ಸರ್ವಿಸ್ ರಸ್ತೆಯ ಮುಖಾಂತರ ಪ್ರವೇಶ ಮತ್ತು ಬಪ್ಪನಾಡು ದೇವಸ್ಥಾನದ ರಥ ರಸ್ತೆ ದಾಟಲಿರುವ ಕಾರಣ ಅಂಡರ್‌ಪಾಸ್ ಬದಲು ಹೆದ್ದಾರಿ ನೇರ ಪ್ರವೇಶ ಬಳಿಕ ಹೆಚ್ಚುವರಿ ಅನುದಾನ ದೊರೆತಲ್ಲಿ ಅಧಿಧನ್ ಎದುರು ಅಂಡರ್ ಪಾಸ್ ಬಗ್ಗೆ ಚಿಂತನೆ ನಡೆಸಲಾಗುವುದು. ಹಳೆಯಂಗಡಿಯಲ್ಲಿ ಹೆದ್ದಾರಿ ಪ್ರವೇಶ ನೀಡಲಾಗಿದ್ದು ಅದನ್ನು ಮುಂದುವರಿಸುವ ಯೋಜನೆ ಇದೆ. ಪಕ್ಷಿಕೆರೆ ಪ್ರಯಾಣಿಕರಿಗಾಗಿ ಸರ್ವಿಸ್ ರಸ್ತೆ ಒಳಗಡೆ ಬಸ್ಸು ನಿಲ್ದಾಣ ನಿರ್ಮಿಸಲಾಗುವುದು ಪಾದಚಾರಿಗಳಿಗಾಗಿ ಒವರ್ ಪೆಡಸ್ಟ್ರಿಯನ್ ಪಾತ್ ನಿರ್ಮಿಸಲಾಗುವುದು ಎಂದು ಸಂಸದರು ತಿಳಿಸಿದರು.ಚತುಶ್ಪತ ಯೋಜನೆ ಶೀಘ್ರ ಮುಗಿಯಲಿದ್ದು ಬೈಕಂಪಾಡಿ ಸೇತುವೆ ಮಾರ್ಚು 15ರ ಒಳಗೆ ಲೋಕಾರ್ಪಣೆ ಗೊಳ್ಳಲಿದೆ ಸುರತ್ಕಲ್ ನಿಂದ ಬಿಸಿ ರೋಡ್ ವರೆಗಿನ ಚತುಶ್ಪತ ಹೆದ್ದಾರಿಯ ಸರ್ವಿಸ್ ರಸ್ತೆ ಗಳು ಕಿರಿದಾಗಿರುವ ಬಗ್ಗೆ ದೂರುಗಳು ಬಂದಿದ್ದು ಈ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚುವರಿ 23ಕೋಟಿ ರೂ ಬಿಡುಗಡೆಮಾಡಿದೆ. ಕೇವಲ ಅಭಿವೃದ್ಧಿಯ ಪರವಾಗಿರುವ ಕಾರಣ ಯಾವುದೇ ಲಾಬಿಗೆ ಮಣಿಯದೆ ಯೋಜನೆ ಸಂಪೂರ್ಣ ಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಾರ್ವಜನಿಕರ ಅಸಹಕಾರ ಪದೇ ಪದೆ ಯೋಜನೆಯಲ್ಲಿ ಬದಲಾವಣೆಗೆ ಒತ್ತಡದಿಂದಾಗಿ ಯೋಜನೆಯ ವೇಗ ಕುಂಠಿತಗೊಂಡಿದ್ದು ನಾಗರೀಕರು ಸಹಕರಿಸಬೇಕು ಎಂದರು.
ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿಯ ಚೀಫ್ ಪ್ರೋಜೆಕ್ಟ್ ಲೀಡರ್ ಸ್ಯಾಮ್‌ಸನ್ ವಿಜಯ ಕುಮಾರ್,ಪ್ರೋಜೆಕ್ಟ್ ಟೀಮ್ ಲೀಡರ್ ಇಮ್ರಿಕ್ ಡೇವಿಸ್,ನವಯುಗ್ ಕಂಪೆನಿಯ ಸೀನಿಯರ್ ಪ್ರೋಜೆಕ್ಟ್ ಮೇನೆಜರ್ ಶಂಕರ್, ಜಿ.ಪಂ.ಸದಸ್ಯ ಈಶ್ವರ ಕಟೀಲು, ಮೂಲ್ಕಿ ಪ.ಪಂ ಅಧ್ಯಕ್ಷೆ ಮೀನಾಕ್ಷಿ ಬಂಗೇರಾ, ಉಪಾಧ್ಯಕ್ಷೆ ವಸಂತಿ ಭಂಡಾರಿ, ಸ್ಥಾಯೀ ಸಮಿತಿ ಅಧ್ಯಕ್ಷ ಸುನಿಲ್ ಆಳ್ವಾ, ಸತೀಶ್ ಅಂಚನ್, ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಕೃಷ್ಣ ಶೆಟ್ಟಿ, ಅರವಿಂದ ಪೂಂಜ, ಭುವನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು, ಹರೀಶ್ ಪುತ್ರನ್, ಎಚ್.ವಿ.ಕೋಟ್ಯಾನ್, ಉದಯ ಕುಮಾರ್ ಶೆಟ್ಟಿ, ಸತ್ಯೇಂದ್ರ ಶೆಣೈ, ಪ್ರಸಾದ್ ಕಾಮತ್, ಉದಯ ಅಮೀನ್ ಮಟ್ಟು. ವಚನ್ ಮಣೈ ಮುಕ್ಕ, ಶರತ್‌ಚಂದ್ರ ಶೆಟ್ಟಿ, ಗಣೇಶ್ ಹೊಸಬೆಟ್ಟು, ದಯಾನಂದ ಶೆಟ್ಟಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Bhagyavan Sanil

Mulki-02011502

Comments

comments

Comments are closed.

Read previous post:
Mulki-02011501
ಯಕ್ಷಗಾನ ಸ್ಫರ್ಧೆ ವಿಜಯ ಕೇಸರಿ- ಆಳ್ವಾಸ್ ಮಡಿಲಿಗೆ

ಮೂಲ್ಕಿ: ಮಂಗಳೂರು ವಿ ವಿ ಮಟ್ಟದ ಅಂತರ್ ಕಾಲೇಜು ತೆಂಕು ತಿಟ್ಟು ಯಕ್ಷಗಾನ ಸ್ಫರ್ಧೆ ಯಕ್ಷ ವಿಜಯ ಕೇಸರಿ-2014 ರ ಪ್ರಥಮ ಪ್ರಶಸ್ತಿಯನ್ನು ಮೂಡಬಿದ್ರಿಯ ಆಳ್ವಾಸ್ ಕಾಲೇಜು...

Close