ತೋಕೂರು: ಎನ್.ಎಸ್.ಎಸ್ ವಾರ್ಷಿಕ ಶಿಬಿರ

ತೋಕೂರು: ಎಂ.ಆರ್. ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ, ತೋಕೂರು ,ತಪೋವನ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಇತ್ತೀಚೆಗೆ ಶ್ರೀ ಧೂಮಾವತಿ ದೈವಸ್ಥಾನದ ವಠಾರ, ಅತಿಕಾರಿಬೆಟ್ಟು, ಮೈಲೊಟ್ಟು ವಿನಲ್ಲಿ ನೆರವೇರಿತು.

ಕಿಶೋರ್ ಶೆಟ್ಟಿ ಅತಿಕಾರಿಬೆಟ್ಟು ಅಧ್ಯಕ್ಷ  ಹಳೆ ವಿಧ್ಯಾರ್ಥಿ ಸಂಘ  ಅವರು  ಸಮಾರೋಪ ಭಾಷಣ ಮಾಡಿದರು. ವಿದ್ಯಾರ್ಥಿಗಳು ಎನ್.ಎಸ್.ಎಸ್.ನಲ್ಲಿ ಕಲಿತ ಆದರ್ಶಗಳನ್ನು ಜೀವನದುದ್ದಕ್ಕೂ ಪಾಲಿಸಿ ಸಮಾಜಕ್ಕೆ ಯೋಗ್ಯ ವ್ಯಕ್ತಿಗಳಾಗಿ ಬಾಳಿ ಎಂದು ಕರೆಯಿತ್ತರು.

ಹಳೆ ವಿಧ್ಯಾರ್ಥಿ ಸಂಘ ಕಾರ್ಯಧ್ಯಕ್ಷ  ಉತ್ತಮ್ ಕುಆರ್, ಅತಿಕಾರಿಬೆಟ್ಟು ಇವರು ಸ್ವಯಂ ಸೇವಕರ ಶಿಸ್ತು, ನಿಷ್ಠೆ, ಪರಿಶ್ರಮಗಳನ್ನು ಶ್ಲಾಘಿಸಿದರು.  ಆಧ್ಯಕ್ಷೀಯ ಭಾಷಣ ಮಾಡಿದ ಸಂಸ್ಠೆಯ ಪ್ರಾಚಾರ್ಯ ವೈ.ಎನ್. ಸಾಲಿಯಾನ್ ಈ ಶಿಬಿರಕ್ಕೆ ಸರ್ವ ರೀತಿಯ ಸಹಕಾರ ನೀಡಿದ ಗಣ್ಯರು ಹಾಗೂ ಗ್ರಾಮಸ್ಥರ ಸೇವೆಯನ್ನು ಸ್ಮರಿಸಿದರು.

ಶಿಬಿರಾಧಿಕಾರಿ ರಘುರಾಮ್ ರಾವ್ ಸ್ವಾಗತಿಸಿ, ಸಹ ಶಿಬಿರಾಧಿಕಾರಿ ಸುರೇಶ್ ಎಸ್. ವಂದನಾರ್ಪಣೆಗೈದು, ದಯಾನಂದ ಲಾಗ್ವಣ್‌ಕರ್ ನಿರೂಪಿಸಿದರು. ಆತ್ಯುತ್ತಮ ಸೇವೆಗೈದ ಸ್ವಯಂಸೇವಕರನ್ನು ಹಾಗೂ ತಂಡಗಳನ್ನು ಪುರಸ್ಕರಿಸಲಾತು.

Kinnigoli-05011501

Comments

comments

Comments are closed.

Read previous post:
KInnigoli-04011501
ದೇವಿಶ್ ಶೆಟ್ಟಿ : ಚಾಂಪಿಯನ್ ಪ್ರಶಸ್ತಿ

ಕಿನ್ನಿಗೋಳಿ : ದೇಹದಾಡ್ಯ ಸ್ಪರ್ಧೆಯಲ್ಲಿ ಚಾಂಪಿಯನ್ ಪ್ರಶಸ್ತಿ ಪಡೆದ ಕಿನ್ನಿಗೋಳಿಯ ವೀರಮಾರುತಿ ವ್ಯಾಯಾಮ ಶಾಲೆಯ ವಿದ್ಯಾರ್ಥಿ ದೇವಿಶ್ ಶೆಟ್ಟಿ ಐಕಳ ಅವರಿಗೆ ಭಾನುವಾರ ಕಿನ್ನಿಗೋಳಿ ವ್ಯಾಯಾಮ ಶಾಲೆಯಲ್ಲಿ...

Close