ಗುತ್ತಕಾಡು ಗ್ರೀನ್ ಸ್ಟಾರ್ ಟ್ರೋಪಿ

ಕಿನ್ನಿಗೋಳಿ : ಶಾಂತಿನಗರ- ಗುತ್ತಕಾಡು ಗ್ರೀನ್ ಸ್ಟಾರ್ ಕ್ರಿಕಟರ‍್ಸ್ ಎಸೋಸಿಯೇಶನ್ ಹಾಗೂ ರೋಟರಿ ಸಮುದಾಯದಳ ಆಶ್ರಯದಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯಾಟ ಭಾನುವಾರ ಗುತ್ತಕಾಡು ಶಾಲಾ ಮೈದಾನದಲ್ಲಿ ನಡೆಯಿತು.
ಯಂಗ್ ಫ್ರೆಂಡ್ಸ್ ಗುತ್ತಕಾಡು ಪ್ರಥಮ ಹಾಗೂ ನವಚೈತನ್ಯಫ್ರೆಂಡ್ಸ್ ಗುತ್ತಕಾಡು ದ್ವಿತೀಯ ಪ್ರಶಸ್ತಿ ಪಡೆದುಕೊಂಡವು
ಈ ಸಂದರ್ಭ ಸಮಾಜ ಸೇವಕ ಟಿ. ಕೆ. ಅಬ್ದುಲ್ ಖಾದರ್ ಅವರಿಗೆ ಗ್ರೀನ್ ಸ್ಟಾರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ರೋಟರಿ ಸಮುದಾಯದಳ ಅಧ್ಯಕ್ಷ ಸೈಯ್ಯದ್ ಅಲಿ ಟ್ರೋಫಿ ವಿತರಿಸಿದರು. ಕಿನ್ನಿಗೋಳಿ ಗ್ರಾ. ಪಂ. ಮಾಜಿ ಅದ್ಯಕ್ಷ ಹಾಜಿ ಟಿ. ಎಚ್. ಮಯ್ಯದ್ದಿ, ಗುತ್ತಕಾಡು ಸರಕಾರಿ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಉದ್ಯಮಿಗಳಾದ ದಿವಾಕರ ಕರ್ಕೇರಾ, ಟಿ. ಹಸನಬ್ಬ, ಬಶೀರ್ ಗುತ್ತಕಾಡು, ನಾಗರಿಕಾ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಅಬ್ದುಲ್ ರಝಾಕ್, ಟಿ. ಎ. ನಝೀರ್, ಗ್ರೀನ್ ಸ್ಟಾರ್ ಸಂಸ್ಥೆಯ ಅಧ್ಯಕ್ಷ ಗುಲಾಂ ಹುಸೈನ್, ನಿರ್ದೇಶಕ ಅಸ್ಗರ್ ಅಲಿ, ಕಬೀರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-06011502

Comments

comments

Comments are closed.

Read previous post:
Kinnigoli-06011501
ಡಮರು ನಾಟ್ಯಾಲಯ ಗಾನ- ನೃತ್ಯವೈಭವ

ಕಿನ್ನಿಗೋಳಿ : ಡಮರು ನಾಟ್ಯಾಲಯ ಎಸ್. ಕೋಡಿ ಇದರ ವಾರ್ಷಿಕೋತ್ಸವ ಹಾಗೂ ಗಾನ- ನೃತ್ಯವೈಭವ ಸಮಾರಂಭ ಭಾನುವಾರ ಕಿನ್ನಿಗೋಳಿಯ ರಾಜಾಂಗಣ ಸಭಾಭವನದಲ್ಲಿ ನಡೆಯಿತು. ಶಾಂತಾಲಾ ಪ್ರಶಸ್ತಿ ವಿಜೇತ ಉಳ್ಳಾಲ...

Close