ಬಪ್ಪನಾಡು:ವ್ಯಕ್ತಿ ಆತ್ಮಹತ್ಯೆ

ಮೂಲ್ಕಿ: ಬಪ್ಪನಾಡು ಬೀಚು ರಸ್ತೆ ಬದಿಯ ಖಾಸಗಿ ಜಾಗವೊಂದರಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಮೃತ ವ್ಯಕ್ತಿಯನ್ನು ಉಮೇಶ ಪೂಜಾರಿ(51) ಎಂದು ಗುರುತಿಸಲಾಗಿದೆ. ವರ್ಷದ ಹಿಂದೆ ಈತನ ಪತ್ನಿ ಮೃತಪಟ್ಟಿದ್ದು ಬಳಿಕ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.ಈತನಿಗೆ ಇಬ್ಬರು ಮಕ್ಕಳಿದ್ದಾರೆ. ಮರಣದ ಹಿಂದಿನ ದಿನ ಈತ ತನ್ನ ಮಿತ್ರನೊಂದಿಗೆ ಮೃತ ಪತ್ನಿಯ 10 ಸಾವಿರ ಸಿಕ್ಕಿದೆ ಎಂದು ಹೇಳಿಕೊಂಡಿದ್ದ. ಹೊಸ ವರ್ಷದ ಆರಂಭದಲ್ಲೇ ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತನು ಬಪ್ಪನಾಡು ಆಸುಪಾಸಿನಲ್ಲಿ ಕೂಲಿಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Puneethakrishna

Mulki-02011504

Comments

comments

Comments are closed.

Read previous post:
Balkunje-02011503
ಬಳ್ಕುಂಜೆ ಸಂತ ಪೌಲರ ಚರ್ಚ್ ಶತಮಾನೋತ್ಸವ

ಕಿನ್ನಿಗೋಳಿ: ಬಳ್ಕುಂಜೆ ಸಂತ ಪೌಲರ ಚರ್ಚ್‌ನಲ್ಲಿ ಜನವರಿ 3, 4 ಮತ್ತು 5ರಂದು ಶತಮಾನೋತ್ಸವದ ಸಂಭ್ರಮಾಚರಣೆ ನಡೆಯಲಿದೆ. ಜನವರಿ 3ರಂದು ಸಾಯಂಕಾಲ ಗಂಟೆ 3.45ಕ್ಕೆ ಬಂಡಸಾಲೆಯಿಂದ ಬಳ್ಕುಂಜೆ ಚರ್ಚ್...

Close