ಯಕ್ಷಗಾನ ಸ್ಫರ್ಧೆ ವಿಜಯ ಕೇಸರಿ- ಆಳ್ವಾಸ್ ಮಡಿಲಿಗೆ

ಮೂಲ್ಕಿ: ಮಂಗಳೂರು ವಿ ವಿ ಮಟ್ಟದ ಅಂತರ್ ಕಾಲೇಜು ತೆಂಕು ತಿಟ್ಟು ಯಕ್ಷಗಾನ ಸ್ಫರ್ಧೆ ಯಕ್ಷ ವಿಜಯ ಕೇಸರಿ-2014 ರ ಪ್ರಥಮ ಪ್ರಶಸ್ತಿಯನ್ನು ಮೂಡಬಿದ್ರಿಯ ಆಳ್ವಾಸ್ ಕಾಲೇಜು ರೂ 10000 ನಗದು ಸಹಿತ ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಸುರತ್ಕಲ್ ನ ಗೋವಿಂದ ದಾಸ್ ಕಾಲೇಜು ರೂ 7000 ನಗದು ಸಹಿತ ಗಳಿಸಿದೆ ಹಾಗೂ ಉಜಿರೆಯ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾಲೇಜು ರೂ 5000 ನಗದು ಸಹಿತ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.
ಮೂಲ್ಕಿಯ ವಿಜಯ ಕಾಲೇಜು,ಲಯನ್ಸ್ ಕ್ಲಬ್ ಹಾಗೂ ಮಂಗಳೂರು ವಿಶ್ವ ವಿದ್ಯಾನಿಲಯದ ಡಾ ಪಿ ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಮೂಲ್ಕಿಯ ವಿಜಯ ಕಾಲೇಜಿನ ಅರ್ಪಣಾ ಸುವರ್ಣ ಮಹೋತ್ಸವ ವೇದಿಕೆಯ ಯಕ್ಷಾಂಗದಲ್ಲ್ಲಿ ಎರಡು ದಿನಗಳ ಕಾಲ ಜರಗಿದ ಯಕ್ಷ ವಿಜಯ ಕೇಸರಿ-2014 ಬುಧವಾರ ನಡೆದ ಸ್ಪರ್ದೆಯ ಸಮಾರೋಪ ಸಮಾರಂಭದಲ್ಲಿ ಉಡುಪಿಯ ಸಾರಿಗೆ ಉದ್ಯಮಿ ವಿಲಾಸ್ ನಾಯಕ್ ವಿಜೇತರಿಗೆ ಬಹುಮಾನ ವಿತರಿಸಿ, ದೇಶದ ಯುವ ಪ್ರತಿಭೆಗಳು ಪರದೇಶದಲ್ಲಿ ಸೇವೆ ನೀಡುವುದರಿಂದ ದೇಶದ ಅಭಿವೃದ್ಧಿಗೆ ಹೊಡೆತ ಉಂಟಾಗುವ ಕಾರಣ ಯುವ ಪೀಳಿಗೆ ದೇ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬೇಕು.ಯುವ ಸಮಾಜ ಸಮಯಕ್ಕೆ ಆದ್ಯತೆ ನೀಡುವುದು ಮಾತ್ರವಲ್ಲದೆ ಯಕ್ಷಗಾನದಂತ ಭಾರತೀಯ ಕಲಾ ಪ್ರಾಕಾರಗಳಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳುವ ಮೂಲಕ ದೇಶದ ಸಂಸ್ಕೃತಿಯ ಉನ್ನತಿಗೆ ಸಹಕರಿಸಬೇಕು ಎಂದರು.
ಮಂಗಳೂರು ವಿ ವಿ ಯ ವ್ಯಾಪ್ತಿಗೆ ಒಳಪಟ್ಟ ಕಾರ್ಕಳ,ಕಟೀಲು,ಮಂಗಳೂರು,ಮೂಡಬಿದ್ರಿ,ಉಜಿರೆ,ಸುರತ್ಕಲ್,ಬೆಟ್ಟಂಪಾಡಿಯ ಕಾಲೇಜು ಸೇರಿದಂತೆ ಒಟ್ಟು 7 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದೆ.ವಯುಕ್ತಿಕ ಪ್ರಶಸ್ತಿಗಳು: ಕಿರೀಟ ವೇಷ(ದೇವೇಂದ್ರ) ಅಭಿಜಿತ್ ಎಚ್.ರಾವ್(ಆಳ್ವಾಸ್), ಬಣ್ಣದ ವೇಷ (ಶತ್ರು ಪ್ರಸೂದನ) ಸಚಿನ್ ಕೆ ಅಮೀನ್ (ಆಳ್ವಾಸ್), ಪಗಡಿ (ಸುದರ್ಶನ) ಶರತ್ ಪೂಜಾರಿ(ಆಳ್ವಾಸ್),ಸ್ರೀ ಪಾತ್ರ (ಲಕ್ಷ್ಮಿ) ಮಹಮ್ಮದ್ ಅಶ್ಪಕ್ ಹುಸೈನ್(ಆಳ್ವಾಸ್) ಹಾಸ್ಯ (ದೇವದೂತ) ಆದಿತ್ಯ ಭಟ್(ಆಳ್ವಾಸ್) ಪೋಷಕ ಪಾತ್ರ (ಸುಧನ್ವ) ಶಿವಾನಿ ಸುರತ್ಕಲ್(ಗೋವಿಂದ ದಾಸ ಸುರತ್ಕಲ್) ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸುರತ್ಕಲ್ ಉದ್ಯಮಿ ಅಗರಿ ರಾಘವೇಂದ್ರ ರಾವ್ ವಹಿಸಿದ್ದರು. ಕಾರ್ಯಕ್ರಮ ಸಂಘಟಕ ಯಕ್ಷ ವಿಜಯ ಕೇಸರಿ ಸಮಿತಿಯ ಕಾರ್ಯದರ್ಶಿ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ.ನಾರಾಯಣ್ ರನ್ನು ಸಪತ್ನೀಕರಾಗಿ ಸನ್ಮಾನಿಸಲಾಯಿತು.ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಅಧ್ಯಕ್ಷ ಡಾ ಎಚ್ ಎಸ್ ಬಲ್ಲಾಳ್,ಆಡಳಿತಾಧಿಕಾರಿ ಡಾ ಎಚ್ ಶಾಂತರಾಮ್,ಉಡುಪಿಯ ಉದ್ಯಮಿ ಮಹೇಶ್ ಸುವರ್ಣ,ಮಂಗಳೂರು ವಿ ವಿ ಯ ಡಾ ಪಿ ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಆಧ್ಯಯನ ಕೇಂದ್ರದ ನಿರ್ದೇಶಕ ಪ್ರೊ ಕೆ ಚೆನ್ನಪ್ಪ ಗೌಡ,ಮೂಲ್ಕಿ ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ್ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು,ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವ ಪ್ರಸಾದ್ ಪುನರೂರು,ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ ಎಂ ಎ ಆರ್ ಕುಡ್ವ,ಪ್ರಾಂಶುಪಾಲ ಪ್ರೊ. ಕೆ ಆರ್ ಶಂಕರ್,ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಮೀದಾ ಬೇಗಂ,ಕಾಲೇಜಿನ ವಿದ್ಯಾರ್ಥಿ ನಾಯಕ ಮಂಜುನಾಥ್,ಯಕ್ಷ ವಿಜಯ ಕೇಸರಿ ಸಮಿತಿಯ ಜೊತೆ ಕಾರ್ಯದರ್ಶಿ ರಜನೀಶ್,ಪ್ರಾಣೇಶ್ ಭಟ್ ದೇಂದಡ್ಕ ಮತ್ತಿತರರು ಉಪಸ್ಥ್ತಿತರಿದ್ದರು.
ಪ್ರೊ. ಕೆ ಆರ್ ಶಂಕರ್ ಸ್ವಾಗತಿಸಿದರು, ಪ್ರಾಣೇಶ್ ಭಟ್ ದೇಂದಡ್ಕ ಕಾರ್ಯಕ್ರಮ ನಿರೂಪಿಸಿದರು.

Bhagyavan Sanil

Mulki-02011501

Comments

comments

Comments are closed.

Read previous post:
Kinnigoli-31121403
ಜ್ಞಾನದ ಪ್ರಭುತ್ವವನ್ನು ಹೆಚ್ಚಿಸಬೇಕು

ಕಿನ್ನಿಗೋಳಿ : ಪ್ರಾಥಮಿಕ ಹಂತದಲ್ಲಿಯೇ ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ಕೊಡಬೇಕು, ಪೋಷಕರು ಸದಭಿರುಚಿಯ ನೈತಿಕ ಶಿಕ್ಷಣ ಹಾಗೂ ಮಕ್ಕಳ ಮನಸ್ಸಲ್ಲಿ ಒಳ್ಳೆಯ ಭಾವನೆಗಳನ್ನು ಮೂಡಿಸಿ ಮಕ್ಕಳಿಗೆ ಕಷ್ಟದ ದಿನಗಳನ್ನು...

Close