ಸಾಯಿಬಾಬಾ ಕುಟೀರ ಅಭಿಶೇಕ, ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ವಿವಿಧೆಡೆಗಳಲ್ಲಿ ಪಾರ್ಟಿ,ಗುಂಡು,ನೃತ್ಯ ಹಾಗೂ ಮನರಂಜನೆಗಳ ಮೂಲಕ ಈ ಬಾರಿಯ ಹೊಸವರ್ಷಾಚರಣೆ ನಡೆದರೆ ಸುರಗಿರಿ ಕುಂಜೊಟ್ಟು ಮನೆ ಸೀತಾರಾಮ ಪೂಜಾರಿಯವರ ಶ್ರೀ ಸಾಯಿಬಾಬಾ ಕುಟೀರದಲ್ಲಿ ಜನವರಿ 1 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕಲ್ಯಾಣಾರ್ಥವಾಗಿ ವಿಶೇಷ ಸೀಯಾಳಭಿಷೇಕ ನಡೆಯಿತು.
ಮುಂಬೈ ಉದ್ಯಮಿ ಸೀತಾರಾಮ ಪೂಜಾರಿ ಮೋದಿ ಪ್ರಧಾನಿಯಾಗಿ ಸುಗಮವಾಗಿ ದೇಶವಾಳುವಂತೆ ಶ್ರೀ ಸಾಯಿಬಾಬಾರಲ್ಲಿ ಪ್ರಾರ್ಥಿಸಿ 1111 ಸೀಯಾಳಾಭಿಶೇಕದ ಹರಕೆ ಹೊತ್ತಿದ್ದರು. ಇದೀಗ ಪ್ರಧಾನಿ ಮೋದಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಹೊಸ ವರ್ಷಾಚರಣೆಯ ಸಂದರ್ಭ ತಮ್ಮ ಊರಿನ ಸ್ವಗೃಹ ಸುರಗಿರಿ ಕುಂಜೊಟ್ಟು ಮನೆಯ ಶ್ರೀ ಸಾಯಿಬಾಬಾ ಕುಟೀರದಲ್ಲಿ ಅತ್ತೂರು ಬಲು ಗಣಪತಿ ಮಂದಿರದ ಪ್ರಧಾನ ಅರ್ಚಕ ವೆಂಕಟರಾಜ ಉಡುಪರ ಪೌರೋಹಿತ್ಯದಲ್ಲಿ ವಿಶೇಷ ಪೂಜೆ ಸಹಿತ ಬೊಂಡಾಭಿಷೇಕ ನಡೆಯಿತು.

Kinnigoli-03011502

ನೂತನ ರಸ್ತೆ ಉದ್ಘಾಟನೆ
ಈ ಸಂದರ್ಭ ಸೀತಾರಾಮ ಪೂಜಾರಿಯವರು ತಮ್ಮ ವೈಯಕ್ತಿಕ ಖರ್ಚಿನಲ್ಲಿ ನಿರ್ಮಿಸಿದ ಸುರಗಿರಿ ಮುಖ್ಯ ರಸ್ತೆಯಿಂದ ಕುಂಜೊಟ್ಟು ಮನೆ ಹಾಗೂ ಶ್ರೀ ಸಾಯಿಬಾಬಾ ಕುಟೀರಕ್ಕೆ ಸಂಪರ್ಕ ಕಲ್ಪಿಸುವ ಡಾಮರೀಕೃತ ನೂತನ ರಸ್ತೆಯನ್ನು ಮುಂಡ್ಕೂರು ಜಾರಿಗೆಕಟ್ಟೆ ಶ್ರೀ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ ಉದ್ಘಾಟಿಸಿದರು. ರಸ್ತೆಯ ಪ್ರಾಯೋಜಕ ಸೀತಾರಾಮ ಪೂಜಾರಿ, ಗೌರಿ ಸೀತಾರಾಮ ಪೂಜಾರಿ, ಗುತ್ತಿಗೆದಾರ ಸಂತೋಷ್‌ಕುಮಾರ್ ಹೆಗ್ಡೆ, ಸ್ಥಳೀಯರಾದ ಅತ್ತೂರು ಭಂಡಾರಮನೆ ಶಂಭು ಮುಕ್ಕಾಲ್ದಿ, ಮುಮ್ಮೆಟ್ಟು ಜಗನ್ನಾಥ ಶೆಟ್ಟಿ, ಅತ್ತೂರುಗುತ್ತು ತಿಮ್ಮಪ್ಪ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಬಾಬು ಶೆಟ್ಟಿ ಮತ್ತಿತರರಿದ್ದರು.

Kinnigoli-03011503

Comments

comments

Comments are closed.

Read previous post:
Kinnigoli-03011501
ಕಟೀಲು: ಹಳೆ ವಿದ್ಯಾರ್ಥಿಗಳ ಸಂಗಮೋತ್ಸವ

ಕಿನ್ನಿಗೋಳಿ : ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಬದುಕುತ್ತಿರುವ ಹಳೇ ವಿದ್ಯಾರ್ಥಿಗಳಿಗೆ ಕಲಿತ ವಿದ್ಯಾಸಂಸ್ಥೆಯ ಮೇಲೆ ಅಭಿಮಾನ ಹೊಂದಿದ್ದರೆ ಅಂತಹ ಸಂಸ್ಥೆಗಳು ಮತ್ತಷ್ಟು ಬೆಳೆಯಲು ಸಾಧ್ಯ. ಸಾಮಾಜಿಕ ಸಾಮರಸ್ಯ, ಸೇವಾ...

Close