ಕಟೀಲು: ಹಳೆ ವಿದ್ಯಾರ್ಥಿಗಳ ಸಂಗಮೋತ್ಸವ

ಕಿನ್ನಿಗೋಳಿ : ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಬದುಕುತ್ತಿರುವ ಹಳೇ ವಿದ್ಯಾರ್ಥಿಗಳಿಗೆ ಕಲಿತ ವಿದ್ಯಾಸಂಸ್ಥೆಯ ಮೇಲೆ ಅಭಿಮಾನ ಹೊಂದಿದ್ದರೆ ಅಂತಹ ಸಂಸ್ಥೆಗಳು ಮತ್ತಷ್ಟು ಬೆಳೆಯಲು ಸಾಧ್ಯ. ಸಾಮಾಜಿಕ ಸಾಮರಸ್ಯ, ಸೇವಾ ಮನೋಬಾವನೆಯಿಂದ ಯುವಜನಾಂಗಕ್ಕೂ ಪ್ರೇರಣೆ ನೀಡಬೇಕು ಎಂದು ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.

ಶುಕ್ರವಾರ ನಡೆದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿಗಳ ಸಂಗಮೋತ್ಸವ ಸಮಾರಂಭದಲ್ಲಿ ಶುಭಶಂಸನೆಗೈದು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವನ್ನು ವ್ಯಾಪಾರೀಕರಣ ಮಾಡದೆ ಮೌಲ್ಯಾಧಾರಿತ ಶಿಕ್ಷಣವನ್ನು ಎಲ್ಲಾ ಶಾಲಾ ಕಾಲೇಜುಗಳು ನೀಡಬೇಕು ಹಾಗಾದಾಗ ನಮ್ಮ ದೇಶ ತ್ವರಿತವಾಗಿ ಶ್ಯೆಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಮುಂದುವರಿಯುವುದು ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಈ ಸಂದರ್ಭ ನಿವೃತ್ತ ಶಿಕ್ಷಕ-ಶಿಕ್ಷಕಿಯರು, ಶಿಕ್ಷಕೇತರ ಸಿಬ್ಬಂದಿಗಳು, ಕ್ರೀಡೆ ಹಾಗೂ ಶಿಕ್ಷಣದಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು

ಬಳ್ಳಾರಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆ ವಹಿಸಿದ್ದರು.
ಮೂಡಬಿದ್ರೆ ಆಳ್ವಸ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಎಮ್. ಮೋಹನ್ ಆಳ್ವ, ಕರ್ನಾಟಕ ಸರಕಾರದ ರಾಜ್ಯ ಸಂಪರ್ಕಾಧಿಕಾರಿ ಮತ್ತು ಪದನಿಮಿತ್ತ ಜಂಟಿ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು, ಕಟೀಲು ದೇವಳ ಪ್ರಧಾನ ಅರ್ಚಕ ವಾಸುದೇವ ಆಸ್ರಣ್ಣ, ಉದ್ಯಮಿಗಳಾದ ಉದಯ ಕುಮಾರ್ ದುಬೈ, ಗಿರೀಶ್ ಶೆಟ್ಟಿ, ಸಂದೇಶ್ ಕುಮಾರ್ ಶೆಟ್ಟಿ, ಆದರ್ಶ ಶೆಟ್ಟಿ ಎಕ್ಕಾರು, ದಿವಾಕರ, ಅಜಿಲರ ಮನೆ ಆನಂದ ಶೆಟ್ಟಿ ಎಕ್ಕಾರು, ಪ್ರದ್ಯುಮ್ನ ರಾವ್, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಕಟೀಲು ಪ್ರೌಢ ಶಾಲಾ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮಧುಕರ ಅಮೀನ್, ಪ.ಪೂ. ಕಾಲೇಜು ಪ್ರಿನ್ಸ್‌ಪಾಲ್ ಜಯರಾಮ ಪೂಂಜಾ, ವೈಸ್ ಪ್ರಿನ್ಸ್‌ಪಾಲ್ ಕೆ.ವಿ.ಶೆಟ್ಟಿ, ಪ್ರಾಥಮಿ ಶಾಲಾ ಮುಖ್ಯ ಶಿಕ್ಷಕಿ ವನಮಾಲ, ಕಟೀಲು ಪದವಿ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ, ಕಟೀಲು ಸ್ಪೋಟ್ಸ್ ಎಂಡ್ ಗೇಮ್ಸ್ ಅಧ್ಯಕ್ಷ ಕೇಶವ ಮತ್ತಿತರರು ಉಪಸ್ಥಿತರಿದ್ದರು.
ಪ್ರೌಢಶಾಲಾ ಶಿಕ್ಷಕ- ರಕ್ಷಕ ಅಧ್ಯಕ್ಷ ಶ್ರೀಹರಿನಾರಾಯಣ ಆಸ್ರಣ್ಣ ಸ್ವಾಗತಿಸಿದರು, ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.

Kinnigoli-03011501

Comments

comments

Comments are closed.

Read previous post:
Mulki-02011506
ಲಾರಿ ಅಫಘಾತ ಇಬ್ಬರಿಗೆ ಗಾಯ

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಕ್ಷೀರಸಾಗರ ಬಳಿ ಉಡುಪಿ ಜಿಲ್ಲೆಯ ಹೆಬ್ರಿಯಿಂದ ಕೇರಳದ ಕಾಙಂಗಾಡಿಗೆ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಎದುರು ಬದಿಯ ವಾಹನವನ್ನು ತಪ್ಪಿಸಲು ಯತ್ನಿಸಿ...

Close