ರಾಸಾಯನ ಶಾಸ್ತ್ರ ವಿಚಾರ ಗೋಷ್ಠಿ

ಮೂಲ್ಕಿ: ಜೀವ ವೈವಿಧ್ಯ ಮತ್ತು ಪ್ರಪಂಚದ ಆಧುನಿಕ ಅವಿಷ್ಕಾರಗಳಿಗೆ ಮೂಲವಾದ ರಾಸಾಯನ ಶಾಸ್ತ್ರ ಪ್ರಕ್ರೀಯೆಗಳು ವಿವಿಧ ಸಂಶೋಧನೆಗಳು ಹಾಗೂ ಆಧುನಿಕ ಬದಲಾವಣೆಗಳಿಗೆ ಮೂಲ ಕಾರಣವಾಗಿದೆ ಎಂದು ಹಿರಿಯ ಸಂಶೋಧಕ, ಅಕಾಡಮಿ ಆಫ್ ಜನರಲ್ ಏಜ್ಯುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಹೇಳಿದರು.

ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಕಾಲೇಜು ಅದ್ಯಾಪಕರು, ಕೈಗಾರಿಕೋದ್ಯಮಿಗಳು ಮತ್ತು ಸಂಶೋಧನ ವಿದ್ಯಾರ್ಥಿಗಳಿಗಾಗಿ ನಡೆಯುವ ಯುಜಿಸಿ ಪ್ರಾಯೋಜಿತ ರಾಜ್ಯಮಟ್ಟದ ರಾಸಾಯನ ಶಾಸ್ತ್ರ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ರಾಸಾಯನ ಶಾಸ್ತ್ರವು ಸಂಶೋಧನೆಗೆ ಪೂರಕ ಹರವುಗಳನ್ನು ಹೊಂದಿರುವ ಕಾರಣ ಯುವ ವಿಜ್ಞಾನಿಗಳ ಅವಿಷ್ಕಾರಗಳ ಶೋಧಕ್ಕೆ ಹೆಚ್ಚಿನ ಸಹಕಾರಿಯಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ಬಿಎಎಸ್‌ಎಫ್ ತಾಂತ್ರಿಕ ಪ್ರಯೋಗಾಲಯದ ಹಿರಿಯ ಪ್ರಭಂದಕ ಡಾ.ಪರಾಗ್ ಕುಮಾರ್ ಟಾಂಕಿ ಮಾತನಾಡಿ, ರಾಸಾಯನ ಶಾಸ್ತ್ರದ ಅವಿಷ್ಕಾರಗಳ ಪರಿಣಾಮ ಇಂದಿನ ಮೊಬ್ಯಲ್ ಟಚ್‌ಸ್ಕ್ರಿನ್, ಹಾಗೂ ಎಲ್‌ಇಡಿ, ಎಲ್‌ಸಿಡಿಗಳು ವಿಶ್ವ ವ್ಯಾಪಿಯಾಗಲು ಕಾರಣವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವಾ ವಹಿಸಿದ್ದರು.
ಬೆಂಗಳೂರು ಕೈಗಾರಿಕೋದ್ಯಮಿ ಜಾಕೋಬ್ ಕ್ರಾಸ್ತಾ, ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಆರ್ ಶಂಕರ್,ರಾಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ವಿ.ಸೇತು ಮಾಧವ ಅತಿಥಿಗಳಾಗಿದ್ದರು. ಸ್ನೇಹ ಮತ್ತು ರಂಜಿತಾ ಪ್ರಾರ್ಥಿಸಿದರು. ಪ್ರೊ.ಕೆ.ಆರ್ ಶಂಕರ್ ಸ್ವಾಗತಿಸಿದರು.ರಂಜಿತಾ ಪಿ ನಿರೂಪಿಸಿದರು. ಪ್ರೊ.ವೆಂಕಟೇಶ್ ಭಟ್ ವಂದಿಸಿದರು.

Bhagyavan Sanil

Mulki-07011503

Comments

comments

Comments are closed.

Read previous post:
Kinnigoli-07011502
ಧಾರ್ಮಿಕ ಚಿಂತನೆ ಮತ್ತು ಕೃಷಿಗೆ ಆಧ್ಯತೆ ನೀಡಬೇಕು

ಕಿನ್ನಿಗೋಳಿ : ಸಮಾಜದಲ್ಲಿ ಧಾರ್ಮಿಕ ಚಿಂತನೆ, ಶಿಕ್ಷಣ, ಮತ್ತು ಕೃಷಿಗೆ ಆಧ್ಯತೆ ನೀಡಿದಾಗ ಭವಿಷ್ಯದ ಕತ್ತಲೆಯಲ್ಲಿನ ಬೆಳಕನ್ನು ಕಾಣಬಹುದು ಎಂದು ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲು...

Close