ಜನಪರ ಕಾಳಜಿ, ಚಿಂತನೆಗಳನ್ನು ಮೈಗೂಡಿಸಬೇಕು

ಕಿನ್ನಿಗೋಳಿ: ಜನಪರ ಕಾಳಜಿ, ಚಿಂತನೆಗಳನ್ನು ಮೈಗೂಡಿಸಿ ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳು ತೊಡಗಿಸಿಕೊಳ್ಳಬೇಕು ಎಂದು ಕಿನ್ನಿಗೋಳಿ ರೋಟರಿ ಅಧ್ಯಕ್ಷ ವಿಲಿಯಂ ಸಿಕ್ವೇರಾ ಹೇಳಿದರು.
ಬುಧವಾರ ಗುತ್ತಕಾಡು ಶಾಂತಿನಗರ ನಾಗರಿಕಾ ಹಿತರಕ್ಷಣಾ ವೇದಿಕೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಅಬ್ದುಲ್ ರಜಾಕ್ ಅಧ್ಯಕ್ಷತೆ ವಹಿಸಿದ್ದರು.
ಕಟೀಲು ದೇವಳ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಪ್ರೊ. ಜಯರಾಮ ಪೂಂಜಾ, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಹಿತರಕ್ಷಣಾ ವೇದಿಕೆಯ ಉಪಾಧ್ಯಕ್ಷ ಮೀರಾ ಸಾಬ್, ನಾರಾಯಣ ಪೂಜಾರಿ, ಬಿಲ್ಲವ ಸಂಘದ ಅಧ್ಯಕ್ಷ ಬಾಲಕೃಷ್ಣ ಡಿ. ಸಾಲ್ಯಾನ್, ಗ್ರಾ. ಪಂ. ಸದಸ್ಯೆ ಶಾಂತಾ ಉಪಸ್ಥಿತರಿದ್ದರು.
ಚಂದ್ರಶೇಖರ್ ವಂದಿಸಿದರು. ಅಬೂಬಕ್ಕರ್ ವರದಿ ವಾಚಿಸಿದರು. ದಿವಾಕರ ಕರ್ಕೇರಾ ಕಾರ್ಯಕ್ರಮ ನಿರೂಪಿಸಿದರು.

Kinnigoli-03011504

Comments

comments

Comments are closed.

Read previous post:
Kinnigoli-03011503
ಸಾಯಿಬಾಬಾ ಕುಟೀರ ಅಭಿಶೇಕ, ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ವಿವಿಧೆಡೆಗಳಲ್ಲಿ ಪಾರ್ಟಿ,ಗುಂಡು,ನೃತ್ಯ ಹಾಗೂ ಮನರಂಜನೆಗಳ ಮೂಲಕ ಈ ಬಾರಿಯ ಹೊಸವರ್ಷಾಚರಣೆ ನಡೆದರೆ ಸುರಗಿರಿ ಕುಂಜೊಟ್ಟು ಮನೆ ಸೀತಾರಾಮ ಪೂಜಾರಿಯವರ ಶ್ರೀ ಸಾಯಿಬಾಬಾ ಕುಟೀರದಲ್ಲಿ ಜನವರಿ 1 ರಂದು...

Close