16 ನೇ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ

ಕಿನ್ನಿಗೋಳಿ: ತಾಳಿಪಾಡಿ ಗುತ್ತು ಮುಂಭಾಗದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಶಿಬಿರದಲ್ಲಿ ತಾಳಿಪಾಡಿ ಗುತ್ತು ಧನಪಾಲ ಶೆಟ್ಟಿ ಸದಾಶಿವ ಗುರುಸ್ವಾಮಿ ಕೊಪ್ಪ ಹಾಗೂ ಕಟೀಲು , ಕಿನ್ನಿಗೋಳಿ, ಸುರಗಿರಿ, ಪುನರೂರು, ಮಾರಡ್ಕ ಅಯ್ಯಪ್ಪ ಸ್ವಾಮಿ ಭಕ್ತವೃಂದ ನೇತೃತ್ವದಲ್ಲಿ 16 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯು ಜ. 6 ರಂದು ನಡೆಯಿತು. ರಾತ್ರಿ ಅಯಪ್ಪ ದೀಪೋತ್ಸವವನ್ನು ಕಟೀಲು ದೇವಳದ ಅರ್ಚಕ  ಲಕ್ಷ್ಮೀನಾರಾಯಣ ಆಸ್ರಣ್ಣ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮುಂಬಯಿ ವರ್ಲಿ ಅಯ್ಯಪ್ಪ ಭಕ್ತವೃಂದದ ಮೋಹನ್ ಗುರುಸ್ವಾಮಿ, ದಯಾನಂದ ಸ್ವಾಮಿ, ವಾಸು ಗುರುಸ್ವಾಮಿ ಕೊಡ್ಯಡ್ಕ, ಪ್ರಕಾಶ್ ಸ್ವಾಮಿ ಎಕ್ಕಾರು ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಕಿನ್ನಿಗೋಳಿ ಗ್ರಾ. ಪಂ. ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಐಕಳ ಕುರುಂಬಿಲ್ ಗುತ್ತು ರಾಮಣ್ಣ ಶೆಟ್ಟಿ, ಜೋಸ್ಸಿ ಪಿಂಟೋ, ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಶ್ಯಾಮಲ, ಸುಕುಮಾರ್ ಶೆಟ್ಟಿ ತಾಳಿಪಾಡಿಗುತ್ತು , ಸತೀಶ್ಚಂದ್ರ ಹೆಗ್ಡೆ , ವಿವೇಕಾನಂದ ಗುತ್ತಕಾಡು, ನಾರಾಯಣ ಪೂಜಾರಿ, ಶರತ್ ಶೆಟ್ಟಿ , ದಿನೇಶ್ ಶೆಟ್ಟಿ ತಾಳಿಪಾಡಿಗುತ್ತು ಮತ್ತಿತರರಿದ್ದರು.

Kinnigoli-07011509

Comments

comments

Comments are closed.

Read previous post:
Kinnigoli-07011508
ಪುನರೂರು ಹೂದೋಟ ಹಾಗೂ ನಾಮಪಲಕ ಉದ್ಘಾಟನೆ

ಕಿನ್ನಿಗೋಳಿ : ಪುನರೂರು ಗುರುಬ್ರಹ್ಮ ಫ್ರೆಂಡ್ಸ್ ವತಿಯಿಂದ ಪುನರೂರು ಬ್ರಹ್ಮಮುಗೇರ ದೈವಸ್ಥಾನದಲ್ಲಿ ನಿರ್ಮಾಣಗೊಂಡ ಹೂದೋಟ ಹಾಗೂ ನೂತನ ನಾಮಪಲಕದ ಉದ್ಘಾಟನೆಯನ್ನು ಉದ್ಯಮಿ ವಾಸುದೇವ ರಾವ್ ಪುನರೂರು ನೆರವೇರಿಸಿದರು. ಈ...

Close