ತಾರೆಗಳ ತೋಟದಲಿ ಕೃತಿ ಬಿಡುಗಡೆ

 ಕಿನ್ನಿಗೋಳಿ: ಸಮಾಜದ ಅಂಕು ಡೊಂಕುಗಳು ಮತ್ತು ಓದುಗರ ಮನಸ್ಸನ್ನು ತಿದ್ದಿ ತೀಡುವ ಸಾಹಿತ್ಯ ಕೃತಿಗಳು ಹೆಚ್ಚಾಗಿ ಮೂಡಿ ಬರಬೇಕು ಎಂದು ಕರ್ನಾಟಕ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಶುಕ್ರವಾರ ಅಮ್ಚಿ ಗ್ರೂಪ್ (ವಾಟ್ಸಪ್) ಆಶ್ರಯದಲ್ಲಿ ಪೊಂಪೈ ಸ್ನಾತಕೋತ್ತರ ಕಾಲೇಜಿನ ಸಂತ ಜಾನ್ ಪೌಲ್ ಸಭಾಗಂಣದಲ್ಲಿ ಅಭಿಜಿತ್ ಪ್ರಕಾಶನ ಮುಂಬಯಿ ಪ್ರಕಟಿಸಿರುವ ಪತ್ರಕರ್ತ ಏಳಿಂಜೆ ನಾಗೇಶ್ ಮುಂಬಯಿಯವರ ಕೃತಿ ತಾರೆಗಳ ತೋಟದಲಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಚಾ ಪರ‍್ಕ ತಂಡದ ನಟ, ನಿರ್ದೆಶಕ ದೇವದಾಸ್ ಕಾಪಿಕಾಡ್ ಕೃತಿ ಬಿಡುಗಡೆಗೊಳಿಸಿ ಎಲ್ಲರಲ್ಲೂ ಕ್ರಿಯಾಶೀಲತೆ, ಪ್ರತಿಭೆ, ಆಸಕ್ತಿ ಇದೆ ಆದರೆ ಅದನ್ನು ಗುರುತಿಸಿ ಕಾರ್ಯರೂಪಕ್ಕೆ ತರುವಲ್ಲಿ ಪೋಷಕರು ಮತ್ತು ಶಿಕ್ಷಕರ ಶ್ರಮ ಅಗತ್ಯ ಎಂದು ಹೇಳಿದರು.
ಕಾಲೇಜಿನ ಸಂಚಾಲಕ ಫಾ. ಪೌಲ್ ಪಿಂಟೋ, ಪ್ರಿನ್ಸ್‌ಪಾಲ್ ಡಾ. ಜಾನ್ ಕ್ಲಾರೆನ್ಸ್ ಮಿರಾಂದ, ನಿವೃತ್ತ ಉಪನ್ಯಾಸಕ ಸಾಹಿತಿ ಬಿ. ಸೀತಾರಾಮ ಭಟ್, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಹೀರಾ ಆರ್. ಶೆಟ್ಟಿ , ಉದ್ಯಮಿ ರಘುರಾಮ ಶೆಟ್ಟಿ ಏಳಿಂಜೆ, ಕೃತಿಕಾರ ನಾಗೇಶ್ ಏಳಿಂಜೆ ಉಪಸ್ಥಿತರಿದ್ದರು.
ಪ್ರೊ. ಜಗದೀಶ ಹೊಳ್ಳ ಸ್ವಾಗತಿಸಿದರು. ನಟ , ಬರಹಗಾರ ಚೇತನ್ ರೈ.ಪುತ್ತೂರು ಕೃತಿ ಪರಿಚಯಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-03011509

Comments

comments

Comments are closed.

Read previous post:
Kinnigoli-03011508
ಗುತ್ತಕಾಡು ಈದ್ ಮಿಲಾದ್ ಸಮಾರಂಭ

 ಕಿನ್ನಿಗೋಳಿ: ಕಿನ್ನಿಗೋಳಿ ಗುತ್ತಕಾಡು ಖಿಲ್‌ರಿಯಾ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ಕಮಿಟಿ ಆಶ್ರಯದಲ್ಲಿ ಈದ್ ಮಿಲಾದ್ ಕಾರ್ಯಕ್ರಮ ಶುಕ್ರವಾರ ಗುತ್ತಕಾಡು ಮಸೀದಿ ವಠಾರದಲ್ಲಿ ನಡೆಯಿತು. ಗುತ್ತಕಾಡು...

Close