ನಿಡ್ಡೋಡಿಯಲ್ಲಿ ಗ್ರಾಮೋತ್ಸವ

ಕಿನ್ನಿಗೋಳಿ : ಸಂಸ್ಕೃತಿ, ಸಂಸ್ಕಾರದ ಬೇರು ಇರುವ ಗ್ರಾಮೀಣ ಬದುಕು ನೆಮ್ಮದಿಯ ಬದುಕು. ಹಳ್ಳಿಯನ್ನು ಅಭಿವೃದ್ದಿಯ ಜೊತೆಗೆ ಉಳಿಸುವ ಕಾರ್ಯ ಮತ್ತು ಮಕ್ಕಳಲ್ಲಿ ಈ ಪ್ರಜ್ಞೆಯನ್ನು ಮೂಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಹೇಳಿದರು.
ಭಾನುವಾರ ನಿಡ್ಡೋಡಿ ಜ್ಞಾನರತ್ನ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್, ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಆರನೆಯ ವರ್ಷದ ಗ್ರಾಮೋತ್ಸವದಲ್ಲಿ ಮಾತನಾಡಿದರು.
ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ.ಸುವರ್ಣ, ಬೆಳ್ತಂಗಡಿ ವಾಣಿ ಕಾಲೇಜಿನ ಪ್ರಾಚಾರ್ಯ ಡಿ.ಯದುಪತಿ ಗೌಡ, ಎಸ್. ಎನ್. ಪಬ್ಲಿಕ್ ಸ್ಕೂಲ್‌ನ ಯದುನಾರಾಯಣ ಶೆಟ್ಟಿ, ಪುರುಷೋತ್ತಮ ದೇವಸ್ಯ, ಮಂಡ್ಯದ ಉದ್ಯಮಿ ಜಗನ್ನಾಥ ಶೆಟ್ಟಿ, ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರಾದ ಪರಿಮಳ, ಜಯಲಕ್ಷ್ಮೀ, ಪಾವನಾ, ಟ್ರಸ್ಟ್‌ನ ಆಡಳಿತಾಧಿಕಾರಿ ರವಿ ಹಾವೇರಿ, ಐಟಿಐನ ಅನುರಾಧಾ ಸಾಲಿಯಾನ್ ಉಪಸ್ಥಿತರಿದ್ದರು. ಟ್ರಸ್ಟ್‌ನ ಅಧ್ಯಕ್ಷ ಭಾಸ್ಕರ ದೇವಸ್ಯ ಸ್ವಾಗತಿಸಿದರು. ಶ್ರೀಮತಿ ಸಂಧ್ಯಾ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli-07011505 Kinnigoli-07011506

Comments

comments

Comments are closed.

Read previous post:
Kinnigoli-07011504
ಮಕ್ಕಳ, ಹವ್ಯಾಸಿ ಯಕ್ಷಗಾನ ಬಗ್ಗೆ ವಿಚಾರಗೋಷ್ಟಿ.

ಕಟೀಲು : ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಆಶ್ರಯದಲ್ಲಿ ಜನವರಿ 9ರಿಂದ 11ರತನಕ ಕಟೀಲಿನಲ್ಲಿ ಯಕ್ಷಗಾನ ಬಯಲಾಟ ಸಂಭ್ರಮ ನಡೆಯಲಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ...

Close