ಲಾರಿ ಅಫಘಾತ ಇಬ್ಬರಿಗೆ ಗಾಯ

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಕ್ಷೀರಸಾಗರ ಬಳಿ ಉಡುಪಿ ಜಿಲ್ಲೆಯ ಹೆಬ್ರಿಯಿಂದ ಕೇರಳದ ಕಾಙಂಗಾಡಿಗೆ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಎದುರು ಬದಿಯ ವಾಹನವನ್ನು ತಪ್ಪಿಸಲು ಯತ್ನಿಸಿ ಹೆದ್ದಾರಿಯ ಬದಿಯ ಗೋಡೆಗೆ ಗುದ್ದಿದ ಘಟನೆ ಗುರುವಾರ ಬೆಳಗ್ಗಿನ ಜಾವ ನಡೆದಿದೆ. ಗಾಯಗೊಂಡ ಚಾಲಕನನ್ನು ಹಾವೇರಿ ನಿವಾಸಿ ಮಹಾಂತೇಶ(33) ಮತ್ತು ಕ್ಲೀನರ್ ಕೃಷ್ಣ(25) ಎಂದು ಗುರುತಿಸಲಾಗಿದೆ. ಗೋಡೆಗೆ ಲಾರಿ ಅಪ್ಪಳಿಸಿದ ರಭಸಕ್ಕೆ ಚಾಲಕ ಮಹಂತೇಶನ ಮುಖಕ್ಕೆ ಗಂಭೀರ ಗಾಯಗಳಾಗಿದೆ. ರಾಷ್ಟ್ರೀಯ ಹೆದ್ದಾರಿ ೬೬ ಕ್ಷೀರಸಾಗರದ ಬಳಿ ಹೆದ್ದಾರಿ ಕಾಮಗಾರಿ ಅರ್ದಂಭರ್ದ ಕುಂಟುತ್ತಾ ಸಾಗುತ್ತಿದ್ದು ಎದುರು ಬದಿಯಿಂದ ಓವರ್‌ಟೇಕ್ ಮಾಡಿಕೊಂಡು ಬಂದ ವಾಹನದಿಂದ ಆಗುವ ಅಫಘಾತವನ್ನು ತಪ್ಪಿಸುವುದಗೋಸ್ಕರ ಚಾಲಕನು ಲಾರಿಯನ್ನು ತಿರುಗಿಸಿದಾಗ ನಿಯಂತ್ರಣ ತಪ್ಪಿ ಈ ಅಫಘಾತ ನಡೆದಿದೆ.ಬಳಿಕ ಇನ್ನೊಂದು ಲಾರಿಯಲ್ಲಿ ಅಕ್ಕಿಯನ್ನು ತುಂಬಿಸಿ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ.

Puneethakrishna 

Mulki-02011505 Mulki-02011506 Mulki-02011507

Comments

comments

Comments are closed.

Read previous post:
Mulki-02011504
ಬಪ್ಪನಾಡು:ವ್ಯಕ್ತಿ ಆತ್ಮಹತ್ಯೆ

ಮೂಲ್ಕಿ: ಬಪ್ಪನಾಡು ಬೀಚು ರಸ್ತೆ ಬದಿಯ ಖಾಸಗಿ ಜಾಗವೊಂದರಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಮೃತ ವ್ಯಕ್ತಿಯನ್ನು...

Close