ಶಾಂತಿ ಹಾಗೂ ಸೇವೆ ಧರ್ಮಗಳ ಒಳ ತಿರುಳುಗಳು

ಕಿನ್ನಿಗೋಳಿ : ಶಾಂತಿ ಪ್ರೀತಿ ಪ್ರೇಮ ಹಾಗೂ ಸೇವಾ ಚಿಂತನೆಗಳು ಎಲ್ಲಾ ಧರ್ಮಗಳ ಒಳ ತಿರುಳುಗಳಾಗಿದೆ. ಸಮಾಜದ ವಿಮುಖ ದಿಕ್ಕಿನಲ್ಲಿ ಹೋಗುತ್ತಿರುವವರನ್ನು ತಿದ್ದಿ ತೀಡಿ ಸಮಾಜದಲ್ಲಿ ಸೌಹಾರ್ಧ ಮತ್ತು ಶಾಂತಿಯುತ ಜೀವನ ಸಾಗಿಸಲು ಧರ್ಮಗಳ ಸಾರವನ್ನು ಧರ್ಮಗುರುಗಳು ಜನರಿಗೆ ತಿಳಿ ಹೇಳಬೇಕಾದ ಆದ್ಯ ಕರ್ತವ್ಯ ಎಂದು ಉಡುಪಿ ಕಿರು ಕ್ರೈಸ್ತ ಸಮುದಾಯದ ನಿರ್ದೇಶಕ ಫಾ. ಹೆರಾಲ್ಡ್ ಪಿರೇರಾ ಹೇಳಿದರು.

ಶನಿವಾರ ನಡೆದ ಬಳ್ಕುಂಜೆ ಸಂತಪೌಲರ ಚರ್ಚ್‌ನ ಶತಮಾನೋತ್ಸವ ಸಮಾರಂಭದ ಸರ್ವ ಧರ್ಮ ಸಮ್ಮೇಳನದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಆಂಧ ಧರ್ಮಾಚರಣೆ ಸಲ್ಲದು. ಇಂದಿನ ಯುಗದಲ್ಲಿ ಅಸತ್ಯ ಸತ್ಯದ ಮೇಲೆ ಏರಿ ಹೋಗುತ್ತಿದೆ ಎಲ್ಲಾ ಧರ್ಮಗಳಲ್ಲಿನ ಯುವ ಪೀಳಿಗೆಗೆ ಧರ್ಮ ಜಾಗೃತಿ ಅರಿವು ಮೂಡಿಸಬೇಕಾದ ಪ್ರಮೇಯ ಬಂದೊಗಿದೆ. ಎಂದು ಉಳೆಪಾಡಿ ಶ್ರೀ ದುರ್ಗಾ ಪರಮೇಶ್ವರಿ ಮಹಮ್ಮಾಯೀ ದೇವಳದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ಹೇಳಿದರು.

ಕಿನ್ನಿಗೋಳಿ ಚರ್ಚ್ ಪ್ರಧಾನ ಧರ್ಮಗುರು ವಿನ್ಸೆಂಟ್ ಪ್ರಾನ್ಸಿಸ್ ಮೊಂತೆರೊ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಚರ್ಚ್ ಸರ್ವ ಏಳಿಗೆಗಾಗಿ ಶ್ರಮಿಸಿದ ಭಾನುತೇಜ ಅಜಿಲ ಕುಟುಂಬ ಹಾಗೂ ಸಾಂತಿಸ್ ಕುಟುಂಬವನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಶತಮಾನೋತ್ಸವ ಸಮಿತಿ ಸಂಚಾಲಕ ನೆಲ್ಸನ್ ಲೋಬೋ, ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್, ಬಳ್ಕುಂಜೆ ವಿಠೋಬ ರುಕುಮಾಯಿ ಭಜನ ಮಂದಿರದ ಅಧ್ಯಕ್ಷ ದಿನಕರ ಶೆಟ್ಟಿ, ಜೋಕಟ್ಟೆ ಸರಕಾರಿ ಆರ್ಯುವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಮುರಳೀಧರ ಎ., ಅನಿತಾ ಡಿಸೋಜ, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಫೆಡ್ರಿಕ್ ಪಿಂಟೊ, ಕಾರ್ಯದರ್ಶಿ ನ್ಯಾನ್ಸಿ ಕಾರ್ಡೋಜ ಉಪಸ್ಥಿತರಿದ್ದರು.

ಬಳ್ಕುಂಜೆ ಚರ್ಚ್ ಪ್ರಧಾನ ಧರ್ಮಗುರು ಫಾ. ಮೈಕಲ್ ಡಿಸಿಲ್ವ ಪ್ರಸ್ತಾವನೆಗೈದರು. ಸುನಿತಾ ಡಿಸೋಜ ನಿರೂಪಿಸಿದರು.

Balkunje-04011501 Balkunje-04011502 Balkunje-04011503

Comments

comments

Comments are closed.

Read previous post:
mulki-03011510
ಈದ್ ಮಿಲಾದ್

ಮೂಲ್ಕಿ: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮೂಲ್ಕಿ ಪರಿಸರದ ಹಾಗೂ ಕೆ ಎಸ್ ರಾವ್ ನಗರದ ಮುಸ್ಲಿಂ ಬಾಂಧವರು ಕಾರ್ನಾಡಿನಿಂದ ಮೂಲ್ಕಿಯ ಕೇಂದ್ರ ಶಾಫಿ ಜುಮ್ಮಾ ಮಸೀದಿಯವರೆಗೆ ಮೆರವಣಿಗೆ...

Close