ಧಾರ್ಮಿಕ ಚಿಂತನೆ ಮತ್ತು ಕೃಷಿಗೆ ಆಧ್ಯತೆ ನೀಡಬೇಕು

ಕಿನ್ನಿಗೋಳಿ : ಸಮಾಜದಲ್ಲಿ ಧಾರ್ಮಿಕ ಚಿಂತನೆ, ಶಿಕ್ಷಣ, ಮತ್ತು ಕೃಷಿಗೆ ಆಧ್ಯತೆ ನೀಡಿದಾಗ ಭವಿಷ್ಯದ ಕತ್ತಲೆಯಲ್ಲಿನ ಬೆಳಕನ್ನು ಕಾಣಬಹುದು ಎಂದು ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲು ಹೇಳಿದರು.
ಸೋಮವಾರ ನೂತನವಾಗಿ ಜೀರ್ಣೋದ್ದಾರಗೊಂಡ ಬಳ್ಕುಂಜೆ ಸಂತಪೌಲರ ಚರ್ಚ್ ಹಾಗೂ ಇದರ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಾನವೀಯ ಸೇವೆಗೆ ಸಂತ ಪೌಲರು ಮಾದರಿಯಾಗಿದ್ದಾರೆ. ಬಳ್ಕುಂಜೆ ಚರ್ಚ್‌ನ ಶತಮಾನೋತ್ಸವದ ಪೂರ್ವಭಾವಿ ಶ್ರಮ ಧಾನ ಧರ್ಮ ಕಾರ್ಯಗಳಲ್ಲಿ ಕ್ರೈಸ್ತ ಮತ್ತು ಕ್ರೈಸ್ತೇತರರೂ ಸ್ವಯಂಸ್ಪೂರ್ತಿಯಿಂದ ಪಾಲ್ಗೊಂಡಿದ್ದು ಸರ್ವ ಧರ್ಮ ಸಮನ್ವಯ ಹಾಗೂ ಸೌಹಾರ್ದತೆಯ ಸಂಕೇತವಾಗಿದೆ. ಕೂಡಿ ಬಾಳುವುದೇ ಜೀವನ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ.ಫಾ.ಡಾ. ಅಲೋಷಿಯಸ್ ಪಾವ್ಲ್ ಡಿಸೋಜ ಜೀರ್ಣೋದ್ದಾರಗೊಂಡ ಚರ್ಚ್ ಉದ್ಘಾಟಿಸಿ, ಸಂಸ್ಮರಣಾ ಗ್ರಂಥ ಬಿಡುಗಡೆಗೊಳಿಸಿ ಹಾಗೂ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚರ್ಚ್‌ನ ಜೀರ್ಣೋದ್ದಾರಕ್ಕಾಗಿ ದೇಣಿಗೆ ನೀಡಿದ ದಾನಿಗಳು ಹಾಗೂ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮಂಗಳೂರು ಬೆಥನಿ ಸಂಸ್ಥೆ ಮುಖ್ಯಸ್ಥೆ ಭಗಿನಿ ವಿಲ್ಬರ್ಟ ಬಿ.ಎಸ್., ಯುವಜನ ಕ್ರೀಡಾ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಮುಂಬಯಿ ಉದ್ಯಮಿ ವಿರಾರ್ ಶಂಕರ ಶೆಟ್ಟಿ ಚೆನ್ನಯ್ಯಬೆನ್ನಿ, ಶತಮಾನೋತ್ಸವ ಸಮಿತಿ ಸಂಚಾಲಕ ನೆಲ್ಸನ್ ಲೋಬೋ, ಕಾರ್ಯದರ್ಶಿ ಅನಿತಾ ಡಿಸೋಜ, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಫೆಡ್ರಿಕ್ ಪಿಂಟೊ, ಕಾರ್ಯದರ್ಶಿ ನ್ಯಾನ್ಸಿ ಕಾರ್ಡೋಜ ಉಪಸ್ಥಿತರಿದ್ದರು.
ಬಳ್ಕುಂಜೆ ಚರ್ಚ್ ಪ್ರಧಾನ ಧರ್ಮಗುರು ಫಾ. ಮೈಕಲ್ ಡಿಸಿಲ್ವ ಪ್ರಸ್ತಾವನೆಗೈದರು. ಪ್ರೀಡಾ ರೊಡ್ರ್ರಿಗಸ್ ಮತ್ತು ಲಾರೆನ್ಸ್ ಕಾರ್ಯಕ್ರಮ ನಿರೂಪಿಸಿದರು.

Kinnigoli-07011502

Comments

comments

Comments are closed.

Read previous post:
Mulki-07011501
ಮೆಟೀರಿಯಲ್ಸ್ ಕಾರ್ಯಾಗಾರ

ಮೂಲ್ಕಿ: ಇಂದಿನ ದಿನಗಳಲ್ಲಿ ಸ್ವ ಉದ್ಯೋಗ ಆರಂಭಿಸಲು ಉತ್ತಮ ಅವಕಾಶಗಳಿದ್ದು ವಿದ್ಯಾರ್ಥಿಗಳು ಉದ್ಯೋಗವನ್ನು ಅವಲಂಬಿಸುವ ಬದಲು ಸ್ವ ಉದ್ಯೋಗದತ್ತ ಹೆಚ್ಚಿನ ಆಸಕ್ತಿ ವಹಿಸಿದಲ್ಲಿ ಪ್ರಧಾನ ಮಂತ್ರಿಯವರ ಮೇಕ್ ಇನ್...

Close