ಮೆಟೀರಿಯಲ್ಸ್ ಕಾರ್ಯಾಗಾರ

ಮೂಲ್ಕಿ: ಇಂದಿನ ದಿನಗಳಲ್ಲಿ ಸ್ವ ಉದ್ಯೋಗ ಆರಂಭಿಸಲು ಉತ್ತಮ ಅವಕಾಶಗಳಿದ್ದು ವಿದ್ಯಾರ್ಥಿಗಳು ಉದ್ಯೋಗವನ್ನು ಅವಲಂಬಿಸುವ ಬದಲು ಸ್ವ ಉದ್ಯೋಗದತ್ತ ಹೆಚ್ಚಿನ ಆಸಕ್ತಿ ವಹಿಸಿದಲ್ಲಿ ಪ್ರಧಾನ ಮಂತ್ರಿಯವರ ಮೇಕ್ ಇನ್ ಇಂಡಿಯಾ ಯೋಜನೆ ಯಶಸ್ವಿಗೊಳಿಸಲು ಸಾಧ್ಯವೆಂದು ಮೂಲ್ಕಿಯ ವಿಜಯ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಬೆಂಗಳೂರಿನ ಕೈಗಾರಿಕೋದ್ಯಮಿ ಜಾಕೋಬ್ ಕ್ರಾಸ್ತಾ ಹೇಳಿದರು.

ಮೂಲ್ಕಿಯ ವಿಜಯ ಕಾಲೇಜಿನ ಆಶ್ರಯದಲ್ಲಿ ಮೂಲ್ಕಿಯ ವಿಜಯ ಕಾಲೇಜಿನಲ್ಲಿ ಯುಜಿಸಿ ಪ್ರಾಯೋಜಕತ್ವದಲ್ಲಿ ಕಾಲೇಜು ಶಿಕ್ಷಕರಿಗೆ ,ಕೈಗಾರಿಕೊದ್ಯಮಿಗಳಿಗೆ ಹಾಗೂ ಪದವಿ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಜರಗಿದ ರಾಜ್ಯ ಮಟ್ಟದ ಒಂದು ದಿನದ ಕೆಮೆಸ್ತ್ರಿ ಅಡ್ವಾನ್ಸ್ ದ್ ಮೆಟೀರಿಯಲ್ಸ್ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ ಎಂ ಎ ಆರ್ ಕುಡ್ವ ವಹಿಸಿದ್ದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಆಡಳಿತಾಧಿಕಾರಿ ಡಾ ಎಚ್ ಶಾಂತರಾಮ್ ಕಾರ್ಯಗಾರವನ್ನು ಉದ್ಘಾಟಿಸಿದರು.ಸುರತ್ಕಲ್ ನ ಬಿ ಎ ಎಸ್ ಎಫ್ ಇಂಡಿಯಾ ಲಿಮಿಟೆಡ್ ನ ಹಿರಿಯ ಪ್ರಬಂಧಕ ಡಾ ಪರಾಗ್ ಕುಮಾರ್ ಠಾಂಕಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಕೆ ಆರ್ ಶಂಕರ್,ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ವಿ ಸೇತು ಮಾಧವ ಉಪಸ್ತಿತರಿದ್ದರು.
ಪ್ರಾಚಾರ್ಯ ಕೆ ಆರ್ ಶಂಕರ್ ಸ್ವಾಗತಿಸಿದರು, ವೆಂಕಟೇಶ್ ಭಟ್ ವಂದಿಸಿದರು, ರಂಜಿತಾ ನಿರೂಪಿಸಿದರು.

Prakash Suvarna

Mulki-07011501

Comments

comments

Comments are closed.

Read previous post:
Kinnigoli-06011502
ಗುತ್ತಕಾಡು ಗ್ರೀನ್ ಸ್ಟಾರ್ ಟ್ರೋಪಿ

ಕಿನ್ನಿಗೋಳಿ : ಶಾಂತಿನಗರ- ಗುತ್ತಕಾಡು ಗ್ರೀನ್ ಸ್ಟಾರ್ ಕ್ರಿಕಟರ‍್ಸ್ ಎಸೋಸಿಯೇಶನ್ ಹಾಗೂ ರೋಟರಿ ಸಮುದಾಯದಳ ಆಶ್ರಯದಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯಾಟ ಭಾನುವಾರ ಗುತ್ತಕಾಡು ಶಾಲಾ ಮೈದಾನದಲ್ಲಿ ನಡೆಯಿತು. ಯಂಗ್...

Close