ತೋಕೂರು 27ನೇ ವಾರ್ಷಿಕೋತ್ಸವ

ಕಿನ್ನಿಗೋಳಿ: ಯುವ ಜನಾಂಗ ದುಶ್ಚಟಗಳನ್ನು ದೂರವಿರಿಸಿ ಸಮಾಜದ ಏಳಿಗೆ ಮತ್ತು ಅಭಿವೃದ್ಧಿಗೆ ಶ್ರಮಿಸಿ ಇತರರನ್ನು ಪ್ರೇರೇಪಿಸಬೇಕು ಎಂದು ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.
ಬುಧವಾರ ೧೦ ನೇ ತೋಕೂರು ಫೇಮಸ್ ಯೂತ್ ಕ್ಲಬ್‌ನ ೨೭ ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ಮಧು ಕಾರ್ಯಕ್ರಮ ಉದ್ಘಾಟಿಸಿದರು. ಹಳೆಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಮೋಹನ್ ಎಸ್. ಸುವರ್ಣ, ಉದ್ಯಮಿ ದಿವಾಕರ ಕರ್ಕೇರ ತಾಳಿಪಾಡಿ, ಕ್ಲಬ್‌ನ ಗೌರವಾಧ್ಯಕ್ಷ ಗುರುರಾಜ್ ಎಸ್. ಪೂಜಾರಿ, ಅಧ್ಯಕ್ಷ ಕೆ. ಪ್ರಮೋದ್ ಕುಮಾರ್, ಕೋಶಾಧಿಕಾರಿ ನವೀನ್ ಉಪಸ್ಥಿತರಿದ್ದರು. ಶರೀಫ್ ಸ್ವಾಗತಿಸಿ ವಿಶ್ವಜಿತ್ ವರದಿ ವಾಚಿಸಿದರು. ಉದಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-03011505

Comments

comments

Comments are closed.

Read previous post:
ಜನಪರ ಕಾಳಜಿ, ಚಿಂತನೆಗಳನ್ನು ಮೈಗೂಡಿಸಬೇಕು

ಕಿನ್ನಿಗೋಳಿ: ಜನಪರ ಕಾಳಜಿ, ಚಿಂತನೆಗಳನ್ನು ಮೈಗೂಡಿಸಿ ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳು ತೊಡಗಿಸಿಕೊಳ್ಳಬೇಕು ಎಂದು ಕಿನ್ನಿಗೋಳಿ ರೋಟರಿ ಅಧ್ಯಕ್ಷ ವಿಲಿಯಂ ಸಿಕ್ವೇರಾ ಹೇಳಿದರು. ಬುಧವಾರ ಗುತ್ತಕಾಡು ಶಾಂತಿನಗರ ನಾಗರಿಕಾ...

Close