ಗುತ್ತಕಾಡು ಈದ್ ಮಿಲಾದ್ ಸಮಾರಂಭ

 ಕಿನ್ನಿಗೋಳಿ: ಕಿನ್ನಿಗೋಳಿ ಗುತ್ತಕಾಡು ಖಿಲ್‌ರಿಯಾ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ಕಮಿಟಿ ಆಶ್ರಯದಲ್ಲಿ ಈದ್ ಮಿಲಾದ್ ಕಾರ್ಯಕ್ರಮ ಶುಕ್ರವಾರ ಗುತ್ತಕಾಡು ಮಸೀದಿ ವಠಾರದಲ್ಲಿ ನಡೆಯಿತು.
ಗುತ್ತಕಾಡು ಮಸೀದಿ ಖತೀಬ ಪಿ. ಜೆ. ಅಹ್ಮದ್ ಮದನಿ ದುವಾ ಪ್ರಾರ್ಥನೆಗೈದರು. ಮಸೀದಿ ಅಧ್ಯಕ್ಷ ಹಾಜಿ ಟಿ. ಎಚ್. ಮಯ್ಯದ್ದಿ ಅಧ್ಯಕ್ಷತೆ ವಹಿಸಿದ್ದರು.
ಪಿ. ಎಸ್. ಅಕ್ಬರ್ ಹುಸೈನ್ ಪುನರೂರು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಕಟ್ಟಡ ಸಮಿತಿ ಅಧ್ಯಕ್ಷ ಟಿ. ಹಸನಬ್ಬ, ಪುನರೂರು ಮಸೀದಿ ಖತೀಬ ಅಬ್ದುಲ್ ಹಸನ್ ಸಖಾಫಿ, ಕಿನ್ನಿಗೋಳಿ ಮಸೀದಿ ಖತೀಬ ಜೆ. ಎಚ್. ಕಬೀರ್, ಸೂರಿಂಜೆ ಹಿದಾಯತ್ ಶಾಲಾ ಸಂಚಾಲಕ ಕೆ. ಎ. ಅಬ್ದುಲ್ಲಾ, ಉದ್ಯಮಿ ಎಮ್. ಬಿ. ಇಸ್ಮಾಯಿಲ್ , ಕಿನ್ನಿಗೋಳಿ ಮಸೀದಿ ಅಧ್ಯಕ್ಷ ಹಾಜಿ. ಕೆ. ಎ. ರಜಾಕ್, ಪಿ. ಎಮ್. ನಝೀರ್ ಮದನಿ, ಅಬ್ದುಲ್ ರಝಾಕ್ ಉಸ್ತಾದ್, ಅಬ್ದುಲ್ ರಹಿಮಾನ್, ನೂರಿ ಅಮಾನಿ, ಅಬ್ದುಲ್ ನಾಸಿರ್, ಟಿ. ಎ. ನಝೀರ್, ಟಿ. ಕೆ. ಅಬ್ದುಲ್ ಕಾದರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-03011508

Comments

comments

Comments are closed.

Read previous post:
Kinnigoli-03011507
ಕಲ್ಲಮುಂಡ್ಕೂರು ಪ್ರೌಢ ಶಾಲೆ ವಾರ್ಷಿಕೋತ್ಸವವು

ಕಿನ್ನಿಗೋಳಿ: ಸರ್ವೋದಯ ಪ್ರೌಢ ಶಾಲೆ, ಕಲ್ಲಮುಂಡ್ಕೂರು ಇದರ ವಾರ್ಷಿಕೋತ್ಸವವು ಶಾಲಾಸಂಚಾಲಕ ಸುಭಾಶ್ಚಂದ್ರಪಡಿವಾಳ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು. ಯುವಜನ ಸೇವಾ ಬಂದರು ಮತ್ತು ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್, ಶಿಕ್ಷಣ...

Close